ಗನ್ ತೋರಿಸಿ ಬೆದರಿಸುವ ವಿದ್ಯಮಾನ ಬಿಹಾರದಲ್ಲೂ ನಾವು ಕಾಣಲ್ಲ ; ಬೇರೆ ವ್ಯಕ್ತಿ ಒಳ್ಳೆದಿರಬಹುದು, ವಿರಾಟ್ ಕೊಹ್ಲಿ ಥರಾ..!

30-04-23 06:54 pm       Mangalore Correspondent   ಕರಾವಳಿ

ಪುತ್ತೂರಿನಲ್ಲಿ ಸಂಘಟನೆಯಲ್ಲಿದ್ದವರು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಬಿಜೆಪಿ ಗೆದ್ದರೆ ಮಾತ್ರ ನಮಗೆ ಮರ್ಯಾದೆ. ಇಲ್ಲಿ ಕಾಂಗ್ರೆಸ್ ಗೆದ್ದರೆ ನಮಗೇನು ಮರ್ಯಾದೆ. ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಗನ್ ತೆಗೆದುಕೊಂಡು ಬೆದರಿಸುವ ವಿಡಿಯೋ ನೋಡಿದೆ.

ಪುತ್ತೂರು, ಎ.30: ಪುತ್ತೂರಿನಲ್ಲಿ ಸಂಘಟನೆಯಲ್ಲಿದ್ದವರು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಬಿಜೆಪಿ ಗೆದ್ದರೆ ಮಾತ್ರ ನಮಗೆ ಮರ್ಯಾದೆ. ಇಲ್ಲಿ ಕಾಂಗ್ರೆಸ್ ಗೆದ್ದರೆ ನಮಗೇನು ಮರ್ಯಾದೆ. ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಗನ್ ತೆಗೆದುಕೊಂಡು ಬೆದರಿಸುವ ವಿಡಿಯೋ ನೋಡಿದೆ. ಇಂಥ ವಿದ್ಯಮಾನ ಬಿಹಾರದಲ್ಲಿಯೂ ನಾವು ಕಾಣಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅಣ್ಣಾಮಲೈ ಹೇಳಿದ್ದಾರೆ.

ವಿಟ್ಲದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಮಾತನಾಡಿದ್ದಾರೆ. ರಿಯಲ್ ಎಸ್ಟೇಟ್ ಆಸ್ತಿ ದೊಡ್ಡದು ಮಾಡಿಕೊಳ್ಳಲು ಈ ವ್ಯಕ್ತಿ ಶಾಸಕರಾಗಲು ಬರ್ತಿದ್ದಾರೆಯೇ ಎಂದು ಜನರು ಕನ್ನಡಿ ನೋಡಿಕೊಳ್ಳಬೇಕು. ಕೆಲವು ಅಭ್ಯರ್ಥಿಗಳನ್ನು ನೋಡುವಾಗ ಆ ಥರಾ ಇದ್ದಾರೆ. 400 ಕೋಟಿ ಇರುವ ತಮ್ಮ ಆಸ್ತಿಯನ್ನು 500 ಕೋಟಿ ಮಾಡಲು ಇವರು ಬರುತ್ತಿದ್ದಾರೆಯೇ ಎಂದು ಅರ್ಥ ಮಾಡ್ಕೋಬೇಕು ಎಂದರು.

ಪುತ್ತೂರಿನಲ್ಲಿ ಬಿಜೆಪಿ ಗೆದ್ದರೆ ಮಾತ್ರ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುತ್ತದೆ. ಯಾರೋ ವ್ಯಕ್ತಿ ಗೆದ್ದರೆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಇಲ್ಲಿ ಈಗೋ ಮುಖ್ಯ ಅಲ್ಲ. ಈಗೋ ಮೆಟ್ಟಿ ನಿಂತು ನಾವು ಪಕ್ಷ ಪರ ನಿಂತಿದ್ದೇವೆ. ನನಗೊಬ್ಬ ಹುಡುಗ ಪ್ರಶ್ನೆ ಕೇಳಿದ. ನಿಮ್ಮ ಅಭ್ಯರ್ಥಿಗಿಂತ ಪಕ್ಷೇತರ ವ್ಯಕ್ತಿ ಒಳ್ಳೆ ಇದ್ದಾರೆ ಅಂತ. ಪಕ್ಷೇತರ ವ್ಯಕ್ತಿ ಮಾತ್ರ ಅಲ್ಲ, ವೇದಿಕೆಯಲ್ಲಿ ಇರುವ ನಾಲ್ಕೈದು ಮಂದಿ ಬೆಟರ್ ಅಂತ ಕಾಣಬಹುದು. ಸಚಿನ್, ವಿರಾಟ್ ಕೊಹ್ಲಿ ನೋಡಲು ಸುಂದರವಾಗಿ ಕಾಣ್ತಾರೆ. ಆದರೆ ನಮಗೆ ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ, ಪಕ್ಷವನ್ನು ಗೆಲ್ಲಿಸುವುದು ಮುಖ್ಯ. ಹಾಗಾಗಿ ವ್ಯಕ್ತಿ ಯಾರೆನ್ನುವುದು ಬೇಕಿಲ್ಲ ಎಂದರು. ವಿಟ್ಲದಲ್ಲಿ ಕಾರ್ಯಕ್ರಮಕ್ಕೂ ಮುನ್ನ ಅಣ್ಣಾಮಲೈ ರೋಡ್ ಶೋ ನಡೆಸಿದ್ದು, ಆನಂತರ ಸಾರ್ವಜನಿಕ ಸಭೆ ನಡೆಸಿದ್ದಾರೆ.

Puttur only if BJP wins we will have more respect says Annamalai.