ಬ್ರೇಕಿಂಗ್ ನ್ಯೂಸ್
07-05-23 08:34 pm Mangalore Correspondent ಕರಾವಳಿ
ಮಂಗಳೂರು, ಮೇ 7: ಚುನಾವಣೆ ಪ್ರಚಾರಕ್ಕೆ ಬಂದಿರುವ ಪ್ರಧಾನಿ ಮೋದಿ ಹೋದಲ್ಲಿ ಬಂದಲ್ಲಿ ದೇಶ ಅಪಾಯದಲ್ಲೆ, ದೇಶದ ಸುರಕ್ಷೆ ಆತಂಕದಲ್ಲಿದೆ, ಸನಾತನ ಧರ್ಮಕ್ಕೆ ತೊಂದರೆಯಾಗಿದೆ ಎಂದು ಹೇಳುತ್ತಿದ್ದಾರೆ. ಇವರ ಆಡಳಿತದಲ್ಲಿ ದೇಶದ ಭದ್ರತೆಗೆ ತೊಂದರೆಯಾಗಿದ್ದರೆ ಅದಕ್ಕೆ ಇವರೇ ಕಾರಣ. ನಿಜಕ್ಕಾದರೆ, ದೇಶದಲ್ಲಿ ಜನರು ಭಯದಲ್ಲಿದ್ದಾರೆ. ಬಿಜೆಪಿ ಆಡಳಿತದ ಭ್ರಷ್ಟಾಚಾರ, ಬೆಲೆಯೇರಿಕೆಯಿಂದಾಗಿ ಜನರು ಜೀವಿಸುವುಕ್ಕಾಗದೆ ಭಯದಲ್ಲಿದ್ದಾರೆ ಎಂದು ಕಾಂಗ್ರೆಸ್ ಜನರಲ್ ಸೆಕ್ರಟರಿ ಪ್ರಿಯಾಂಕ ಗಾಂಧಿ ಲೇವಡಿ ಮಾಡಿದ್ದಾರೆ.
ಮುಲ್ಕಿ – ಮೂಡುಬಿದ್ರೆ ಕ್ಷೇತ್ರ ವ್ಯಾಪ್ತಿಯ ಕೊಳ್ನಾಡಿನಲ್ಲಿ ಬೃಹತ್ ಜನಸ್ತೋಮ ಉದ್ದೇಶಿಸಿ ಪ್ರಚಾರ ನಡೆಸಿದ ಪ್ರಿಯಾಂಕ, ಬಿಜೆಪಿ ನಾಯಕರ ಹೆಸರೆತ್ತದೆ ವಾಗ್ದಾಳಿ ನಡೆಸಿದ್ದಾರೆ. ಮೊನ್ನೆಯಷ್ಟೇ ಮೋದಿ ಇದೇ ಜಾಗಕ್ಕೆ ಬಂದಿದ್ದರು. ದೇವರ ಹೆಸರಲ್ಲಿ ಮತ ಯಾಚನೆ ಮಾಡಿದ್ದಾರೆ. ಆದರೆ ನಿಮ್ಮ ಭವಿಷ್ಯಕ್ಕಾಗಿ ಮೋದಿ ಏನು ಯೋಜನೆ ಮಾಡಿದ್ದಾರೆ. ಇವರು ಸತ್ಯ ಹೇಳುತ್ತಿದ್ದಾರಂದ್ರೆ, ಯಾಕೆ ಭಯ ಪಡಬೇಕು. ನಿರುದ್ಯೋಗದಿಂದ ಬಳಲುತ್ತಿರುವ ಜನರಿಗೆ ಉದ್ಯೋಗ ಭದ್ರತೆ ಬಗ್ಗೆ ಹೇಳಿದ್ದಾರೆಯೇ, ಸಾವಿಗೆ ಶರಣಾಗುತ್ತಿರುವ ರೈತರಿಗೆ ಅಭಯ ನೀಡಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಸರ್ಕಾರದಲ್ಲಿ ಜನರಿಗಾಗಿ ಏನೂ ಮಾಡದೇ ಇರುವುದರಿಂದ ಭಯ ಎದುರಿಸುವ ಸ್ಥಿತಿಯಾಗಿದೆ. ದಿನವಹಿ ಬಳಸುವ ವಸ್ತುಗಳ ದರ ಏರಿಕೆಯಾಗಿದೆ, ಜನಸಾಮಾನ್ಯ ಹಿಡಿಶಾಪ ಹಾಕುತ್ತಿದ್ದಾನೆ. ಅದಕ್ಕಾಗಿ ಆತಂಕವಾದ ಬಗ್ಗೆ ಹೇಳುತ್ತಿದ್ದಾರೆ ಎಂದು ಹೇಳಿದ ಪ್ರಿಯಾಂಕ ಗಾಂಧಿ, ದೇಶದಲ್ಲಿ 6 ಸಾವಿರಕ್ಕೂ ಹೆಚ್ಚು ಜನ ಉದ್ಯೋಗ ಇಲ್ಲದೆ ಆತ್ಮಹತ್ಯೆ ಮಾಡಿದ್ದಾರೆ. ನಾಲ್ಕು ಸಾವಿರ ರೈತರು ಸಾವಿಗೆ ಶರಣಾಗಿದ್ದಾರೆ. ಜನರು ತಮ್ಮ ಕೈಯಲ್ಲಿ ಹಣ ಇಲ್ಲದೆ ಜೀವನ ನಡೆಸುವುದಕ್ಕೇ ಭಯಪಡುವ ಸ್ಥಿತಿ ಎದುರಾಗಿದೆ ಎಂದರು.
ಇವತ್ತು ದೇಶಕ್ಕೇನು ತೊಂದರೆ ಆಗಿಲ್ಲ, ನಿಮ್ಮಿಂದಾಗಿ ಜನರಿಗೆ ಆತಂಕ ಉಂಟಾಗಿದೆ. ಮಂಗಳೂರಿನಲ್ಲಿ ನಾಲ್ಕು ರಾಷ್ಟ್ರೀಕೃತ ಬ್ಯಾಂಕುಗಳಿದ್ದವು, ಅವು ಎಲ್ಲಿ ಹೋದವು. ಇಂದಿರಾ ಗಾಂಧಿ ಸರ್ಕಾರ ಇದ್ದಾಗ ಮಂಗಳೂರಿನಲ್ಲಿ ಏರ್ಪೋರ್ಟ್ ಮತ್ತು ಬಂದರು ಮಾಡಿದ್ದರು, ಅವು ಈಗ ಯಾರ ಕೈಯಲ್ಲಿದೆ. ಈಗ ಏರ್ಪೋರ್ಟ್, ಬಂದರು ಯಾರ ಕೈಗೆ ಹೋಗಿದೆ, ಅಲ್ಲಿನ ಕೆಲಸ ಯಾರಿಗೋಗಿದೆ? ಎಲ್ಲವನ್ನೂ ಅದಾನಿ ಕೈಗೆ ಕೊಟ್ಟಿದ್ದಾರೆ, ಮೋದಿ ಆಡಳಿತದಿಂದಾಗಿ ಜನರಲ್ಲಿ ಭಯ ಆವರಿಸಿದೆ. ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಪೆಟ್ರೋಲ್, ಗ್ಯಾಸ್, ಇತರೇ ಅವಶ್ಯಕ ವಸ್ತುಗಳಿಗೆಲ್ಲ ದರ ಏರಿಕೆಯಾಗಿದೆ. ಹೀಗಾಗಿ ಜನರು ಭವಿಷ್ಯದ ಬಗ್ಗೆ ಭಯಕ್ಕೆ ಒಳಗಾಗಿದ್ದಾರೆ.
ಧರ್ಮದ ಹೆಸರಲ್ಲಿ ಮತ ಕೇಳಿ ಮೋಸ
ವಸ್ತುಸ್ಥಿತಿ ಹೀಗಿದ್ದರೂ, ಚುನಾವಣೆ ಸಮಯದಲ್ಲಿ ಅಭಿವೃದ್ಧಿ ವಿಚಾರ ಬಿಟ್ಟು ಬಿಜೆಪಿ ನಾಯಕರು ಧರ್ಮದ ಬಗ್ಗೆ ಕೇಳುತ್ತಿದ್ದಾರೆ. ಇವರಿಗೆ ಬೇರೇನು ಬೇಕಾಗಿಲ್ಲ. ದೇಶ, ಧರ್ಮದ ಹೆಸರಲ್ಲಿ ಮತ ಕೇಳಿದರೆ ಸುಲಭವಾಗಿ ಗೆಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಈ ಹಿಂದೆ ನೋಟ್ ಬ್ಯಾನ್ ಮಾಡಿ ಜನರನ್ನು ಆತಂಕಕ್ಕೆ ತಳ್ಳಿದ್ದರು. ಜಗತ್ತಿನಲ್ಲಿ ಆರ್ಥಿಕತೆ ಕುಸಿದಿದೆ, ನಮ್ಮದು ಮಾತ್ರ ಉಳಿದಿದೆ ಎಂದು ಹೇಳಿದ್ದರು. ಇದೇ ವೇಳೆ, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಇದೆ, ಅಲ್ಲಿ ಪೆಟ್ರೋಲ್, ಗ್ಯಾಸ್ ಕಡಿಮೆ ದರಕ್ಕೆ ಕೊಡುತ್ತಿದ್ದಾರೆ ಹೇಗೆ ಎಂದು ಪ್ರಶ್ನೆ ಮಾಡಿದರು.
ಕರ್ನಾಟಕದಲ್ಲಿ ಬಿಜೆಪಿ ಆಡಳಿತ ಭ್ರಷ್ಟಾಚಾರದಿಂದಾಗಿ ಒಂದೂವರೆ ಲಕ್ಷ ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ ಪ್ರಿಯಾಂಕ ಗಾಂಧಿ, ರಾಜ್ಯದ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ನಾಯಕರು ಮಾತಾಡಲ್ಲ. ಭ್ರಷ್ಟಾಚಾರದ ಕಾರಣಕ್ಕೆ ಎರಡೆರಡು ಮುಖ್ಯಮಂತ್ರಿಯನ್ನು ಬದಲು ಮಾಡಿದ್ದರು. ಕರ್ನಾಟಕಕ್ಕೆ ಬಂದ ಕೇಂದ್ರ ನಾಯಕರು ಇಲ್ಲಿನ ನಂದಿನಿಯನ್ನು ಗುಜರಾತಿ ಅಮುಲ್ ಜೊತೆಗೆ ವಿಲೀನ ಮಾಡೋದಾಗಿ ಹೇಳಿದ್ದಾರೆ. ಪ್ರತಿ ಬಾರಿ ಚುನಾವಣೆ ಸಮಯದಲ್ಲಿ ಮಾತ್ರ ಜನರಿಗೆ ಆಡಳಿತದ ಬದಲಾವಣೆಗೆ ಅವಕಾಶ ಇರೋದು. ಇದಕ್ಕಾಗಿ ದೇಶ, ಧರ್ಮದ ಮಾತಿಗೆ ಮರುಳಾಗದೆ ಜನರು ಚಿಂತಿಸಿ ಮತ ಹಾಕಬೇಕಾಗಿದೆ ಎಂದರು.
ತುಳು ಭಾಷೆ ಎಂಟನೇ ಪರಿಚ್ಛೇದಕ್ಕೆ
ನಾವು ಹೇಳಿದ ಗ್ಯಾರಂಟಿ ಸ್ಕೀಮ್ ಛತ್ತೀಸ್ಗಢ, ರಾಜಸ್ಥಾನದಲ್ಲಿ ಪೂರೈಸಿದ್ದೇವೆ. ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು ನಮ್ಮ ಮೊದಲ ಆದ್ಯತೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ನಿರುದ್ಯೋಗಿಗಳಿಗೆ ಯುವನಿಧಿ, ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಡುತ್ತೇವೆ. ಅಂಗನವಾಡಿ ಕಾರ್ಯಕರ್ತೆಯಾಗಿ ನಿವೃತ್ತರಾದವರಿಗೆ ತಿಂಗಳಿಗೆ ಮೂರು ಸಾವಿರ ಕೊಡುತ್ತೇವೆ. ತುಳು ಭಾಷೆಯನ್ನು ಸಂವಿಧಾನಕ್ಕೆ ಸೇರಿಸುವ ಪ್ರಸ್ತಾಪ ಈಡೇರಿಸುತ್ತೇವೆ.
ಮೀನುಗಾರರಿಗೆ 10 ಲಕ್ಷ ವಿಮೆ ನೀಡುವುದು, ಡೀಸೆಲ್ ಸಬ್ಸಿಡಿ 25 ಲೀಟರ್ ಗೆ ಹೆಚ್ಚಿಸುವುದು, ಕರಾವಳಿಯನ್ನು ಗಾರ್ಮೆಂಟ್ ಇಂಡಸ್ಟ್ರೀಸ್ ಹಬ್ ಮಾಡುವುದು, ಮಂಗಳೂರಿನ ಪ್ರವಾಸೋದ್ಯಮ ಉತ್ತೇಜನಕ್ಕೆ ನೀಡಲು ದುಬೈನಲ್ಲಿದ್ದಂತೆ ಗೋಲ್ಡನ್ ಡೈಮಂಡ್ ಪಾಥ್ ಮಾಡ್ತೀವಿ. ಬೆಂಗಳೂರು ರೀತಿಯಲ್ಲೇ ಮಂಗಳೂರನ್ನು ಐಟಿ ಹಬ್ ಮಾಡುತ್ತೇವೆ ಎಂದು ಘೋಷಣೆ ಮಾಡಿದರು.
ನನ್ನನ್ನು ಜನರು ಇಂದಿರಾ ಗಾಂಧಿ ಮೊಮ್ಮಗಳು ಎಂದು ಸ್ಮರಿಸುತ್ತಾರೆ. ಯಾಕಂದ್ರೆ, ಇಂದಿರಮ್ಮ ಜನಪರ ಕೆಲಸ ಮಾಡಿದ್ದಕ್ಕಾಗಿ ಜನ ನೆನಪಿಸುತ್ತಾರೆ. ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಬಿಜೆಪಿ ನಾಯಕರು ಸುಳ್ಳುಗಳನ್ನು ಹೇಳಿಯೇ ಜನರನ್ನು ವಂಚಿಸುತ್ತಿದ್ದಾರೆ ಎಂದು ಹೇಳಿದರು. ಮೊದಲಿಗೆ ತುಳುವಿನಲ್ಲಿ ಮಾತೆರೆಗ್ಲಾ ಸೊಲ್ಮೆಲು (ಎಲ್ಲರಿಗೂ ನಮಸ್ಕಾರ) ಎಂದು ಹೇಳಿ ಪ್ರಿಯಾಂಕ ಭಾಷಣ ಆರಂಭಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸಿಗ ಜನಾರ್ದನ ಪೂಜಾರಿ, ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸಮಿತಿ ಸದಸ್ಯ ಡಾ.ಅಜಯ್ ಕುಮಾರ್, ಮಂಜುನಾಥ ಭಂಡಾರಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಅಶೋಕ್ ಕೊಡವೂರು, ಹರೀಶ್ ಕುಮಾರ್, ಮೂಡುಬಿದ್ರೆ ಅಭ್ಯರ್ಥಿ ಮಿಥುನ್ ರೈ, ಮಂಗಳೂರು ಉತ್ತರ ಅಭ್ಯರ್ಥಿ ಇನಾಯತ್ ಆಲಿ, ಕಾರ್ಯಕಾರಿಣಿ ಸದಸ್ಯ ಸೇರಿದಂತೆ ಕರಾವಳಿ ಭಾಗದ ನಾಯಕರು ಇದ್ದರು.
e BJP government failed to generate employment, instead, people had lost their jobs. “If the Congress government comes to power we will not allow Nandini to merge with Amul. BJP is busy looting taxpayers money slams congress AICC general secretary Priyanka Gandhi Vadra in Mangalore
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm