ಬ್ರೇಕಿಂಗ್ ನ್ಯೂಸ್
09-05-23 04:51 pm Mangalore Correspondent ಕರಾವಳಿ
ಮಂಗಳೂರು, ಮೇ 9: ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಳ್ಪದ ಕೇನ್ಯ ಕಣ್ಕಲ್ ಸಮೀಪದ ಕುಮಾರಧಾರ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿರುವ ಸತೀಶ್ ಅಮ್ಮಣ್ಣಾಯ ಎಂಬವರ ಪುತ್ರಿಯರಾದ ಹಂಸಿಕಾ (15), ಆವಂತಿಕಾ (11) ಮೃತರು.
ನದಿ ನೀರಲ್ಲಿ ಮಕ್ಕಳು ನಾಪತ್ತೆಯಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಮತ್ತು ಸ್ಥಳೀಯರಿಂದ ಹುಡುಕಾಟ ನಡೆಸಿದಾಗ ಮಕ್ಕಳ ಮೃತದೇಹ ಸಿಕ್ಕಿವೆ.
ಕೇನ್ಯ ಉದಯ ಅಮ್ಮಣ್ಣಾಯ ಅವರ ಸಹೋದರ ಸತೀಶ್ ಅಮ್ಮಣ್ಣಾಯ ಅವರು ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದಾರೆ. ಸತೀಶ್ ಅವರ ಇಬ್ಬರು ಹೆಣ್ಣು ಮಕ್ಕಳು ಶಾಲೆಗೆ ರಜೆ ಇದ್ದುದರಿಂದ ಬಳ್ಪದ ಚಿಕ್ಕಪ್ಪನ ಮನೆಗೆ ಸೋಮವಾರ ಬೆಳಿಗ್ಗೆ ಬಂದಿದ್ದರು.
ಮನೆ ಸಮೀಪವೇ ಇರುವ ಕುಮಾರಧಾರ ನದಿಗೆ ಸಂಜೆ ವೇಳೆಗೆ ಕುಟುಂಬದವರ ಜೊತೆಗೆ ತೆರಳಿದ್ದರು. ಈ ವೇಳೆ ಹೆಣ್ಣು ಮಕ್ಕಳಿಬ್ಬರು ನೀರಿಗೆ ಇಳಿದಿದ್ದು, ಮುಳುಗಿ ನಾಪತ್ತೆಯಾಗಿದ್ದರು.
ಇದು ಗಮನಕ್ಕೆ ಬರುತ್ತಿದ್ದಂತೆಯೇ ಮನೆಮಂದಿ ನೀರಿನಲ್ಲಿ ಹುಡುಕಿದ್ದರು. ಸ್ಥಳೀಯ ಈಜುಗಾರರೂ ನದಿ ನೀರಲ್ಲಿ ಮುಳುಗಿ ಹುಡುಕಾಟ ನಡೆಸಿದ್ದರು. ಸುಳ್ಯದಿಂದ ಅಗ್ನಿಶಾಮಕ ದಳವನ್ನು ಕರೆಸಿ ನೀರಿನಲ್ಲಿ ಶೋಧ ನಡೆಸಲಾಯಿತು. ರಾತ್ರಿ ವೇಳೆ ಇಬ್ಬರ ಮೃತದೇಹಗಳು ಪತ್ತೆಯಾದವು.
ಸುಬ್ರಹ್ಮಣ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ‘ನದಿಯ ಆಳ ತಿಳಿಯದೇ ಬಾಲಕಿಯರು ನದಿಗೆ ಇಳಿದಿರಬಹುದು. ಕಾಲು ಜಾರಿ ನೀರಲ್ಲಿ ಮುಳುಗಿ ಮೃತಪಟ್ಟಿರಬಹುದು’ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
Girls drowned in river, Young sisters from Bangalore drowned in Kumaradhara river at Kadaba in Sullia who had come on summer vacations to Mangalore.
23-09-26 11:02 pm
HK News Desk
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
24-09-26 09:42 pm
HK News Staffer
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
24-09-26 10:46 pm
HK News Desk
ಬಂಟ್ವಾಳ ; ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಹ...
24-09-26 06:26 pm
ಬಂಗಾಳ ವಾಯುಭಾರ ಕುಸಿತ ; ಕರಾವಳಿ, ಮಲೆನಾಡು, ದಕ್ಷಿಣ...
24-09-26 05:55 pm
ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಕ್ರಿಕೆಟಿಗ ರವಿ ಶಾಸ...
23-09-26 10:47 pm
ಉತ್ತರಾಖಂಡದ ಯಮುನೋತ್ರಿಯಲ್ಲಿ ಕುಂಪಲದ ವ್ಯಕ್ತಿ ಹೃದಯ...
23-09-26 09:55 am
24-09-26 05:10 pm
HK News Staffer
ಸೈಬರ್ ಖದೀಮರ ಹೊಸ ಹೊಸ ತಂತ್ರ: ಒಂದೇ ದಿನ ಮಂಗಳೂರಿನಲ...
24-09-26 11:10 am
bus fire, Greater Noida: ಚಲಿಸುತ್ತಿದ್ದ ಸ್ಲೀಪರ್...
24-09-26 10:09 am
ಶಿರ್ವದಲ್ಲಿ ಭಾರೀ ಪ್ರಮಾಣದ ಗಾಂಜಾ, ಡ್ರಗ್ಸ್ ವಶಕ್ಕೆ...
23-09-26 09:28 pm
ಕರ್ತವ್ಯ ಲೋಪ, ಲಂಚಬಾಕತನ, ಅನುಚಿತ ವರ್ತನೆ ಬಗ್ಗೆ ದೂ...
23-09-26 09:24 pm