ಬ್ರೇಕಿಂಗ್ ನ್ಯೂಸ್
04-05-23 10:52 pm HK News Desk ಕರಾವಳಿ
ಪುತ್ತೂರು, ಮೇ 4: ಪುತ್ತೂರಿನಲ್ಲಿ ದಿನದಿಂದ ದಿನಕ್ಕೆ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಪರ ಜನ ಬೆಂಬಲ ಹೆಚ್ಚುತ್ತಿದೆ. ಬುಧವಾರ ಸಂಜೆ ವಿಟ್ಲದಲ್ಲಿ ನಡೆಸಿದ ರೋಡ್ ಶೋದಲ್ಲಿ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಸೇರಿದ್ದು, ಇತಿಹಾಸದಲ್ಲಿ ದಾಖಲಾಯಿತು. ವಿಟ್ಲ ಪೇಟೆಯಲ್ಲಿ ಎರಡು ಕಿಮೀ ಉದ್ದಕ್ಕೆ ನಡೆದ ರೋಡ್ ಶೋದಲ್ಲಿ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದ್ದು, ಕೇಸರಿ ಕಲರವ ಮೂಡಿಸಿತ್ತು.
ವಿಟ್ಲ ಮುಖ್ಯ ಪೇಟೆಯಲ್ಲಿ ಕಾರ್ಯಕರ್ತರ ಮತ್ತು ಅರುಣ್ ಪುತ್ತಿಲರ ರೋಡ್ ಶೋ ಮುಗಿದು ಅರಮನೆ ಗದ್ದೆಯಲ್ಲಿ ಸಂಜೆ ಹೊತ್ತಿಗೆ ಸಮಾವೇಶ ನಡೆಯಿತು. ರೋಡ್ ಶೋದಲ್ಲಿ ಬೇರಾವುದೇ ಭಾಷಣಕಾರರು ಇರಲಿಲ್ಲ. ಸ್ಟಾರ್ ಕ್ಯಾಂಪೇನರ್ ಕೂಡ ಇರಲಿಲ್ಲ. ಅರುಣ್ ಪುತ್ತಿಲರೇ ಎಲ್ಲರಿಗೂ ಸ್ಟಾರ್ ಆಗಿದ್ದರು.
ಸಮಾವೇಶ ಉದ್ದೇಶಿಸಿ ಮಾತನಾಡಿದ ಅರುಣ್ ಪುತ್ತಿಲ, ಅಧಿಕಾರಕ್ಕಾಗಿ ಆಸೆ ಪಟ್ಟವನಲ್ಲ. ಕಾಂಗ್ರೆಸ್ ಹಾಗೂ ಎಸ್ಡಿಪಿಐ ವಿರುದ್ಧ ಹೋರಾಟದ ಭಾಗವಾಗಿ ಕಣಕ್ಕಿಳಿಯಬೇಕೆಂಬ ಕಾರ್ಯಕರ್ತರ ಆಶಯದಂತೆ ಸ್ಪರ್ಧಿಸುತ್ತಿದ್ದೇನೆ. ಇದರ ಹೊರತಾಗಿ ಯಾವುದೇ ಪಕ್ಷದ ವಿರುದ್ಧ ಹೋರಾಟ ಇದಲ್ಲ ಎಂದು ಹೇಳಿದರು. ಸೌಮ್ಯಾ ಭಟ್, ಅಕ್ಷತಾ ಕೊಲೆ ಪ್ರಕರಣ, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ನಮ್ಮ ಕಣ್ಣ ಮುಂದೆ ಹಾದು ಬರುತ್ತದೆ. ಹಿಂದುತ್ವದ ಹೆಸರಿನಲ್ಲಿ ಸ್ಪರ್ಧಿಸುತ್ತಿದ್ದೇನೆ. ಆರೆಸ್ಸೆಸ್ ಹಿರಿಯರು, ಮಠಾಧೀಶರು, ಸಂಘ ಪರಿವಾರದ ಕಾರ್ಯಕರ್ತರ ಆಶಯದಂತೆ ಸ್ಪರ್ಧಿಸುತ್ತಿದ್ದೇನೆ. ನೀವೆಲ್ಲ ನನ್ನ ಜೊತೆಗಿದ್ದೀರೆಂದು ನಂಬಿಕೊಂಡಿದ್ದೇನೆ ಎಂದು
ಭಾವುಕರಾದರು.
ಸಮಾವೇಶದಲ್ಲಿ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಧರ್ಮ- ಅಧರ್ಮದ ನಡುವಿನ ಹೋರಾಟ ಇದೆಂದು ಭಾಸವಾಗುತ್ತಿದೆ. ಪಕ್ಷದ ಪ್ರಮುಖರು ಅವರ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದು ಬಿಟ್ಟು ಅರುಣ್ ಪುತ್ತಿಲರ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇದು ಬೇಸರದ ಸಂಗತಿ. ಅರುಣ ಪುತ್ತಿಲರಿಗೆ ದೊರಕಿದ ಅಪಾರ ಪ್ರಮಾಣದ ಜನಬೆಂಬಲ ನೋಡಿದಾಗ ಅಚ್ಚರಿಯಾಗುತ್ತದೆ. ಇದೇ ರೀತಿಯ ಜನಬೆಂಬಲ ನಾಡಿದ್ದು ಮತದಾನ ದಿನಕ್ಕೆ ಮತಗಳಾಗಿ ಪರಿವರ್ತನೆ ಆಗಬೇಕು ಎಂದು ಹೇಳಿದರು.
Arun Puthila star campaign in Vitla, thousands join hands in Road show. Arun Puthila himself campaigned as star campaigner.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm