ಅರುಣ್ ಪುತ್ತಿಲ ಖಲಿಸ್ತಾನಿ ಕಮಾಂಡರ್, ಅಶೋಕ್ ರೈ ಪುತ್ತೂರಿನಲ್ಲಿ ಗೂಂಡಾ ರಾಜ್ಯ ಮಾಡುತ್ತಿದ್ದಾರೆ ; ಸದಾನಂದ ಗೌಡ ವರಸೆ 

02-05-23 10:35 pm       Mangalore Correspondent   ಕರಾವಳಿ

ಪುತ್ತೂರಿನಲ್ಲಿ ಕಾಂಗ್ರೆಸ್ ಮತ್ತು ಸ್ವಯಂಘೋಷಿತ ಹಿಂದು ಮುಖಂಡ ಪಕ್ಷೇತರ ಅಭ್ಯರ್ಥಿ ಗೂಂಡಾರಾಜ್ಯ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ಆರೋಪಿಸಿದ್ದಾರೆ. 

ಪುತ್ತೂರು, ಮೇ 2 : ಪುತ್ತೂರಿನಲ್ಲಿ ಕಾಂಗ್ರೆಸ್ ಮತ್ತು ಸ್ವಯಂಘೋಷಿತ ಹಿಂದು ಮುಖಂಡ ಪಕ್ಷೇತರ ಅಭ್ಯರ್ಥಿ ಗೂಂಡಾರಾಜ್ಯ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ಆರೋಪಿಸಿದ್ದಾರೆ. 

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹಿಂದೆ ನನ್ನ ಮಿತ್ರರಾಗಿದ್ದರು. ಈಗ ನನ್ನ ಮಿತ್ರರಲ್ಲ. ಶತ್ರು ಆಗಿದ್ದಾರೆ. ಪಕ್ಷೇತರ ಅಭ್ಯರ್ಥಿ ತಾನೊಬ್ಬನೇ ಹಿಂದು ರಕ್ಷಕನೆಂದು ಹೇಳಿಕೊಂಡು ಖಲೀಸ್ತಾನ್ ಕಮಾಂಡೋ ರೀತಿ ಪೋಸು ಕೊಡುತ್ತಿದ್ದಾರೆ. ಪುತ್ತೂರಿನಲ್ಲಿ ಈ ಹಿಂದೆ ಇದ್ದ ಗೂಂಡಾ ರಾಜ್ಯ ಮರು ಸ್ಥಾಪಿಸಲು ಮುಂದಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಮೂದಲಿಸಿದ್ದಾರೆ. 

Arun Puthila missing BJP ticket: His supporters call emergency meeting |  udayavani

ಪುತ್ತೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ವಿರುದ್ಧ ಹರಿಹಾಯ್ದರು. ಪಕ್ಷದಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಕಾಂಗ್ರೆಸ್ ಹೋಗೋದು, ಹಿಂದೂ ಮುಖಂಡನೆಂದು ಹೇಳಿಕೊಂಡು ಪಕ್ಷೇತರ ನಿಲ್ಲುವುದು ಆದರ್ಶವಲ್ಲ. ನನಗೆ ಸೀಟ್ ಸಿಕ್ಕಿಲ್ಲ ಅಂತ ಇನ್ನೊಂದು ಪಾರ್ಟಿಯಲ್ಲಿ ನಿಲ್ಲೋದು ಆದರ್ಶ ಅಲ್ಲ. ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಯ ಷಡ್ಯಂತ್ರಕ್ಕೆ ಬಿಜೆಪಿ ಯಾವತ್ತೂ ಬಲಿಯಾಗಲ್ಲ ಎಂದರು. 

ಎತ್ತಿನಹೊಳೆ ಯೋಜನೆ ಕಾರಣಕ್ಕೆ ನೇತ್ರಾವತಿ ಬರಡಾಗಿದೆ, ಅದಕ್ಕೆ ಡೀವಿ ಸದಾನಂದ ಗೌಡರೇ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಎತ್ತಿನಹೊಳೆ ಯೋಜನೆ ಮೂಲಕ 1300 ಟಿಎಂಸಿ ಸಮುದ್ರಕ್ಕೆ ಹೋಗುವ ನೀರನ್ನು ಮಳೆಗಾಲದಲ್ಲಿ ಕೋಲಾರಕ್ಕೆ ಒಯ್ಯಲು ತೀರ್ಮಾನಿಸಿದೆ. ನಾನು ಸಿಎಂ ಆಗಿದ್ದಾಗ 23 ಟಿಎಂಸಿ ನೀರನ್ನು ನೀರಿಲ್ಲದ ಜಾಗಕ್ಕೆ ಕಳಿಸುವ ಯೋಜನೆ ಕೈಗೆತ್ತಿಕೊಂಡಿದ್ದೇನೆ. ನೀರಿಲ್ಲದವರಿಗೆ ನೀರು ಕೋಡೋದು ತಪ್ಪಾ ಎಂದು ಪ್ರಶ್ನಿಸಿದರು. ಕಳೆದ ಹತ್ತು ದಿನಗಳಿಂದ ಪಯಸ್ವಿನಿ, ಕುಮಾರಧಾರಾ, ನೇತ್ರಾವತಿ ನದಿಗಳು ನೀರಿಲ್ಲದೆ ಬತ್ತಿವೆ. ಅದಕ್ಕೆ ಸದಾನಂದ ಗೌಡ ಕಾರಣವಾ ಎಂದು ಕೇಳಿದರು.

Former Minister Sadananda Gowda calls Puttur Arun Puthila as Khalistan commander, calls Ashok Rai Puttur goonda sparks controversy. He is posing himself as Khalistan commander being a hindu leader.