ಭಾರತ ಎರಡನೇ ಆರ್ಥಿಕ ಶಕ್ತಿ ಆಗುತ್ತಿದೆ, ಕರ್ನಾಟಕ ಸೂಪರ್ ಪವರ್ ಆಗಬೇಕು ; ಸ್ಥಿರ ಸರ್ಕಾರಕ್ಕಾಗಿ ಮತ ನೀಡಿ ; ಮುಲ್ಕಿಯಲ್ಲಿ ಮೋದಿ ಅಬ್ಬರ 

03-05-23 02:38 pm       Mangalore Correspondent   ಕರಾವಳಿ

ನಿಮ್ಮ ಮತದ ಶಕ್ತಿಯಿಂದಾಗಿ ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಿದೆ. ಅದು ಮೋದಿಯ ತಾಕತ್ತು ಅಲ್ಲ, ನಿಮ್ಮ ತಾಕತ್ತು. ನಮ್ಮ ದೇಶ ಜಗತ್ತಿನಲ್ಲಿ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ.

ಮಂಗಳೂರು, ಮೇ 3 : ನಿಮ್ಮ ಮತದ ಶಕ್ತಿಯಿಂದಾಗಿ ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಿದೆ. ಅದು ಮೋದಿಯ ತಾಕತ್ತು ಅಲ್ಲ, ನಿಮ್ಮ ತಾಕತ್ತು. ನಮ್ಮ ದೇಶ ಜಗತ್ತಿನಲ್ಲಿ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಕೆಲವೇ ವರ್ಷಗಳಲ್ಲಿ ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಲಿದೆ. ಆ ಸಂದರ್ಭದಲ್ಲಿ ಕರ್ನಾಟಕವೂ ಸೂಪರ್ ಪವರ್ ಆಗಲು ಇಲ್ಲಿ ಸ್ಥಿರ ಸರ್ಕಾರ ಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಮುಲ್ಕಿ ಮೂಡುಬಿದ್ರೆ ಕ್ಷೇತ್ರದ ಕೊಳ್ನಾಡಿನಲ್ಲಿ ಪ್ರಧಾನಿ ಮೋದಿ ಬೃಹತ್ ಪ್ರಚಾರ ಸಭೆ ನಡೆಸಿದ್ದಾರೆ. ತುಳುವಿನಲ್ಲಿ ಭಾಷಣ ಆರಂಭಿಸಿದ ಮೋದಿ, ಪರಶುರಾಮನ ಮೋಕೆದ ತುಳುವಪ್ಪೆನ ಜೋಕುಲೆಗು ಸೊಲ್ಮೆಲು ಎಂದು ತಡವರಿಸುತ್ತಾ ಹೇಳಿದರು. ನಿಮ್ಮೆಲ್ಲರ ಆಶೀರ್ವಾದ ಪಡೆಯಲು ಬಂದಿದ್ದೇನೆ.‌ 140 ಕೋಟಿ ಜನರು ನಮ್ಮ ರಿಮೋಟ್ ಕಂಟ್ರೋಲ್ ಆಗಿದ್ದಾರೆ. ಹೀಗಾಗಿ ನಮ್ಮ ನಡುವೆ ಮಧ್ಯಂತರ ವ್ಯಕ್ತಿ ಬೇಡ, ಭಾಷಾಂತರ ಬೇಕಾಗಿಲ್ಲ ಎಂದ ಮೋದಿ, ಮತದಾನಕ್ಕೆ ಹೆಚ್ಚು ದಿನ ಇಲ್ಲ, ಕರ್ನಾಟಕದ ಅಭಿವೃದ್ಧಿಯೇ ಬಿಜೆಪಿ ಸಂಕಲ್ಪ. ಕರ್ನಾಟಕವನ್ನು ನಿರ್ಮಾಣ ಕ್ಷೇತ್ರದ ಸೂಪರ್ ಪವರ್ ಆಗಿಸೋದು ಬಿಜೆಪಿ ಗುರಿ.‌ ಆದರೆ ಬಿಜೆಪಿ ಕೈಗೊಂಡ ಜನಕಲ್ಯಾಣ ಯೋಜನೆಗಳನ್ನು ಬುಡಮೇಲು ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಆರೋಪಿಸಿದರು. 

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಯುಸಿ ಟಾಪರ್ ಇದ್ದಾರೆ ಎಂದು ಪ್ರಸ್ತಾಪಿಸಿದ ಮೋದಿ, ದೇಶದಲ್ಲಿ ಕರ್ನಾಟಕವನ್ನು ಕೈಗಾರಿಕೆ ಕ್ಷೇತ್ರದಲ್ಲಿ ನಂಬರ್ ವನ್ ಮಾಡುತ್ತೇವೆ.‌ ಕೃಷಿ, ಮೀನುಗಾರಿಕೆ, ಕ್ರೀಡಾ ವಿಭಾಗದಲ್ಲಿ ನಂಬರ್ ವನ್ ಮಾಡುತ್ತೇವೆ ಎಂದರು.‌ ಆದರೆ ಕಾಂಗ್ರೆಸ್ ಕರ್ನಾಟಕವನ್ನು ಏನು ಮಾಡಲು ಹೊರಟಿದೆ. ಕಾಂಗ್ರೆಸಿಗೆ ದಿಲ್ಲಿಯಲ್ಲಿರುವ ಕುಟುಂಬಕ್ಕೆ ಈ ರಾಜ್ಯವನ್ನು ನಂಬರ್ ವನ್ ಎಟಿಎಂ ಮಾಡುವ ಗುರಿಯಷ್ಟೇ ಇದೆ.‌ 85 ಪರ್ಸೆಂಟ್ ಮೂಲಕ ರಾಜ್ಯದ ಬೊಕ್ಕಸ ಕೊಳ್ಳೆ ಹೊಡೆಯಲು ಮುಂದಾಗಿದೆ.‌ ಇದರ ಜೊತೆಗೆ ಜೆಡಿಎಸ್ ಕೂಡ ಹಿಂದೆ ಬಿದ್ದಿಲ್ಲ, ರಾಜ್ಯವನ್ನು ಎಟಿಎಂ ಮಾಡೋಕೆ.‌ ಕರಾವಳಿಯಲ್ಲಿ ಹೊಸ ಮತದಾರರು ಸಾಕಷ್ಟಿದ್ದು ಅವರೆಲ್ಲ ಕರ್ನಾಟಕದ ಭವಿಷ್ಯದ ಬಗ್ಗೆ ಆಲೋಚಿಸಬೇಕು.‌ ಯುವಕ- ಯುವತಿಯರೇ ನಿಮ್ಮ ಕೆರಿಯರ್ ಉತ್ತಮ ಪಡಿಸಲು ಯಾರು ಬೇಕೆಂದು ಆಲೋಚಿಸಿ.‌ ಕರ್ನಾಟಕದಲ್ಲಿ ಸ್ಥಿರ ಸರ್ಕಾರಕ್ಕಾಗಿ ಅವಕಾಶ ಕೊಡಿ. ಕಾಂಗ್ರೆಸ್ ಕರ್ನಾಟಕದಲ್ಲಿ ಶಾಂತಿಯ ವಿರೋಧಿ, ಅಭಿವೃದ್ಧಿ ವಿರೋಧಿ. ಕಾಂಗ್ರೆಸ್ ನಾಯಕರು ಈಗ ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಮೈದಾನಕ್ಕೆ ಬರುತ್ತಿದ್ದಾರೆ.‌ ಆದರೆ ಸಮಾಜದ ಪ್ರತಿ ಸಮುದಾಯದ ಜನರೂ ದೇಶದ್ರೋಹಿಗಳನ್ನು ವಿರೋಧಿಸುತ್ತಿದ್ದಾರೆ‌‌. ಚುನಾವಣೆ ಮೂಲಕ ದೇಶದ್ರೋಹಿಗಳಿಗೆ ಪಾಠ ಕಲಿಸಲಿದ್ದಾರೆ ಎಂದರು.‌

ನಮ್ಮ ಗಡಿ ಕಾಯುವ ಯೋಧರಿಗಾಗಿ ನಾವು ಶಕ್ತಿ ತುಂಬ ಬೇಡವೇ.. ಆದರೆ ಕಾಂಗ್ರೆಸ್ ನಮ್ಮ ಯೋಧರನ್ನು ಅಪಮಾನ ಮಾಡುತ್ತಿದ್ದಾರೆ.‌ ಈಗ ಜಗತ್ತಿನಲ್ಲಿ ಭಾರತದ ಗೌರವ, ಸಮ್ಮಾನ ಹೆಚ್ಚಾಗಿದ್ದು ಹೌದಲ್ಲವೇ ? ಜಪಾನ್, ಆಸ್ಟ್ರೇಲಿಯಾ, ಯುಕೆ, ಅಮೆರಿಕದಲ್ಲಿ ಭಾರತಕ್ಕೆ ಜೈಕಾರ ಹಾಕುತ್ತಿದ್ದಾರೆ ಹೌದಲ್ಲವೇ ? ಇದು ಹೇಗೆ ಸಾಧ್ಯವಾಯ್ತು ಅಂತೀರಿ, ಉಡುಪಿಯ ಜನರು ಟಾಪರ್ ಇದ್ದೀರಿ.‌ ಇದು ಮೋದಿಯ ಕಾರಣಕ್ಕೆ ಅಲ್ಲ, ನಿಮ್ಮ ಮತದ ಶಕ್ತಿಯಿಂದ ಗೌರವ ಸಿಕ್ಕಿದೆ.‌ ದೆಹಲಿಯಲ್ಲಿ ಸ್ಥಿರ ಸರ್ಕಾರ ಮಾಡಲು ಸಾಧ್ಯವಾಯ್ತು, ಅದರಿಂದ ದೇಶದ ಗೌರವ ಹೆಚ್ಚಾಯ್ತು, ಅದು ನಿಮ್ಮ ಓಟಿನ ತಾಕತ್ತು.‌ ಕರ್ನಾಟಕದಲ್ಲಿ ಸ್ಥಿರ ಸರ್ಕಾರಕ್ಕಾಗಿ ನಿಮ್ಮ ಮತ ಬೇಕಾಗಿದೆ.‌ ಜನರು ನಿರ್ಧಾರ ಮಾಡಿದ್ದಾರೆ, ಈ ಬಾರಿಯ ನಿರ್ಧಾರ, ಬಹುಮತದ ಸರ್ಕಾರ. 

ಡಬಲ್ ಇಂಜಿನ್ ಸರ್ಕಾರದಿಂದ ಲಾಭ ಆಗಿದ್ದು ಜನರಿಗೆ.‌ ಪಿಎಂ ಕಿಸಾನ್ ಸಮ್ಮಾನ್ 11 ಕೋಟಿ ಜನರಿಗೆ ಸಿಕ್ಕಿದೆ, ಅದರಲ್ಲಿ 6 ಕೋಟಿ ಮಹಿಳೆಯರು.‌ ಬಡವರಿಗೆ ಮನೆ ಕೊಡುತ್ತಿದ್ದೇವೆ, ಲಕ್ಷದ ಮನೆ ಕೊಡುತ್ತೇವೆ, ಆಮೂಲಕ ನೀವು ಲಕ್ಷಪತಿಯಾಗುತ್ತೀರಿ ಎಂದು ಪರೋಕ್ಷವಾಗಿ ಹೇಳಿದರು. ಕರಾವಳಿಯ ಉದ್ದಕ್ಕೂ ಸಮುದ್ರ ತೀರ ಇದ್ದು, ಅಭಿವೃದ್ಧಿಗೆ ಮುಂದಡಿ ಇಟ್ಟಿದ್ದೇವೆ. ಮೋದಿ ಸರ್ಕಾರ ಬಂದ ಮೇಲೆ ಮೀನುಗಾರರಿಗೆ ಶಕ್ತಿ ಸಿಕ್ಕಿದೆಯಲ್ಲವೇ ? ದಿಲ್ಲಿಯಲ್ಲಿ ಮೋದಿ ಸರ್ಕಾರ ಇದ್ರೆ ಉಡುಪಿಯ ಮೀನುಗಾರನ‌ ಮೊಗದಲ್ಲಿ ನಗು ಮೂಡಿಸುತ್ತೆ. ಮೀನುಗಾರರ ಅಭಿವೃದ್ಧಿಗಾಗಿ ಮತ್ಸ್ಯಸಂಪದ ಮಾಡಿದ್ದೇವೆ.‌ ಮೀನುಗಾರರಿಗಾಗಿ ಉಚಿತ ಕ್ರೆಡಿಟ್ ಕಾರ್ಡ್ ಕೊಡುವ ಯೋಜನೆ ಇದೆ. 2014ರ ವರೆಗೆ 60 ಲಕ್ಷ ಟನ್ ಮೀನು ಉತ್ಪಾದನೆ ಆಗುತ್ತಾ ಇತ್ತು.‌ 9 ವರ್ಷದಲ್ಲಿ ಒಳನಾಡು ಮೀನುಗಾರಿಕೆಯಲ್ಲಿ ಡಬಲ್ ಆಗಿದ್ದು 120 ಲಕ್ಷ ಟನ್ ಮೀನು ಉತ್ಪಾದನೆ ಆಗ್ತಾ ಇದೆ.‌ ಕರಾವಳಿ ಭಾಗದಲ್ಲಿ ದೊಡ್ಡ ಫೆಡರಲ್ ಬ್ಯಾಂಕಿಂಗ್ ಕ್ಷೇತ್ರ ಇದೆ, ಬಿಜೆಪಿ ಗುರಿ ಬ್ಯಾಂಕುಗಳ ಅಭಿವೃದ್ಧಿಯೇ ಆಗಿದೆ ಎಂದರು.

ಕರ್ನಾಟಕದ ಎಚ್ಎಎಲ್ ಇದೇ ಮೊದಲ ಬಾರಿಗೆ ಲಾಭ ಗಳಿಸಿದ್ದು ಹೇಗೆ ? ಇಲ್ಲಿ ವರೆಗೂ ಎಚ್ಎಎಲ್ ಲಾಭ ಗಳಿಸಿರಲಿಲ್ಲ ಯಾಕೆ ?ಜಗತ್ತಿನ ಮಟ್ಟದಲ್ಲಿ ಭಾರತದ ಬಗ್ಗೆ ಚರ್ಚೆ ಆಗ್ತಾ ಇದೆ, ಸ್ಟಾರ್ಟಪ್ ಬಗ್ಗೆ ಅಚ್ಚರಿಯಿಂದ ನೋಡುತ್ತಿದ್ದಾರೆ. ಬಿಜೆಪಿ ಸ್ಟಾರ್ಟಪ್ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದೆ, ದೇಶದಲ್ಲಿ ಹತ್ತು ಸಾವಿರ ಅಟಲ್ ಟಿಂಚರಿಂಗ್ ಲ್ಯಾಬ್ ಆರಂಭ ಆಗಿದೆ.‌ ಇಂದು ದೇಶದ ಆರ್ಥಿಕತೆ ಜಗತ್ತಿನಲ್ಲಿ ಐದನೇ ಸ್ಥಾನಕ್ಕೆ ಹೋಗಿದೆ, ಮೋದಿ ಸರ್ಕಾರದ ಬಗ್ಗೆ ಜನ ವಿಶ್ವಾಸ ತೋರುತ್ತಿದ್ದಾರೆ. ಇದು ದೇಶದಲ್ಲಿ ಆಗಿರುವ ದೊಡ್ಡ ಬದಲಾವಣೆ ಎಂದರು ಮೋದಿ‌‌.‌ ಸಮಾವೇಶದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 13 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಸೇರಿದಂತೆ ಇತರೇ ನಾಯಕರು ಉಪಸ್ಥಿತರಿದ್ದರು.

PM Modi in Mudbidri Mangalore, Congress can't digest if peace prevails in a state he slammed, In an attempt to hit the Congress on its poll promise to ban Bajrang Dal if it comes to power in Karnataka, PM Modi chanted slogans of Jai Bajrang Bali and also requested the people in the rally to do the same. The attendees wholeheartedly adher to PM Modi's request to chant Jai Bajrang Bali. The prime minister said the Congress can't digest if peace prevails in a state. "If the country is progressing, it can't tolerate it. Karnataka has seen first-hand this dangerous face of Congress which jumps in to rescue those who spread terrorism," PM exhorted at Mudbidri rally