ಸಲಿಂಗಿಗಳ ಮದುವೆಗೆ ಮಾನ್ಯತೆ ಕೊಡಬೇಡಿ, ಹಿಂದು ಸಂಸ್ಕೃತಿಗೆ ವಿರುದ್ಧ, ದೇಶಕ್ಕೆ ಅಪಾಯ ; ಸುಪ್ರೀಂ ಕೋರ್ಟಿಗೆ ವಜ್ರದೇಹಿ ಸ್ವಾಮೀಜಿ   

28-04-23 07:26 pm       Mangalore Correspondent   ಕರಾವಳಿ

ಸಲಿಂಗ ಕಾಮಿಗಳ ಮದುವೆಗೆ ಸುಪ್ರೀಂ ಕೋರ್ಟ್ ಕಾನೂನು ಮಾನ್ಯತೆ ಕೊಡಬಾರದು. ಇದು ಪ್ರಕೃತಿಯ ವಿರುದ್ಧ ಮತ್ತು ಹಿಂದು ಸಂಸ್ಕೃತಿ, ಪದ್ಧತಿಗೆ ವಿರುದ್ಧವಾದುದು.

ಮಂಗಳೂರು, ಎ.28: ಸಲಿಂಗ ಕಾಮಿಗಳ ಮದುವೆಗೆ ಸುಪ್ರೀಂ ಕೋರ್ಟ್ ಕಾನೂನು ಮಾನ್ಯತೆ ಕೊಡಬಾರದು. ಇದು ಪ್ರಕೃತಿಯ ವಿರುದ್ಧ ಮತ್ತು ಹಿಂದು ಸಂಸ್ಕೃತಿ, ಪದ್ಧತಿಗೆ ವಿರುದ್ಧವಾದುದು. ಈ ರೀತಿಯ ಮದುವೆಗಳಿಗೆ ಭಾರತದಲ್ಲಿ ಅಂಗೀಕಾರ ಕೊಡಬಾರದು ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.

ವಿಶ್ವ ಹಿಂದು ಪರಿಷತ್ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಜ್ರದೇಹಿ ಸ್ವಾಮೀಜಿ, ಸಲಿಂಗಿಗಳ ಅಥವಾ ಒಂದೇ ಲಿಂಗತ್ವದವರು ಮದುವೆಯಾಗುವುದು ಭಾರತೀಯ ಸನಾತನ ಸಂಸ್ಕೃತಿಗೆ ವಿರುದ್ಧ. ಈ ಬಗ್ಗೆ ಸುಪ್ರೀಂ ಕೋರ್ಟ್ ಕಾನೂನು ಮಾನ್ಯತೆ ನೀಡಿದರೆ, ಅದರಿಂದ ಹಿಂದುಗಳ ಭಾವನೆಗೆ ಘಾಸಿ ಮಾಡಿದಂತಾಗುವುದು. ಮದುವೆ ಅನ್ನುವುದು ಭಾರತೀಯ ಸಂಸ್ಕೃತಿಯಲ್ಲಿ ಉನ್ನತ ಉದ್ದೇಶ ಮತ್ತು ಮಹತ್ವ ಹೊಂದಿದೆ. ಪುರುಷ ಮತ್ತು ಮಹಿಳೆ ಹೀಗೆ ದ್ವಿಲಿಂಗಿಗಳ ಮದುವೆಯಿಂದ ಸಂತಾನ ಪ್ರಾಪ್ತಿಯ ಜೊತೆಗೆ ಲೈಂಗಿಕ ಕಾಮನೆಗಳ ಈಡೇರಿಸುವುದಕ್ಕೆ ಅವಕಾಶ ನೀಡುತ್ತದೆ. ಇದರಿಂದ ಉತ್ತಮ ಪ್ರಜೆಗಳ ಸ್ಥಾಪನೆ, ಸಂತಾನ ಸೃಷ್ಟಿಗೂ ದಾರಿ ತೋರಿಸುತ್ತದೆ. ಆದರೆ, ಒಂದೇ ಲಿಂಗದವರು ಮದುವೆಯಾದಲ್ಲಿ ಸಂತಾನ ಉತ್ಪತ್ತಿ ಸಾಧ್ಯವಿಲ್ಲ. ಇದರಿಂದ ಭವಿಷ್ಯದ ಭಾರತಕ್ಕೆ ಅಪಾಯ ಬರಲಿದೆ ಎಂದರು.

Justice Abhijit Gangopadhyay - Supreme Court asks Calcutta High Court  acting chief Justice Abhijit Gangopadhyay to reassign Bengal school jobs  'scam' case to other bench - Telegraph India

ಸುಪ್ರೀಂ ಕೋರ್ಟ್ ಈ ರೀತಿಯ ಮದುವೆಗಳಿಗೆ ಕಾನೂನು ಮಾನ್ಯತೆ ನೀಡಿದರೆ, ಆ ಸಮುದಾಯ ಮುಂದೆ ಪ್ರತ್ಯೇಕ ಮೀಸಲಾತಿಗೂ ಆಗ್ರಹಿಸುವ ಸಾಧ್ಯತೆಯಿದೆ. ಇದರಿಂದ ಸಮಾಜದಲ್ಲಿ ಬಿರುಕು, ಸಂಘರ್ಷ ಉಂಟಾಗುವ ಪ್ರಮೇಯ ಬರಬಹುದು ಎಂದು ಹೇಳಿದ ಸ್ವಾಮೀಜಿ, ಒಂದು ವೇಳೆ ಸುಪ್ರೀಂ ಕೋರ್ಟ್ ಇಂತಹ ಮದುವೆಗಳಿಗೆ ಮಾನ್ಯತೆ ನೀಡಿದರೆ ಬೀದಿ ಹೋರಾಟವನ್ನೂ ಮಾಡುತ್ತೇವೆ. ಜೊತೆಗೆ, ಕಾನೂನು ಹೋರಾಟವನ್ನೂ ಮಾಡುತ್ತೇವೆ. ಭಾರತದ ಸಂಸ್ಕೃತಿ ವಿನಾಶಕ್ಕೆ ಹಾದಿ ಮಾಡಿಕೊಡುವ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.

ಪುತ್ತೂರಿನಲ್ಲಿ ಅರುಣ್ ಪುತ್ತಿಲ ಸ್ಪರ್ಧೆಯ ವಿಚಾರದಲ್ಲ ಕೇಳಿದ ಪ್ರಶ್ನೆಗೆ, ಹಿಂದುತ್ವ ವಿಚಾರದಲ್ಲಿ ನಮ್ಮಲ್ಲಿ ಬದ್ಧತೆ ಇದೆ. ಪುತ್ತಿಲ ಅವರು ಹಿಂದುತ್ವವಾದಿಯೇ ಆಗಿದ್ದರೂ ಈಗ ರಾಜಕೀಯಕ್ಕೆ ಇಳಿದಿದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಿ ಭಾಜಪ ಹಿಂದುತ್ವ ಪರವಾಗಿದೆ. ನಮ್ಮ ಬೆಂಬಲ ಭಾಜಪಕ್ಕೆ ಮಾತ್ರ. ಅರುಣ್ ಪುತ್ತಿಲ ವ್ಯವಸ್ಥೆಯನ್ನು ಬಿಟ್ಟು ಹೋಗಿದ್ದಾರೆ. ಅದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದರು ಗುರುಪುರ ಸ್ವಾಮೀಜಿ.

ವಿದ್ಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಈ ರೀತಿಯ ಪ್ರಯತ್ನಗಳು ದೇಶದ ಭವ್ಯ ಪರಂಪರೆ, ಸಂಸ್ಕೃತಿಗೆ ಹೊಡೆತ ಕೊಡುವಂಥವು. ಅಪಾಯದ ಎಚ್ಚರಿಕೆಯೂ ಹೌದು ಎಂದರು. ಸುದ್ದಿಗೋಷ್ಟಿಯಲ್ಲಿ ಉಡುಪಿ ಶಂಕರಪುರದ ಶೈಲೇಶ್ವರ ಗುರೂಜಿ ಉಪಸ್ಥಿತರಿದ್ದರು.

The Supreme Court should not give legal recognition for same-sex marriage. It is against nature and Hindu culture and customs," said Gurpur Vajradehi Math Seer Sri Rajashekarananda Swami.