ಬ್ರೇಕಿಂಗ್ ನ್ಯೂಸ್
03-05-23 08:25 pm Mangalore Correspondent ಕರಾವಳಿ
Photo credits : @cutinha_divya
ಮಂಗಳೂರು, ಮೇ 3 : ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ವಿಪರೀತ ಪ್ರಮಾಣದಲ್ಲಿ ಕುಸಿದಿರುವುದರಿಂದ ಮಂಗಳೂರು ನಗರಕ್ಕೆ ದಿನ ಬಿಟ್ಟು ದಿನ ಅಂದರೆ ಎರಡು ದಿನಕ್ಕೆ ಒಮ್ಮೆಯಂತೆ ನೀರು ಸರಬರಾಜು ಮಾಡಲು ಮಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.
ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ 4.34 ಮೀಟರ್ ಎತ್ತರಕ್ಕೆ ನೀರು ಲಭ್ಯವಿದ್ದು ಮಳೆ ಬಾರದೇ ಇದ್ದಲ್ಲಿ ಇದು 20 ದಿನಗಳಿಗೆ ಮಾತ್ರ ಸಾಕಾಗಲಿದೆ. 2019ರಲ್ಲಿ ಇದೇ ಸಮಯಕ್ಕೆ 4.67 ಮೀಟರ್ ನೀರು ಇತ್ತು ಎನ್ನುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ನೀರು ರೇಶನಿಂಗ್ ಮಾಡಲು ಮಹಾನಗರ ಪಾಲಿಕೆಗೆ ಸೂಚನೆ ನೀಡಿದ್ದಾರೆ. ಅದರಂತೆ, ಮೇ 4ರ ನಂತರ ಎರಡು ದಿನಕ್ಕೊಮ್ಮೆ ನೀರು ಬಿಡಲು ನಿರ್ಧಾರಕ್ಕೆ ಬರಲಾಗಿದೆ.


ಮೇ 5ರಂದು ಪಾಲಿಕೆ ವ್ಯಾಪ್ತಿಯ ಮಂಗಳೂರು ನಗರ ಉತ್ತರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ನೀಡಿದರೆ, 6ರಂದು ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ನೀರು ಹರಿಸಲು ನಿರ್ಣಯ ಮಾಡಲಾಗಿದೆ. ಒಂದು ದಿನ ನೀರು ಪೂರೈಕೆ ಕಡಿತವಾಗಲಿದ್ದು ಮಳೆ ಬರುವ ವರೆಗೂ ಇದೇ ಪ್ರಕಾರದಲ್ಲಿ ನೀರು ಪೂರೈಕೆ ಇರಲಿದ್ದು ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ. ಇದಲ್ಲದೆ, ಇತರೇ ಕಟ್ಟಡ ನಿರ್ಮಾಣ ಕಾಮಗಾರಿ, ವಾಹನಗಳ ಸರ್ವಿಸಿಂಗ್ ಕೆಲಸಗಳಿಗೆ ನೀರು ಜೋಡಣೆ ಕಡಿತ ಮಾಡಲು ಸೂಚಿಸಲಾಗಿದ್ದು ನೀರಿನ ಪೋಲು ಮಾಡಿದ್ದು ಕಂಡುಬಂದಲ್ಲಿ ಅಂತಹ ಮನೆಗಳ ನೀರಿನ ಜೋಡಣೆಯನ್ನು ಕಡಿತ ಮಾಡಲು ಪಾಲಿಕೆ ಕಮಿಷನರ್ ಆದೇಶದಲ್ಲಿ ತಿಳಿಸಿದ್ದಾರೆ.
ಮಳೆ ಬಂದು ತುಂಬೆ ಅಣೆಕಟ್ಟಿನಲ್ಲಿ ನೀರು ಶೇಖರಗೊಳ್ಳುವ ವರೆಗೂ ಇದೇ ರೀತಿ ನೀರಿನ ರೇಶನಿಂಗ್ ಮುಂದುವರಿಯಲಿದೆ. ಈ ಬಾರಿ ಬೇಸಗೆ ಮಳೆ ಬಾರದೇ ಇರುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಕುಸಿತವಾಗಿದೆ. ಇತ್ತೀಚೆಗೆ ಶಂಭೂರಿನ ಎಎಂಆರ್ ಅಣೆಕಟ್ಟಿನಿಂದ ತುಂಬೆಗೆ ನೀರು ಬಿಡಲಾಗಿತ್ತು. ಆದರೆ ಆ ನೀರು ಕೂಡ ತುಂಬೆಯಲ್ಲಿ ಖಾಲಿಯಾಗಿದ್ದು ರೇಶನಿಂಗ್ ಅನಿವಾರ್ಯ ಅನ್ನುವಂತಾಗಿದೆ. ತೀವ್ರ ಬಿಸಿಲಿನಿಂದಾಗಿ ನದಿಯಲ್ಲಿ ನೀರು ಬರಿದಾಗುತ್ತಿದ್ದು ಉಪ್ಪಿನಂಗಡಿ ಭಾಗದಲ್ಲಿ ನೇತ್ರಾವತಿ ಸಂಪೂರ್ಣ ಬತ್ತಿ ಹೋಗಿದೆ. ಈಗ ಅಣೆಕಟ್ಟಿನಲ್ಲಿ ಉಳಿದಿರುವ ನೀರು ಕೂಡ ಖಾಲಿಯಾಗುತ್ತಿದ್ದು ಮಂಗಳೂರಿನ ಜನರು ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿ ಎದುರಾಗಿದೆ.
Shortage of water in Thumbe vented dam, water supply on alternate days only in Mangalore city. In view of the drastic drop in water storage level at Thumbe vented dam, water rationing will be implemented from tomorrow (May 4) in the city limits.
04-04-26 07:33 pm
HK News Staffer
ಪಶ್ಚಿಮ ಏಷ್ಯಾ ಸಂಘರ್ಷ; ಭಾರತದ ರಾಜತಾಂತ್ರಿಕ ನಡೆಯನ್...
03-04-26 04:14 pm
ಬಾಗಲಕೋಟ, ದಾವಣಗೆರೆ ಉಪ ಚುನಾವಣೆ; ಗೆಲುವು ಕಷ್ಟ- ಗು...
03-04-26 03:48 pm
ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಕುಮಾರಸ್ವಾಮಿ- ಎಡಿಜ...
02-04-26 09:31 pm
ನಾನು ಮುಖ್ಯಮಂತ್ರಿಯಾಗಿ ಮುಸ್ಲಿಂ ಅಲ್ಪಸಂಖ್ಯಾತ ಮೀಸಲ...
02-04-26 08:07 pm
04-04-26 10:53 pm
HK News Staffer
ಅಣ್ಣಾಮಲೈ ಹೊರಗಿಟ್ಟು ಬಿಜೆಪಿ ಪಟ್ಟಿ ಬಿಡುಗಡೆ; ತಮಿಳ...
03-04-26 07:52 pm
50 ವರ್ಷಗಳ ಬಳಿಕ ಮಾನವ ಸಹಿತ ಚಂದ್ರಯಾನ; ಅಮೆರಿಕ, ಕೆ...
03-04-26 07:35 am
ಚಿಂತಿಸಬೇಡಿ, ನಿಮ್ಮ ಹಡಗು ಸುರಕ್ಷಿತ; ಹಾರ್ಮುಜ್ ಜಲಸ...
02-04-26 10:24 pm
ಇರಾನ್ ಕದನವಿರಾಮ ಕೇಳುತ್ತಿದೆ, ಒಪ್ಪದಿದ್ದರೆ ಶಿಲಾಯು...
01-04-26 11:03 pm
03-04-26 11:43 am
HK News Staffer
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
04-04-26 05:42 pm
HK News Staffer
ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ಮಹಿಳೆ...
04-04-26 05:39 pm
ಇನ್ಫೋಸಿಸ್ ಸಿಎಸ್ಆರ್ ಫಂಡ್ ತೆಗೆಸಿಕೊಡುವುದಾಗಿ ವಂಚನ...
04-04-26 04:36 pm
ಮಂಗಳೂರಿನಲ್ಲಿ ಎಪ್ರಿಲ್ 19ರಂದು ಸೀ ಬ್ರೀಜ್ ಮ್ಯಾರಥಾ...
04-04-26 11:32 am
ಮೂರನೇ ಮಗುವೂ ಹೆಣ್ಣಾಗುತ್ತದೆಂದು ಗರ್ಭಿಣಿ ಪತ್ನಿ, ಇ...
03-04-26 11:00 pm