ಅಭಿವೃದ್ಧಿಗೆ ಕೈಜೋಡಿಸಿ ; ಮನೆ ಮನೆ ಭೇಟಿ ಅಭಿಯಾನದಲ್ಲಿ ವೇದವ್ಯಾಸ ಕಾಮತ್ ಮನವಿ 

28-04-23 09:58 pm       Mangalore Correspondent   ಕರಾವಳಿ

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಹೈೂಗೆಬಜಾರ್ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಡಿ.ವೇದವ್ಯಾಸ್ ಕಾಮತ್ ಮನೆ ಮನೆಗೆ ತೆರಳಿ ಮತ ಯಾಚಿಸಿದರು.

ಮಂಗಳೂರು, ಎ.28 : ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಹೈೂಗೆಬಜಾರ್ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಡಿ.ವೇದವ್ಯಾಸ್ ಕಾಮತ್ ಮನೆ ಮನೆಗೆ ತೆರಳಿ ಮತ ಯಾಚಿಸಿದರು.

ಅಭಿವೃದ್ಧಿ ವಿಷಯದಲ್ಲಿ ಮಂಗಳೂರು ನಗರ ಸಾಗಿರುವ ಹಾದಿಯೇ, ಮತದಾರರು ನಮ್ಮನ್ನು ಪುನರ್ ಆಯ್ಕೆ ಮಾಡಲು ಇರುವ ಪ್ರಮುಖ ಅಂಶ. ಈ ಬಾರಿಯೂ ಬಿಜೆಪಿ ಅಧಿಕಾರಯುತ ಗೆಲುವು ಸಾಧಿಸುವುದು ನಿಚ್ಚಳ. ಭವಿಷ್ಯದ ಜನಾಂಗ ಮಂಗಳೂರು ನಗರವನ್ನು ಯಾವ ರೀತಿಯಲ್ಲಿ ನೋಡ ಬಯಸುತ್ತಾರೋ ಅಂತಹ ನಗರವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ. ದಯವಿಟ್ಟು ನಮ್ಮೊಂದಿಗೆ ಕೈ ಜೋಡಿಸಿ" ಎಂದು ಕಾಮತ್ ಅವರು ಮತದಾರರಲ್ಲಿ ಮನವಿ ಮಾಡಿದರು. ಸ್ಥಳೀಯ ಬಿಜೆಪಿ ಮುಖಂಡರು, ವಾರ್ಡಿನ ಹಲವು ಕಾರ್ಯಕರ್ತರು, ವೇದವ್ಯಾಸ ಕಾಮತ್ ಅವರಿಗೆ ಈ ಸಂದರ್ಭದಲ್ಲಿ ಸಾಥ್ ನೀಡಿದರು.

ಮಹಿಳಾ ಮೋರ್ಚಾ ಕಾರ್ಯಕರ್ತರ ಮನೆ ಮನೆ ಭೇಟಿ 

ಮಣ್ಣಗುಡ್ಡ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪರ ಮಹಿಳಾ ಮೋರ್ಚಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಮಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರನ್ನು ಮತ್ತೆ ಗೆಲ್ಲಿಸಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ವೇದವ್ಯಾಸ ಕಾಮತ್ ಪತ್ನಿ ವೃಂದಾ ವಿ. ಕಾಮತ್ ಮನವಿ ಮಾಡಿದರು.‌‌ ಈ ಸಂದರ್ಭದಲ್ಲಿ ಮಂಜುಳಾ ಅನಿಲ್ ರಾವ್, ಪೂಜಾ ಪ್ರಶಾಂತ್ ಪೈ, ಸಂಧ್ಯಾ ಮೋಹನ್ ಆಚಾರ್ಯ, ವಿನಯ ಸಂತೋಷ್ ಶೆಟ್ಟಿ, ಗೀತ ಶಿವು ದೇಶ್ಕೋಡಿ, ವಿನಯ ಕಾಮತ್ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

Mangalore House to house campaign by BJP MLA Vedavyas Kamath.