ಬ್ರೇಕಿಂಗ್ ನ್ಯೂಸ್
01-05-23 09:18 pm Mangalore Correspondent ಕರಾವಳಿ
ಮಂಗಳೂರು, ಮೇ 1 : ಮಂಗಳೂರು ಉತ್ತರ ಕ್ಷೇತ್ರದಲ್ಲಿ ಪೂರ್ವಗ್ರಹ ಪೀಡಿತರಾಗಿ, ದುರುದ್ದೇಶ ಇಟ್ಟುಕೊಂಡು ಮೊಯ್ದೀನ್ ಬಾವರಿಗೆ ಕಾಂಗ್ರೆಸ್ ಸೀಟು ತಪ್ಪಿಸಿದ್ದಾರೆ. ವಿಧಾನಸಭೆಗೆ ಬರದಂತೆ ತಡೆದು ಬೀದಿಪಾಲು ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೆ ಜೆಡಿಎಸ್ ಬಾವರಿಗೆ ಶಕ್ತಿ ತುಂಬಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ಸುರತ್ಕಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಒಂದು ಕಾಲದಲ್ಲಿ ಜೆಡಿಎಸ್ ಗೆ ಐದು ಜಿಪಂ ಸ್ಥಾನ, ಮೂರು ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದ ಜಾಗ ಮಂಗಳೂರು. ನಾವು ಕಟ್ಟಿದ ಜಾತ್ಯತೀತ ನೆಲೆಯ ಭದ್ರಕೋಟೆ ಹೇಗೆ ಸಡಿಲ ಆಯ್ತು ಅಂತ ಹೇಳಬೇಕಿಲ್ಲ. ಆದರೆ ಈ ಪ್ರದೇಶದಲ್ಲಿ ಇನ್ನೂ ಜಾತ್ಯತೀತ ಮನಸ್ಸು ಉಳಿದಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮೊಯ್ದೀನ್ ಬಾವ ಸಾಧನೆಯನ್ನು ಸಮೀಕ್ಷೆಗಳು ಹೇಳಿವೆ. ಕ್ಷೇತ್ರಕ್ಕೆ 78 ಪರ್ಸೆಂಟ್ ಅನುದಾನ ತಂದಿದ್ದಾರೆಂದು ಹಲವು ಸಂಸ್ಥೆಗಳು ಹೇಳಿವೆ. ಬಾವ ಸಾಧನೆ ಗುರುತಿಸಿ ನಾವು ಜೆಟಿಎಸ್ ಟಿಕೆಟ್ ಕೊಟ್ಟಿದ್ದೇವೆ. ಅವರಿಗಾದ ಅನ್ಯಾಯ ಸರಿಪಡಿಸಲು ನಾವು ಶಕ್ತಿ ನೀಡಿದ್ದೇವೆ.

ಇಡೀ ದೇಶದಲ್ಲಿ ರೈತರ ಸಾಲ ಮನ್ನಾ ಮಾಡಿದ್ದರೆ ಅದು ಕುಮಾರಸ್ವಾಮಿ ಮಾತ್ರ. ನುಡಿದಂತೆ ನಡೆದಿದ್ದಾರೆ ಎಂಬುದಕ್ಕೆ ಸಾಕ್ಷಿ ಇದೆ. ಜನರು ಈಗಾಗಲೇ ನಿರ್ಧರಿಸಿದ್ದಾರೆ. ಮೇ 13ರಂದು ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು
2018ರಲ್ಲಿ ಗುಲಾಂ ನಬಿ ಕರೆದು ಕುಮಾರಸ್ವಾಮಿ ಸಿಎಂ ಮಾಡ್ತೀವಿ ಅಂತ ಬಂದಿದ್ದರು. ನಾವೇನು ಕಾಂಗ್ರೆಸ್ ಮನೆ ಬಾಗಿಲಿಗೆ ಹೋಗಿರಲಿಲ್ಲ. ಆದರೆ ಮೈತ್ರಿ ಸರ್ಕಾರ ಕೆಡವಲು ಯಾರು ಕಾರಣ, ನಿಮ್ಮ ತೀರ್ಪಿಗೆ ಬಿಡುತ್ತೇನೆ. ಮುಂಬೈಗೆ ಶಾಸಕರನ್ನು ಕಳಿಸಿಕೊಟ್ಡಿದ್ದು ಯಾರು? ಸರ್ಕಾರ ಬೀಳಿಸಿದ್ದು ಯಾರು ? ಅದರ ದುಷ್ಪರಿಣಾಮ ಕಾಂಗ್ರೆಸ್ ಅನುಭವಿಸಬೇಕು ಎಂದು ಕಾಂಗ್ರೆಸ್ ನಾಯಕರ ಹೆಸರೆತ್ತದೆ ಟೀಕಿಸಿದರು.
ಮಂಡಲ್ ಕಮಿಷನ್ ಮಾಡಿ, ಮುಸ್ಲಿಂ ಮತ್ತು ಒಕ್ಕಲಿಗರಿಗೆ ನಾಲ್ಕು ಪರ್ಸೆಂಟ್ ಕೊಟ್ಟಿದ್ದು ನಾನು. ಆದರೆ ಈ ಮೀಸಲು ನೀತಿಯನ್ನೇ ಬಿಜೆಪಿ ಸಡಿಲ ಮಾಡಿದೆ. ಒಬ್ಬರ ಮೀಸಲಾತಿಯನ್ನು ಕಿತ್ತು ದ್ವೇಷ ಹಚ್ಚಿದ್ದಾರೆ ಎಂದು ಹೇಳಿದ ಗೌಡರು, ಸಮಾಜದಲ್ಲಿ ಬೇರೆ ಶಕ್ತಿ ಬರಬಾರದೆಂದು ಬಾವನನ್ನು ನಿಲ್ಲಿಸಿದ್ದೇವೆ. ನೀವೆಲ್ಲ ಶಕ್ತಿ ತುಂಬುತ್ತೀರಿ ಎಂಬ ಭರವಸೆ ಹೊಂದಿದ್ದೇನೆ ಎಂದರು.
ಜೆಡಿಎಸ್ ಪ್ರೈವೇಟ್ ಲಿಮಿಟೆಡ್ ಎಂಬ ಮೋದಿ ಟೀಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಜನ ಉತ್ತರ ನೀಡುತ್ತಾರೆ. ಮೋದಿ ಪ್ರಧಾನಿ ಇದ್ದಾರೆ, ಅವರನ್ನು ಟೀಕೆ ಮಾಡಲ್ಲ ಎಂದರು.
Former prime minister H D Deve Gowda said the Janata Dal (S) party has close links with the people of Mangaluru as there were as many as five Zilla Panchayat members and three MLAs from the party who got elected from here in the past.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 09:10 pm
HK News Desk
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
14-11-25 11:01 pm
Mangalore Correspondent
Kumpala, Dog, Crime, Mangalore: ಬೀದಿ ನಾಯಿಗಳ ದ...
14-11-25 10:10 pm
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ; ಮಕ್ಕ...
14-11-25 09:03 pm
ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿ...
14-11-25 03:34 pm
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm