ಬ್ರೇಕಿಂಗ್ ನ್ಯೂಸ್
30-04-23 06:25 pm Mangalore Correspondent ಕರಾವಳಿ
ಸುಳ್ಯ, ಎ.30 : ಪ್ರವೀಣ್ ನೆಟ್ಟಾರು ಹತ್ಯೆಗೆ ನ್ಯಾಯ ಸಿಗೋವರೆಗೂ ನಾವು ವಿರಮಿಸಲ್ಲ. ಅವರ ಬಲಿದಾನ ಎಂದಿಗೂ ವ್ಯರ್ಥ ಆಗಲ್ಲ. ಪ್ರವೀಣ್ ಕುಟುಂಬಕ್ಕೆ ಸಂವೇದನಾಶೀಲ ಸರ್ಕಾರ ಏನು ಮಾಡಬೇಕೋ ಅದೆಲ್ಲವನ್ನೂ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ದುಷ್ಕರ್ಮಿಗಳಿಂದ ಕೊಲೆಯಾದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಜೆ.ಪಿ.ನಡ್ಡಾ, ಪ್ರವೀಣ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪ್ರವೀಣ್ ಪೋಷಕರು ಮತ್ತು ಪತ್ನಿ ನಡ್ಡಾ ಅವರನ್ನು ಹೂಗುಚ್ಛ ನೀಡಿ ಶಾಲು ಹೊದಿಸಿ ಸ್ವಾಗತಿಸಿದರು.
ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ನಡ್ಡಾ ಅವರು, ಪ್ರವೀಣ್ ಕೊಲೆ ತುಂಬ ದುಃಖದಾಯಕ ಮತ್ತು ಆಗಬಾರದ ಘಟನೆ ನಡೆದು ಹೋಗಿತ್ತು. ಈ ಕೃತ್ಯಕ್ಕೆ ಎಸ್ಡಿಪಿಐ ಮತ್ತು ಪಿಎಫ್ಐ ಕಾರಣವಾಗಿದ್ದು, ಘಟನೆ ನಂತರ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಲಾಯ್ತು. ನಮ್ಮ ಸರ್ಕಾರ ಸಂಘಟನೆಯನ್ನೇ ನಿಷೇಧಿಸಿ ಎನ್ಐಎ ತನಿಖೆ ಮಾಡ್ತಿದೆ. ಆದರೆ ಇಂತಹ ಮಾನಸಿಕತೆ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ. ಪ್ರವೀಣ್ ಕುಟುಂಬಕ್ಕೆ ನ್ಯಾಯ ಸಿಗೋವರೆಗೂ ಹೋರಾಟ ಇರಲಿದೆ. ಕುಟುಂಬ ಸದಸ್ಯರ ಜೊತೆ ನಮ್ಮ ಸರ್ಕಾರ ಇರಲಿದೆ ಎಂದರು.
ಮನೆಯ ಮುಂಭಾಗದ ಪ್ರವೀಣ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕೈ ಮುಗಿದು ನಮಿಸಿದ ನಡ್ಡಾ ಅವರು, ಮನೆಯ ಒಳಗೆ ತೆರಳಿ ಪ್ರವೀಣ್ ಪೋಷಕರು ಮತ್ತು ಪತ್ನಿ ಜೊತೆ ಮಾತುಕತೆ ನಡೆಸಿದರು. ಕೆಲ ಕಾಲ ಮಾತುಕತೆ ನಡೆಸಿ ಕುಶಲೋಪರಿ ವಿಚಾರಿಸಿದರು. ಇಡೀ ದೇಶ ಮತ್ತು ಪಕ್ಷ ನಿಮ್ಮ ಜೊತೆ ಇದೆ ಎಂದು ಪೋಷಕರಿಗೆ ನಡ್ಡಾ ಭರವಸೆ ನೀಡಿದರು. ಬಳಿಕ ಮನೆಯಲ್ಲಿ ಪಾನೀಯ ಸೇವಿಸಿ ಕುಟುಂಬಸ್ಥರ ಪರಿಚಯ ಮಾಡಿಕೊಂಡರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ನಡ್ಡಾ ಅವರಿಗೆ ಸಾಥ್ ನೀಡಿದರು. ಕೊಲೆಯಾಗುವುದಕ್ಕೂ ಮುನ್ನ ಪ್ರವೀಣ್ ಅವರು ಹೊಸ ಮನೆ ಕಟ್ಟಿಸಲು ಯೋಜನೆ ಹಾಕಿದ್ದರು. ಹಳೆ ಮನೆಯ ಹಿಂಭಾಗದಲ್ಲೇ ಆವರಣ ರೆಡಿ ಮಾಡಿದ್ದರು. ಯಾರೂ ಅಂದ್ಕೊಂಡಿರದ ರೀತಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಪ್ರವೀಣ್ 2022ರ ಜುಲೈ 26ರಂದು ಕೊಲೆಯಾಗಿದ್ದರು. ಆನಂತರ ಕಾರ್ಯಕರ್ತರ ಕಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ ಪ್ರವೀಣ್ ಕುಟುಂಬಕ್ಕೆ ರಾಜ್ಯ ಬಿಜೆಪಿ ವತಿಯಿಂದ ಮನೆ ಕಟ್ಟಿಸಿಕೊಡುವ ಭರವಸೆ ನೀಡಲಾಗಿತ್ತು. ನಳಿನ್ ಕುಮಾರ್ ನೀಡಿದ ಭರವಸೆಯನ್ನು ಕೇವಲ ಐದು ತಿಂಗಳಲ್ಲಿ ಈಡೇರಿಸಲಾಗಿತ್ತು. ಮೊನ್ನೆ ಎಪ್ರಿಲ್ 27ರಂದು ಹೊಸ ಮನೆಯ ಗೃಹ ಪ್ರವೇಶ ಆಗಿತ್ತು.
President of BJP J P Nadda visits Praveen Nettaru newly built house at Sullia, talks to family member's. Entire nation is with your familly he added. BJP President Nalin Kateel also accompanied him.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm