ಬ್ರೇಕಿಂಗ್ ನ್ಯೂಸ್
29-04-23 03:10 pm Mangaluru Correspondent ಕರಾವಳಿ
ಉಳ್ಳಾಲ, ಎ.29: ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ತಾನೊಬ್ಬ ಗೆದ್ದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲಬೇಕೆನ್ನುವುದೇ ಯು.ಟಿ ಖಾದರ್ ಮನೋಭಾವ. ತಾನು ರಾಜ್ಯದ ಪ್ರಭಾವಿ ಮಂತ್ರಿಯಾಗುವ ಉದ್ದೇಶ ಮಾತ್ರ ಖಾದರ್ ಅವರಿಗೆ ಇದೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಲೇವಡಿ ಮಾಡಿದ್ದಾರೆ.
ತೊಕ್ಕೊಟ್ಟು ಬಳಿಯ ಪಂಡಿತ್ ಹೌಸ್ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಉಭಯ ಜಿಲ್ಲೆಗಳಲ್ಲಿ ಕಾಂಗ್ರೆಸ್ಸಿಗೆ ದಕ್ಕಿರುವಂತಹ ಏಕೈಕ ಕ್ಷೇತ್ರ ಉಳ್ಳಾಲ. ಶಾಸಕ ಯು.ಟಿ ಖಾದರ್ ಬಯಸುವುದು ಕೂಡ ಅದನ್ನೇ. ಯು.ಟಿ.ಖಾದರ್ ಮನೋಭಾವ ಎಂದರೆ ಎರಡೂ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸೋಲಬೇಕು, ನಾನೊಬ್ಬ ಗೆದ್ದು ಹೊಸ ಸರಕಾರದಲ್ಲಿ ಪ್ರಭಾವಿ ಮಂತ್ರಿಯಾಗಬೇಕು ಅನ್ನುವುದೇ ಖಾದರ್ ಗುರಿ. ಹಿಂದೂಗಳಿಗೆ ಅನ್ಯಾಯವಾದಾಗ ಬಿಜೆಪಿ ಬೀದಿಗಿಳಿದು ಹೊರಾಡಿರುವುದನ್ನು ಎಲ್ಲರೂ ಗಮನಿಸಿದ್ದೇವೆ. ಆದರೆ ಅಲ್ಪಸಂಖ್ಯಾತರ ಪಕ್ಷ ಎಂದೇ ಗುರುತಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ಹಾಗೂ ಯು.ಟಿ ಖಾದರ್ ಅಲ್ಪಸಂಖ್ಯಾತರಿಂದ ಓಟು ಪಡೆದು ಅವರನ್ನು ಓಟು ಪಡೆಯುವ ಯಂತ್ರಗಳ ಹಾಗೆ ನೋಡುತ್ತಿದ್ದಾರೆ ಹೊರತು ಅವರ ಸಮುದಾಯದವರಿಗೆ ಅನ್ಯಾಯವಾದಾಗ ಕಣ್ಣೀರು ಒರೆಸುವಂತೆ ನಾಟಕವಾಡಿ ಕೇವಲ ಸುದ್ಧಿಗೋಷ್ಠಿ ಒಂದನ್ನು ನಡೆಸಿ ತಣ್ಣೀರು ಎರಚುವ ಕೆಲಸ ಮಾಡುತ್ತಿದ್ದಾರೆ.
ಮೋದಿಯವರ ಆಡಳಿತದಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ಯೋಜನೆಗಳನ್ನು ರೂಪಿಸಿಲ್ಲ, ಸರ್ವ ಜಾತಿ , ಸಮಾನತೆಯ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಸಮಾನತೆಯನ್ನು ಸಾರುವ ಉಳ್ಳಾಲ ಬಿಜೆಪಿಯ ಅಭ್ಯರ್ಥಿ ಸತೀಶ್ ಕುಂಪಲರನ್ನು ಗೆಲ್ಲಿಸಿದಾಗ ಕ್ಷೇತ್ರದುದ್ದಕ್ಕೂ ಅಭಿವೃದ್ಧಿಯ ಜೊತೆಗೆ ಎಲ್ಲರನ್ನು ಸಮಾನತೆಯಿಂದ ಕಾಣಲು ಸಾಧ್ಯ. ಬಿಜೆಪಿಯ ಎಲ್ಲಾ ಶಾಸಕ ಸ್ಥಾನದ ಆಕಾಂಕ್ಷಿಗಳು ಪಕ್ಷ ಗುರುತಿಸಿದ ಅಭ್ಯರ್ಥಿ ಜೊತೆಗೆ ಒಗ್ಗಟ್ಟಾಗಿ ದುಡಿಯುವುದರಿಂದ ಈ ಬಾರಿ ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ. ಹಿಂದುತ್ವ, ರಾಷ್ಟ್ರೀಯತೆ ಮತ್ತು ಅಭಿವೃದ್ಧಿ ಪರವಾಗಿರುವ ಪಕ್ಷ ಬಿಜೆಪಿ. ಪ್ರಪಂಚವೇ ಸನಾತನ ಧರ್ಮವನ್ನು ಸರ್ವಶ್ರೇಷ್ಠ ಅನ್ನುವ ಕಾಲದಲ್ಲಿ ಅದನ್ನೇ ವಿರೋಧಿಸಿದ ಮಲ್ಲಿಕಾರ್ಜುನ ಖರ್ಗೆಯನ್ನೇ ಕಾಂಗ್ರೆಸ್ ರಾಷ್ಷ್ಟಾಧ್ಯಕ್ಷನನ್ನಾಗಿ ಮಾಡುತ್ತದೆ. ರಾಹುಲ್ ಗಾಂಧಿ, ಸಿದ್ಧರಾಮಯ್ಯ ನೇರವಾಗಿ ಹಿಂದುತ್ವದ ವಿರೋಧಿಗಳೆಂದು ಘೋಷಣೆ ಮಾಡಿದ್ದಾರೆ. ಹಿಂದುತ್ವದ ವಿರೋಧ, ಹಿಂದೂಗಳ ವಿರೋಧ ಎರಡೂ ಒಂದೇ ಆಗಿದೆ. ಬಿಜೆಪಿ ಹಿಂದುತ್ವದ ಪರವಾಗಿರುವಂತಹ ಪಕ್ಷ, ಕಾಂಗ್ರೆಸ್ ಮತ್ತು ಜೆಡಿಎಸ್ ಅಲ್ಪಸಂಖ್ಯಾತರ ಪಕ್ಷ ಅನ್ನುವುದು ಸಾಬೀತಾಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಚುನಾವಣಾ ಉಸ್ತುವಾರಿ ರವೀಂದ್ರ ಶೆಟ್ಟಿ ಉಳಿದೊಟ್ಟು ಮೊದಲಾದವರು ಉಪಸ್ಥಿತರಿದ್ದರು.
BJP leader Pramod Madhwaraj slams Ullal MLA UT Khader in Thokottu, Mangalore. Khader is such an MLA that he causes division among Congress leaders, after which he bags victory. His intention is that all Congress MLAs in both Mangalore and Udupi must lose, and he alone must bag the seat to be the state minister.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm