ಬ್ರೇಕಿಂಗ್ ನ್ಯೂಸ್
09-05-23 05:24 pm Mangalore Correspondent ಕರಾವಳಿ
ಉಳ್ಳಾಲ, ಮೇ 9 : ಮನೆಯ ಬಾಲ್ಕನಿ ಮತ್ತು ಟೆರೇಸ್ ಅಲ್ಲದೆ ಮನೆಯಂಗಳದಲ್ಲಿ ಒಣ ಹಾಕಿದ್ದ ಮಹಿಳೆಯರ ಬೆಲೆ ಬಾಳುವ ಸಲ್ವಾರ್, ಒಳ ಉಡುಪುಗಳನ್ನ ಕದ್ದೊಯ್ದಿದ್ದಲ್ಲದೆ, ಮನೆ ಬಾಗಿಲ ಲಾಕರ್ ಗೆ ಕಿಡಿಗೇಡಿಗಳು ಕಾಂಡೋಮ್ ಸಿಕ್ಕಿಸಿ ವಿಕೃತಿ ಮೆರೆದ ಘಟನೆ ನಿನ್ನೆ ರಾತ್ರಿ ಉಳ್ಳಾಲ ಬೈಲಿನಲ್ಲಿ ನಡೆದಿದೆ.
ಉಳ್ಳಾಲ ಬೈಲಿನ ಗೇರು ಕೃಷಿ ಸಂಶೋಧನಾ ಕೇಂದ್ರದ ಬಳಿಯ ಸುಂದರ್ ಎನ್ನುವವರ ಮನೆ ಮೇಲಿರುವ ಬಾಡಿಗೆ ನಿವಾಸಿಗಳ ಬೆಲೆ ಬಾಳುವ ಬಟ್ಟೆಗಳನ್ನ ಯಾರೋ ವಿಕೃತರು ಕಳವುಗೈದಿದ್ದಾರೆ. ಬಾಡಿಗೆ ಮನೆಯ ಮಹಿಳೆ ಮತ್ತು ಆಕೆಯ ಮಗಳ ಬೆಲೆ ಬಾಳುವ ಸಲ್ವಾರ್, ಮತ್ತು ಒಳ ಉಡುಪುಗಳನ್ನ ಬಾಲ್ಕನಿ ಮತ್ತು ಟೆರೇಸ್ ಮೇಲೆ ನಿನ್ನೆ ಸಂಜೆ ಒಣ ಹಾಕಲಾಗಿತ್ತು. ಇಂದು ಬೆಳಗ್ಗೆ ಬಾಡಿಗೆ ಮನೆ ಯಜಮಾನ ಎದ್ದಾಗ ಮುಖ್ಯ ಬಾಗಿಲಿನ ಲಾಕರ್ ಗೆ ಕಾಂಡೋಮನ್ನ ಸಿಕ್ಕಿಸಿರುವುದು ಬೆಳಕಿಗೆ ಬಂದಿದೆ. ಸ್ವಲ್ಪ ಹೊತ್ತಲ್ಲಿ ಒಣ ಹಾಕಲಾಗಿದ್ದ ಮಹಿಳೆಯರ ಉಡುಪುಗಳು ಕಳವಾಗಿದ್ದು ತಿಳಿದಿದೆ. ವಿಶೇಷವೆಂದರೆ ಬಾಡಿಗೆ ಯಜಮಾನನ ಬೆಲೆ ಬಾಳುವ ಶರ್ಟ್, ಟಿ ಶರ್ಟ್, ಪ್ಯಾಂಟ್ ಗಳನ್ನ ಬಿಟ್ಟು ಹೋಗಿದ್ದಾರೆ. ಪಕ್ಕದ ಮನೆಯಿಂದಲೂ ಮಹಿಳೆಯರ ಉಡುಪು, ಒಳ ಉಡುಪುಗಳನ್ನ ಕದ್ದೊಯ್ಯಲಾಗಿದೆ.

ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುವ ಕುಟುಂಬದ ಸುಮಾರು 7 ಸಾವಿರ ಮೌಲ್ಯದ ಉಡುಪನ್ನ ಕಳವುಗೈಯಲಾಗಿದೆ. ಮೇಲ್ನೋಟಕ್ಕೆ ಯಾರೋ ವಿಕೃತ ಕಾಮಿಗಳೇ ಈ ಕೃತ್ಯ ನಡೆಸಿರುವುದಾಗಿ ಶಂಕಿಸಲಾಗಿದೆ. ಸಿಸಿ ಕ್ಯಾಮೆರಾ, ಸಾಕು ನಾಯಿಗಳಿಲ್ಲದ ಮನೆಯವರು ತಮ್ಮ ಅಮೂಲ್ಯವಾದ ಉಡುಪುಗಳನ್ನ ಹೊರಗಡೆ ಒಣ ಹಾಕುವುದು ಕಷ್ಟ ಆಗಿದೆ.
Mangalore Miscreants steal womens undergarments and costly dress, place condoms on house main door and flee in Ullal.
23-09-26 11:02 pm
HK News Desk
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
24-09-26 09:42 pm
HK News Staffer
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
24-09-26 10:46 pm
HK News Desk
ಬಂಟ್ವಾಳ ; ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಹ...
24-09-26 06:26 pm
ಬಂಗಾಳ ವಾಯುಭಾರ ಕುಸಿತ ; ಕರಾವಳಿ, ಮಲೆನಾಡು, ದಕ್ಷಿಣ...
24-09-26 05:55 pm
ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಕ್ರಿಕೆಟಿಗ ರವಿ ಶಾಸ...
23-09-26 10:47 pm
ಉತ್ತರಾಖಂಡದ ಯಮುನೋತ್ರಿಯಲ್ಲಿ ಕುಂಪಲದ ವ್ಯಕ್ತಿ ಹೃದಯ...
23-09-26 09:55 am
24-09-26 05:10 pm
HK News Staffer
ಸೈಬರ್ ಖದೀಮರ ಹೊಸ ಹೊಸ ತಂತ್ರ: ಒಂದೇ ದಿನ ಮಂಗಳೂರಿನಲ...
24-09-26 11:10 am
bus fire, Greater Noida: ಚಲಿಸುತ್ತಿದ್ದ ಸ್ಲೀಪರ್...
24-09-26 10:09 am
ಶಿರ್ವದಲ್ಲಿ ಭಾರೀ ಪ್ರಮಾಣದ ಗಾಂಜಾ, ಡ್ರಗ್ಸ್ ವಶಕ್ಕೆ...
23-09-26 09:28 pm
ಕರ್ತವ್ಯ ಲೋಪ, ಲಂಚಬಾಕತನ, ಅನುಚಿತ ವರ್ತನೆ ಬಗ್ಗೆ ದೂ...
23-09-26 09:24 pm