ಬ್ರೇಕಿಂಗ್ ನ್ಯೂಸ್
28-04-23 03:48 pm Mangalore Correspondent ಕರಾವಳಿ
ಪುತ್ತೂರು, ಎ.28 : ಸಂಘಟನೆಗಿಂತ ತಾನೇ ಮಿಗಿಲು ಎಂದ ಸಾಕಷ್ಟು ನಾಯಕರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಕಂಡಿದೆ. ಇದೇ ನೆಪದಲ್ಲಿ ಸಂಘಟನೆ ಬಿಟ್ಟು ಹೋದವರಿದ್ದಾರೆ. ಇದರಲ್ಲಿ ಪುತ್ತೂರಿನ ಪಕ್ಷೇತರ ಅಭ್ಯರ್ಥಿಯೂ ಒಬ್ಬರು ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಹೇಳಿದ್ದಾರೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಕ್ತಿ ನಿರ್ಮಾಣ ಕಾರ್ಯವನ್ನು ಸಂಘ ನಿರಂತರ ಮಾಡಿಕೊಂಡು ಬರುತ್ತಿದೆ. ದೇಶದ ಪ್ರಧಾನಿ ಆಗಿರುವ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಘದ ಕೊಡುಗೆ. ಅವರ್ಯಾರೂ ತಾವು ಪ್ರಧಾನಿ ಆಗುತ್ತೇವೆ, ರಾಷ್ಟ್ರಪತಿ ಆಗುತ್ತೇವೆಂದು ಅಂದ್ಕೊಂಡವರಲ್ಲ. ಇದರ ನಡುವೆ, ಸಂಘದ ಚೌಕಟ್ಟನ್ನು ಮೀರಿ ಹೊರ ನಡೆದ ಹಲವಾರು ಮಂದಿ ನಾಯಕರು ದೇಶದಲ್ಲಿದ್ದಾರೆ.
ಕಲ್ಯಾಣ್ ಸಿಂಗ್ , ಪ್ರವೀಣ್ ತೊಗಾಡಿಯಾ ದೊಡ್ಡ ಮಟ್ಟದ ನಾಯಕರಾಗಿದ್ದರು. ಆದರೆ ತಾವು ನಡೆದಿದ್ದೇ ಸರಿಯೆಂದು ಸಂಘದ ಚೌಕಟ್ಟನ್ನು ಬಿಟ್ಟು ಹೊರ ನಡೆದರು. ಇದೆಲ್ಲ ನಡೆದಿದ್ದರೂ, ಸಂಘ ತನ್ನ ಚೌಕಟ್ಟಿಗೆ ಬದ್ಧವಾಗಿಯೇ ನಿಂತಿದೆ ಎಂದರು. ಬಿಜೆಪಿ ಅಭ್ಯರ್ಥಿ ವಿರುದ್ಧ ಪಕ್ಷೇತರವಾಗಿ ನಿಂತಿರುವ ಅರುಣ್ ಕುಮಾರ್ ಪುತ್ತಿಲ ತಾನು ಮೋದಿ ಹೆಸರಿನಲ್ಲಿ ಮತ ಯಾಚಿಸುತ್ತಿದ್ದೇನೆ ಅಂತಾರೆ. ಆದರೆ ಬಿಜೆಪಿ ಅಭ್ಯರ್ಥಿ ಆಯ್ಕೆಯನ್ನು ಮಾಡಿರುವುದೇ ನರೇಂದ್ರ ಮೋದಿ ನೇತೃತ್ವದ ತಂಡ ಅನ್ನೋದು ಅವರಿಗೆ ತಿಳಿದಿಲ್ಲವೇ.. ಸಂಘದ ಚೌಕಟ್ಟು ಹೊರಗೆ ನಿಂತು ಮೋದಿಗೆ ಬೆಂಬಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
ಸದ್ಯದ ಮಟ್ಟಿಗೆ ದೇಶದಲ್ಲಿ ಹಿಂದೂಗಳ ಪರವಾಗಿರುವ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ. ಅದಕ್ಕಾಗಿ ಬಿಜೆಪಿಗೇ ಮತ ಕೊಡಬೇಕು ಎನ್ನುವುದು ನಮ್ಮ ನಿಲುವು. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ತಡೆ ಕಾಯ್ದೆ ವಾಪಸು ಪಡೆಯುವುದಾಗಿ ಹೇಳಿದ್ದಾರೆ. ಈ ಕಾರಣಕ್ಕಾಗಿ ಹಿಂದುಗಳೆಲ್ಲಾ ಬಿಜೆಪಿಯನ್ನು ಬೆಂಬಲಿಸಬೇಕೆಂದು ಮುರಳಿಕೃಷ್ಣ ಮನವಿ ಮಾಡಿದರು.
Bajarang dal leader Puttur Muralikrishan slams those calling themsleves as big Hindu Leaders. Congress should never come to power he added.
23-09-26 11:02 pm
HK News Desk
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
23-09-26 04:21 pm
HK News Staffer
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
23-09-26 10:47 pm
HK News Desk
ಉತ್ತರಾಖಂಡದ ಯಮುನೋತ್ರಿಯಲ್ಲಿ ಕುಂಪಲದ ವ್ಯಕ್ತಿ ಹೃದಯ...
23-09-26 09:55 am
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್...
22-09-26 08:32 pm
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
23-09-26 09:28 pm
HK News Staffer
ಕರ್ತವ್ಯ ಲೋಪ, ಲಂಚಬಾಕತನ, ಅನುಚಿತ ವರ್ತನೆ ಬಗ್ಗೆ ದೂ...
23-09-26 09:24 pm
ಶಾರ್ಜಾದಲ್ಲಿ ಆಲ್ವಿನ್ ಪ್ರಕಾಶ್ ಕುಂದರ್ ಬರ್ಬರ ಹತ್ಯ...
23-09-26 09:22 pm
sudarshan jain, murder, manglore: ಮೂಡುಬಿದ್ರೆ...
23-09-26 08:12 pm
ಪತ್ನಿಯ ಮೃತದೇಹ ಕೆರೆಯಲ್ಲಿ ಪತ್ತೆ ಬೆನ್ನಲ್ಲೇ ಪತಿ ನ...
23-09-26 05:12 pm