ಬ್ರೇಕಿಂಗ್ ನ್ಯೂಸ್
08-05-23 10:26 pm Mangalore Correspondent ಕರಾವಳಿ
ಉಳ್ಳಾಲ, ಮೇ 8 : ಹನುಮನ ಜನ್ಮಭೂಮಿಯಲ್ಲಿ ಬಜರಂಗದಳ ನಿಷೇಧ ಸಾಧ್ಯವೇ..?ಬಜರಂಗಿಗಳನ್ನ ಮುಟ್ಟುವ ಧೈರ್ಯ ,ತಾಕತ್ತು ಕಾಂಗ್ರೆಸ್ಗೆ ಇದೆಯೇ ಎಂದು ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷೆ,ಕೊಯಮತ್ತೂರು ಶಾಸಕಿ ವಾನತಿ ಶ್ರೀನಿವಾಸನ್ ಸವಾಲು ಹಾಕಿದರು.
ತೊಕ್ಕೊಟ್ಟು ಒಳಪೇಟೆಯ ಡಾ. ಬಿ.ಆರ್.ಅಂಬೇಡ್ಕರ್ ಮೈದಾನದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ದೇಶ ಮೊದಲು ಎಂದು ಹೇಳುವ ಪಕ್ಷ ಬಿಜೆಪಿ ಮಾತ್ರ ಇತರ ಪಕ್ಷಗಳಿಗೆ ಅದರ ಮಹತ್ವವೂ ಗೊತ್ತಿಲ್ಲ. ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಅವರನ್ನು ಮಂಗಳೂರಿನಿಂದ ಬೆಂಗಳೂರಿಗೆ ಕಳುಹಿಸಲೇ ಬೇಕು ಎಂದರು.ಬಿಜೆಪಿಯ ಮಹಾನಾಯಕ ಕೇಂದ್ರದಲ್ಲಿ ನಮ್ಮ ರಕ್ಷಣೆಗೆ ನಿಂತಿದ್ದಾರೆ. ಬಜರಂಗದಳವನ್ನು ನಿಷೇಧಿಸಲು ಹೊರಟ ಕಾಂಗ್ರೆಸ್ ಅದರ ತಂಟೆಗೆ ಹೋದರೆ ಬಿಡೋದು ಯಾರು ಎಂದು ಪ್ರಶ್ನಿಸಿದರು. ಬಿಜೆಪಿಯಲ್ಲಿ ಮಾತ್ರ ನಾರಿಶಕ್ತಿಗೆ ಮಹತ್ವ ಸಿಕ್ಕಿದ್ದು ದೇಶದಲ್ಲಿ ಮೊದಲ ಬಾರಿಗೆ ನಿರ್ಮಲಾ ಸೀತಾರಾಮನ್, ದಿ. ಸುಶ್ಮಾ ಸ್ವರಾಜ್, ಶೋಭಾ ಕರಂದ್ಲಾಜೆ ಮೊದಲಾದ ಮಹಿಳಾ ಶಕ್ತಿಗೆ ಮೊದಲ ಬಾರಿ ಈ ದೇಶದ ಬಿಜೆಪಿ ಸರಕಾರ ನೀಡಿದ ಅಧಿಕಾರವನ್ನು ಜವಬ್ದಾರಿಯುತವಾಗಿ ನಿರ್ವಹಿಸಿದ್ದಾರೆ ಎಂದರು.
ಈ ಸಂದರ್ಭ ಕಾಂಗ್ರೆಸ್ ನ ಹಿರಿಯ ನಾಯಕಿಯರಾದ ಸತ್ಯವತಿ, ವಿನಯ, ಶೋಭಾ ಸೇರಿದಂತೆ ಮೂವತ್ತು ಮಂದಿ ಮಹಿಳೆಯರು ಬಿಜೆಪಿಗೆ ಸೇರ್ಪಡೆಗೊಂಡರು.
ಮಂಗಳೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಮಾತನಾಡಿ ಹಕ್ಕುಪತ್ರ ವಿತರಣೆ ತಡೆಯುವ ಕ್ರಮ ಈ ವಿಧಾನಸಭಾ ಕ್ಷೇತ್ರದ ಶಾಸಕರಿಂದ ಮಾತ್ರ ಆಗಿದ್ದು ಪಂಚಾಯಿತಿಯಲ್ಲಿ ನಿರ್ವಸಿತರ ಪಟ್ಟಿ ಇದ್ದು ಎಲ್ಲೂ ಕೂಡಾ ಕಾಂಗ್ರೆಸ್ ಶಾಸಕರು ನ್ಯಾಯ ಒದಗಿಸದೆ ತಾರತಮ್ಯ ನೀತಿಯೇ ಮಾಡಿದ್ದು ಅವರಿಗೆ ಅದು ಮುಳುವಾಗಲಿದೆ ಎಂದರು.
ಸಮಾವೇಶಕ್ಕು ಮುನ್ನ ತೊಕ್ಕೊಟ್ಟು ಒಳಪೇಟೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆಯರು ಕಾಲ್ನಡಿಗೆ ಜಾಥಾದಲ್ಲಿ ಮತ ಯಾಚನೆ ನಡೆಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಬಿಜೆಪಿ ಮಹಿಳಾ ಮೋರ್ಚದ ಜಿಲ್ಲಾಧ್ಯಕ್ಷೆ ಧನಲಕ್ಷ್ಮಿ ಗಟ್ಟಿ,ರವೀಶ್ ತಂತ್ರಿ ಕುಂಟಾರು, ಸಂತೋಷ್ ಕುಮಾರ್ ರೈ ಬೋಳಿಯಾರ್, ಮೋನಪ್ಪ ಭಂಡಾರಿ, ರವೀಂದ್ರ ಶೆಟ್ಟಿ ಉಳಿದೊಟ್ಟು ಮೊದಲಾದವರು ಇದ್ದರು.
Mangalore Is banning Bagarang dal ever possible in India by congress slams BJP Morcha Vanati srinivas in Ullal.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm