ಬ್ರೇಕಿಂಗ್ ನ್ಯೂಸ್
30-04-23 01:59 pm Mangalore Correspondent ಕರಾವಳಿ
ಬಂಟ್ವಾಳ, ಎ.30 : ಜಿಲ್ಲಾಡಳಿತ ಮತದಾನ ಜಾಗೃತಿಗಾಗಿ ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿದೆ. ಯಕ್ಷಗಾನ ಕಲಾವಿದರನ್ನೂ ಬಳಸಿಕೊಂಡು ಮತದಾನದ ಬಗ್ಗೆ ಜಾಗೃತಿ ನಡೆಸುತ್ತಿದೆ. ಆದರೆ ಬಂಟ್ವಾಳದ ಬಿಸಿ ರೋಡಿನಲ್ಲಿ ಯಕ್ಷಗಾನ ವೇಷಧಾರಿಗಳನ್ನು ಕಸ ಒಯ್ಯುವ ವಾಹನಗಳಲ್ಲಿ ಒಯ್ದಿದ್ದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ಬಂಟ್ವಾಳ ನಗರಸಭೆಯ ವತಿಯಿಂದ ಬಿಸಿ ರೋಡಿನಲ್ಲಿ ಶನಿವಾರ ಮತದಾನ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಕೈಕಂಬದಿಂದ ಬಿಸಿ ರೋಡಿಗೆ ಮೆರವಣಿಗೆ ನಡೆದಿತ್ತು. ಈ ವೇಳೆ, ನಗರಸಭೆಯ ಕಸ ಒಯ್ಯುವ ವಾಹನದಲ್ಲಿ ಯಕ್ಷಗಾನ ವೇಷಧಾರಿಗಳನ್ನು ಕುಳ್ಳಿರಿಸಿ ಒಯ್ಯಲಾಗಿದೆ. ಮತದಾನ ಜಾಗೃತಿ ಮೂಡಿಸುವ ರೀತಿ ಭಾಗವತಿಕೆ ಮತ್ತು ವೇಷಧಾರಿಗಳು ಕುಣಿತಗಳನ್ನು ನಿರ್ವಹಿಸಿದರು.
ಆದರೆ ಯಕ್ಷಗಾನ ಕಲಾವಿದರನ್ನು ಕಸ ಒಯ್ಯುವ ವಾಹನದಲ್ಲಿ ಕುಳ್ಳಿರಿಸಿ ಒಯ್ದಿದ್ದು ಯಕ್ಷಗಾನ ಪ್ರಿಯರ ಸಿಟ್ಟಿಗೆ ಕಾರಣವಾಗಿದೆ. ಈ ಬಗ್ಗೆ ನಗರಸಭೆಯ ಆಡಳಿತ ಕ್ಷಮೆ ಕೇಳಬೇಕೆಂದು ಕಲಾವಿದರು ಆಗ್ರಹ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ನಗರಸಭೆಯ ಈ ನಡೆಯನ್ನು ನಾವು ಖಂಡಿಸುತ್ತೇವೆ. ನಗರಸಭೆ ಅಧಿಕಾರಿಗಳು, ಯಕ್ಷಗಾನ ಕಲೆಯನ್ನು ಗ್ಯಾರ್ಬೇಜ್ ಗೆ ಸಮ ಎಂದುಕೊಂಡಿದ್ದಾರೆಯೇ..? ಈ ಬಗ್ಗೆ ಯಕ್ಷಗಾನ ಪ್ರಿಯರು, ಕಲಾವಿದರ ಬಳಿ ನಗರಸಭೆ ಅಧಿಕಾರಿಗಳು ಕ್ಷಮೆ ಕೇಳಬೇಕು ಎಂದು ಆಗ್ರಹ ಮಾಡಿದ್ದಾರೆ.
Yakshagana, the traditional folk art of the coastal region of Karnataka, is a symbol of pride and honor. However, the Yakshagana fraternity in Bantwal is expressing their anguish after artists were taken in a procession in a waste transportation vehicle belonging to the Bantwal municipality.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm