ಬ್ರೇಕಿಂಗ್ ನ್ಯೂಸ್
02-05-23 05:49 pm Mangalore Correspondent ಕರಾವಳಿ
ಮಂಗಳೂರು, ಮೇ 2 : ಕಾಂಗ್ರೆಸ್ ಗ್ಯಾರಂಟಿ ಸ್ಕೀಮ್ ಬಗ್ಗೆ ಬಿಜೆಪಿ ನಾಯಕರು ಲೇವಡಿ ಮಾಡಿದ್ದರು. ರಾಜಸ್ಥಾನದಲ್ಲಿ ಇದೇ ರೀತಿ ಭರವಸೆ ಕೊಟ್ಟು ಈಡೇರಿಕೆ ಮಾಡಿಲ್ಲ ಎಂದಿದ್ದರು. ಮಂಗಳೂರಿಗೆ ಬಂದಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸುದ್ದಿಗೋಷ್ಟಿ ನಡೆಸಿ ಆ ರೀತಿಯ ಆರೋಪವನ್ನು ನಿರಾಕರಿಸಿದ್ದಾರೆ.
ರಾಜಸ್ಥಾನದಲ್ಲಿ ಐನೂರು ರೂ.ಗೆ ಗ್ಯಾಸ್ ಸಿಲಿಂಡರ್ ನೀಡುತ್ತೇವೆ. ಬಡವರ ಖಾತೆಗೆ 50 ಸಾವಿರ ಹಣ ಹಾಕುತ್ತೇವೆ. ಮನುಷ್ಯರಿಗೆ 25 ಲಕ್ಷ ರೂ., ಗೋವುಗಳಿಗೆ 40 ಸಾವಿರದ ಉಚಿತ ವಿಮೆ ಮಾಡಿದ್ದೇವೆ. ಫ್ಯಾಸಿಸ್ಟ್ ಶಕ್ತಿಗಳು ಮಾತ್ರ ನಮ್ಮ ಸರ್ಕಾರವನ್ನು ಟೀಕಿಸುತ್ತವೆ. ನಾವು ನೀಡಿದ್ದ ಭರವಸೆಯಲ್ಲಿ 80 ಪರ್ಸೆಂಟ್ ಪೂರೈಸಿದ್ದೇವೆ ಎಂದಿದ್ದಾರೆ. ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪೂರ್ಣ ಬಹುಮತ ಪಡೆಯತ್ತೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು.
ಕರ್ನಾಟಕದಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ಬಗ್ಗೆ ಕೇಳಿದ ಪ್ರಶ್ನೆಗೆ, ಬಜರಂಗಬಲಿ, ರಾಮನ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ, ದೇವರ ಹೆಸರಲ್ಲಿ ಸಂಘಟನೆ ಕಟ್ಟಿ ಸ್ವಾರ್ಥಕ್ಕೆ ಬಳಸುತ್ತಿದ್ದಾರೆ ಎಂದು ಟೀಕಿಸಿದರು.
ಭರವಸೆ ಈಡೇರಿಸುವ ನೆಪದಲ್ಲಿ ಸರ್ಕಾರ ನಡೆಸಲು ಸಮಸ್ಯೆ ಆಗಿಲ್ಲವೇ ಎಂಬ ಪ್ರಶ್ನೆಗೆ, ರಾಜಸ್ಥಾನದಲ್ಲಿ ನಾವು 85 ಶೇಕಡಾ ಭರವಸೆ ಈಡೇರಿಸಿದ್ದೇವೆ. ಐದು ಬಜೆಟ್ ಮಂಡಿಸಿದ್ದು ಯಾವುದೇ ತೆರಿಗೆ ಹೆಚ್ಚಳ ಮಾಡಿಲ್ಲ. ಜೊತೆಗೆ ಬಜೆಟ್ ಭರವಸೆಯನ್ನೂ 95 ಪರ್ಸೆಂಟ್ ಈಡೇರಿಸಿದ್ದೇವೆ ಎಂದರು.
ಏಕರೂಪ ನಾಗರಿಕ ಸಂಹಿತೆ ಕುರಿತ ಬಿಜೆಪಿ ಪ್ರಣಾಳಿಕೆ ಪ್ರಶ್ನೆಗೆ, ಆ ಕಾನೂನು ಮಾಡ್ತೀವಿ ಅಂತ ಬಿಜೆಪಿಯವರು ಜನರನ್ನು ಭ್ರಮೆಗೆ ತಳ್ಳುತ್ತಿದ್ದಾರೆ. ಸಿಎಎ ಮಾಡ್ತೇವೆಂದು ಹಿಂದೆ ಹಾಗೇ ನಾಟಕ ಮಾಡಿದ್ದರು. ನಿಮಗೆ ತಾಕತ್ತು ಇದ್ದರೆ ಇಡೀ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಿ. ನಿಮ್ಮ ಆಡಳಿತ ಇರುವ ರಾಜ್ಯಗಳಲ್ಲಿ ಮೊದಲು ಈ ಕಾನೂನು ತನ್ನಿ ಎಂದರು ಗೆಹ್ಲೋಟ್.
ಬೆಲೆಯೇರಿಕೆ ಸಮಸ್ಯೆ ಎಲ್ಲ ಕಡೆ ಇದೆ, ಇದರಿಂದ ತಪ್ಪಿಸಲು ಈ ರೀತಿಯ ಸವಲತ್ತು ಕೊಡಬೇಕಾಗುತ್ತದೆ. ಕೇರಳದಲ್ಲಿ ಎಡರಂಗ ಸರಕಾರ ಉಚಿತ ಭರವಸೆ ಕೊಟ್ಟಿಲ್ಲವೇ? ಅಲ್ಲಿ ಜನರಿಗೆ ಸವಲತ್ತು ನೀಡಿಲ್ಲವೇ ಎಂದು ಪ್ರಶ್ನೆ ಮಾಡಿದರು.
BJP promises never been fulfilled till date slams Rajasthan chief minister Ashok Gehlot in Mangalore.The CM also claimed that the Congress delivers on its promises.“We fulfill our promises and today Rajasthan has become a model state in which every family has health insurance of ₹25 lakh under the Chiranjeevi scheme.”
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm