ಕಾಂಗ್ರೆಸ್ ಐದನೇ ಗ್ಯಾರಂಟಿ ಘೋಷಣೆ ; ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ- ಮಂಗಳೂರಿನಲ್ಲಿ ರಾಹುಲ್ ಗಾಂಧಿ  

27-04-23 07:49 pm       Mangalore Correspondent   ಕರಾವಳಿ

​​​​​ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಿಗೆ ಸರ್ಕಾರಿ ಸಾರಿಗೆಯಲ್ಲಿ ಉಚಿತ ಬಸ್ ಪ್ರಯಾಣದ ಘೋಷಣೆ ಮಾಡಲಾಗಿದೆ. ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸಿನ ಐದನೇ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. 

ಮಂಗಳೂರು, ಎ.27 : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಿಗೆ ಸರ್ಕಾರಿ ಸಾರಿಗೆಯಲ್ಲಿ ಉಚಿತ ಬಸ್ ಪ್ರಯಾಣದ ಘೋಷಣೆ ಮಾಡಲಾಗಿದೆ. ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸಿನ ಐದನೇ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. 

ಮಂಗಳೂರಿನ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ರಾಹುಲ್ ಹೊಸ ಘೋಷಣೆ ಮಾಡಿದ್ದಾರೆ. ‌ಮೋದಿಯವರೇ ನೀವು, ಕಾಂಗ್ರೆಸಿನ ನಾಲ್ಕು ಭರವಸೆ ಈಡೇರಿಸಲು ಆಗಲ್ಲ ಎಂದಿದ್ದೀರಿ.. ಆದರೆ ನಾವು ಅಧಿಕಾರಕ್ಕೆ ಬಂದ ಮೊದಲ ದಿನವೇ ಕ್ಯಾಬಿನೆಟ್ ಮೀಟಿಂಗ್ ಕರೆದು ನಾಲ್ಕು ಅಲ್ಲ, ಐದು ಭರವಸೆಗಳನ್ನು ಅನುಷ್ಠಾನಕ್ಕೆ ತರಲಿದ್ದೇವೆ. ಮಹಿಳೆಯರಿಗೆ ಸರ್ಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕೊಡುತ್ತೇವೆ. ನಿಮ್ಮ ಸರ್ಕಾರ ಮಹಿಳೆಯರಿಂದ ನಲ್ವತ್ತು ಪರ್ಸೆಂಟ್ ಕಳ್ಳತನ ಮಾಡಿದೆ. ನಮ್ಮ ಸರ್ಕಾರ ಬಂದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಟ್ಟು ಕಳವಾದ ಮೊತ್ತವನ್ನು ಈಡೇರಿಸುತ್ತೇವೆ ಎಂದು ಹೇಳಿದರು.‌

ಮೋದಿಯವರೇ ನೀವು ಪ್ರತಿ ಭಾಷಣದಲ್ಲಿ ಭರವಸೆಗಳನ್ನು ಕೊಡ್ತೀರಿ, ಯಾವುದನ್ನಾದರೂ ಈಡೇರಿಸಿದ್ದೀರಾ..? ಆದರೆ ದೇಶದ ಬಂದರು, ಏರ್ಪೋರ್ಟನ್ನು ಅದಾನಿಗೆ ಕೊಟ್ಟಿದ್ದೀರಿ.‌ ಮಂಗಳೂರು ಜೊತೆಗೆ ನನಗೆ ಹಳೆಯ ಸಂಬಂಧ ಇದೆ. ಮಂಗಳೂರು ಬಂದರನ್ನು ಇಂದಿರಾ ಗಾಂಧಿ ಆರಂಭಿಸಿದ್ದರು. ಏರ್ಪೋರ್ಟ್, ಎಂಸಿಎಫ್ ಕಾರ್ಖಾನೆ ಕಾಂಗ್ರೆಸ್ ಕಾಲದಲ್ಲಿ ಸ್ಥಾಪನೆ ಆಗಿತ್ತು. ಕರಾವಳಿಯ ಹೆಮ್ಮೆಯ ನಾಲ್ಕು ಬ್ಯಾಂಕುಗಳನ್ನು ಒಂದಕ್ಕೊಂದು ವಿಲೀನ ಮಾಡಿದ್ದು ಇನ್ನಿಲ್ಲವಾಗಿಸಿದ್ದು ಬಿಜೆಪಿ ಸಾಧನೆ. ಈ ಬಾರಿ ಕಾಂಗ್ರೆಸ್ 150 ಸೀಟು ಗೆಲ್ತೀವಿ, ನಾವು ಅಧಿಕಾರಕ್ಕೆ ಏರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ‌. ಬಿಜೆಪಿ ನಲ್ವತ್ತು ಪರ್ಸೆಂಟ್ ಸರ್ಕಾರ, ಅವರಿಗೆ ನಲ್ವತ್ತು ಸ್ಥಾನಗಳನ್ನಷ್ಟೇ ಕೊಡಿ ಎಂದು ಮತದಾರರಿಗೆ ರಾಹುಲ್ ಕರೆ ನೀಡಿದರು. 

ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಿದ್ದು ಜನಾದೇಶದಿಂದ ಅಲ್ಲ.‌ ಬದಲಿಗೆ ಶಾಸಕರ ಕಳ್ಳತನದಿಂದ ಬಿಜೆಪಿ ಸರಕಾರ ಬಂದಿತ್ತು. ಭ್ರಷ್ಟಾಚಾರದ ದುಡ್ಡಿನಿಂದ ಬಿಜೆಪಿ ರಾಜ್ಯದಲ್ಲಿ ಸರಕಾರ ರಚನೆ ಮಾಡಿತ್ತು.‌ ಬಿಜೆಪಿಯ ಒಬ್ಬರು, ಇದು ಮೋದಿ ಕೈಗೆ ಅಧಿಕಾರ ಕೊಡುವ ಚುನಾವಣೆ ಅಂತಾರೆ, ಹಾಗಾದ್ರೆ ಈಗ ಅಧಿಕಾರ ಯಾರ ಕೈಯಲ್ಲಿದೆ ? ಬಿಜೆಪಿಗೆ ಅಧಿಕಾರ ಕೊಟ್ಟರೆ, ನಲ್ವತ್ತು ಪರ್ಸೆಂಟ್ ಭ್ರಷ್ಟಾಚಾರಕ್ಕೆ ಮತ್ತೆ ಅವಕಾಶ ಕೊಟ್ಟಂತೆ ಎಂದು ಹೇಳಿದ ರಾಹುಲ್, ಸಿಎಂ ಹುದ್ದೆ 2500 ಕೋಟಿಗೆ ಮಾರಾಟಕ್ಕಿದೆ ಎಂದು ಬಿಜೆಪಿ ಶಾಸಕರೊಬ್ಬರು ಹಿಂದೆ ಹೇಳಿದ್ದರು. ಇದು ಇವರ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿತ್ತು.‌ಗುತ್ತಿಗೆದಾರ ಸಂಘದವರು ಪ್ರಧಾನಿಗೆ ಪತ್ರ ಬರೆದು ನಲ್ವತ್ತು ಪರ್ಸೆಂಟ್ ಕಮಿಷನ್ ಬಗ್ಗೆ ದೂರು ನೀಡಿದ್ದರು.‌ ಆದರೆ ಮೋದಿಯವರು, ಅದರ ಬಗ್ಗೆ ಚಕಾರ ಎತ್ತಿಲ್ಲ, ದೂರನ್ನೂ ಸ್ವೀಕರಿಸಿಲ್ಲ.‌ ದಿಂಗಲೇಶ್ವರ ಸ್ಚಾಮೀಜಿ ತಮಗೆ ಬಂದ ಅನುದಾನದಲ್ಲಿ 30 ಪರ್ಸೆಂಟ್ ಕಮಿಷನ್ ಕೊಟ್ಟಿದ್ದನ್ನು ಹೇಳಿದ್ದರು. ಹೀಗಾಗಿ ಬಿಜೆಪಿಯದ್ದು ಭ್ರಷ್ಟಾಚಾರವೇ ಧರ್ಮ ಆಗಿದೆ. 

ಹಿಂದೆ 400 ರೂ. ಇದ್ದ ಗ್ಯಾಸ್ ಸಿಲಿಂಡರ್ ಬೆಲೆ 1100 ಆಗಿದೆ, ಬೆಲೆಯೇರಿಕೆಯಿಂದ ದೇಶದ ಜನ ತತ್ತರಿಸಿದ್ದಾರೆ.‌ ಇದರಿಂದಾಗಿ ದೇಶದಲ್ಲಿ 40 ಕೋಟಿ ಜನ ಬಿಪಿಎಲ್ ರೇಖೆಯೊಳಗೆ ಹೋಗಿದ್ದಾರೆ, ಆದರೆ ಒಂದು ಶೇ. ಜನರಲ್ಲಿ ದೇಶದ ಒಟ್ಟು ಬಂಡವಾಳ ಶೇಖರಗೊಂಡಿದೆ. 1.6 ಲಕ್ಷ ಜನ ದೇಶದಲ್ಲಿ ಉದ್ಯೋಗ ಕಳಕೊಂಡಿದ್ದಾರೆ, ಇದು ಬಿಜೆಪಿ ಸರ್ಕಾರದ ಕೊಡುಗೆ. 

ಸಂಸತ್ತಿನಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಸದಸ್ಯತ್ವದಿಂದಲೇ ಅನರ್ಹ ಮಾಡಿದ್ರು. ಅದಾನಿ ಜೊತೆಗೆ ಮೋದಿ ಸಂಬಂಧ ಏನೆಂದು ನಾನು ಕೇಳಿದ್ದೆ, ಸ್ವಿಸ್ ಬ್ಯಾಂಕ್ ಅಕೌಂಟ್ ಎಲ್ಲಿದೆ ಎಂದಿದ್ದೆ. ಆದರೆ ಸಂಸತ್ತಿನಲ್ಲಿ ನನ್ನ ಮಾತನ್ನು ಕಿತ್ತು ಹಾಕಿದ್ರು, ಸಂಸತ್ ಸದಸ್ಯತ್ವದಿಂದಲೇ ಅನರ್ಹ ಮಾಡಿದ್ರು ಎಂದ ರಾಹುಲ್ ಗಾಂಧಿ, ಹಿಂದೆ ಹಿಮಾಚಲದಲ್ಲಿ ಗ್ಯಾರಂಟಿ ಕೊಟ್ಟಿದ್ದನ್ನು ನಾವು ಈಡೇರಿಸಿದ್ದೇವೆ.‌ ನಾವು ಅಧಿಕಾರಕ್ಕೆ ಬಂದ ಮೊದಲ ದಿನವೇ ಕ್ಯಾಬಿನೆಟ್ ನಲ್ಲಿ ಐದು ಭರವಸೆಗಳನ್ನು ಈಡೇರಿಸಲು ನಿರ್ಣಯ ಮಾಡ್ತೀವಿ. ಮೋದಿಗೆ ಕೇಳುತ್ತೇನೆ, ಗ್ಯಾರಂಟಿ ಭರವಸೆ ಅನುಷ್ಠಾನ ತರುತ್ತೇವೆ, ಮೋದಿ ಇಡೀ ದೇಶದಲ್ಲಿ ನಮ್ಮ ಭರವಸೆಗಳನ್ನು ಅನುಷ್ಠಾನಕ್ಕೆ ತರಲಿ ಎಂದರು.‌

Rahul Gandhi in Mangalore, adress the gathering Rahul released the 5th congress package stating free bus pass for womens in Karnataka. The program was organised at Adyar Shayadri college grounds. BJP has only stolen 40 percent comission in all the works he slammed.Following the tradition, senior Congress leader and former MP Rahul Gandhi stopped his speech during Azaan (Muslim call to prayers) when he was addressing a rally in Mangaluru district of Karnataka.