ಬ್ರೇಕಿಂಗ್ ನ್ಯೂಸ್
27-04-23 03:48 pm Mangalore Correspondent ಕರಾವಳಿ
ಪುತ್ತೂರು, ಎ.27: ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಪರವಾಗಿ ಭಾರೀ ಬೆಂಬಲ ವ್ಯಕ್ತವಾಗುತ್ತಿರುವ ನಡುವಲ್ಲೇ ಆರೆಸ್ಸೆಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಪುತ್ತಿಲ ವಿರುದ್ಧ ಹರಿಹಾಯ್ದಿದ್ದಾರೆ. ಅರುಣ್ ಪುತ್ತಿಲ ಯಾವ ರೀತಿಯ ಹಿಂದುತ್ವ ಹೋರಾಟ ಮಾಡಿದ್ದಾರೆ ಎಂದು ಕಲ್ಲಡ್ಕ ಭಟ್ ಪ್ರಶ್ನೆ ಮಾಡಿದ್ದಾರೆ.
ಇಡೀ ಜಗತ್ತೇ ಬಿಜೆಪಿಯನ್ನು ಹಿಂದುತ್ವದ ಪಾರ್ಟಿ ಎಂದು ಒಪ್ಪಿಕೊಂಡಿರುವಾಗ ಪುತ್ತೂರಿನಲ್ಲಿ ಯಾರೋ ಒಬ್ಬ ನನ್ನದೇ ನೈಜ ಹಿಂದುತ್ವ ಎಂದು ಹೇಳುತ್ತಿದ್ದಾನೆ. ಎಲ್ಲಿ ಹಿಂದುತ್ವದ ಹೋರಾಟ ಮಾಡಿದ್ದಾನೆ. ಯಾರೋ ಗೋಸಾಗಾಟ ಮಾಡಿದಾಗ ಜೊತೆಗೆ ನಿಂತಿದ್ದರೆ ಅದು ಹಿಂದುತ್ವವಾ.. ಅವನು ಹಿಂದುಗಳ ವಿರುದ್ಧವೇ ಹೋರಾಟ ಮಾಡಿರೋದು. ನೀವು ಬೇಕಿದ್ದರೆ ಅವನ ಅಫಿಡವಿಟನ್ನು ನೋಡಿ. ಅದರಲ್ಲೇ ಬರೆದುಕೊಂಡಿದ್ದಾನೆ. ಏನೆಲ್ಲ ಕೇಸುಗಳಿವೆ ಅಂತ. ಹಿಂದುಗಳಿಗೆ ಹೊಡೆದವರು, ದೇವಸ್ಥಾನದ ಹಣ ಹೊಡೆದವರು, ಯಾವುದೋ ರವೀಂದ್ರ ಪೂಜಾರಿ ಎಂಬವರ ಜಾಗ ಕೊಡಿಸಬೇಕೆಂದು ಗಲಾಟೆ ಮಾಡಿಸಿ 307 ಸೆಕ್ಷನ್ ಹಾಕಿಸಿಕೊಂಡವರು. ಇದೆಲ್ಲ ಎಂಥ ಹಿಂದುತ್ವರೀ.. ಪಾಪ, ಅನೇಕ ಮಕ್ಕಳಿಗೆ ಅದೆಲ್ಲ ಗೊತ್ತಿಲ್ಲ. ಭಾರತೀಯ ಜನತಾ ಪಾರ್ಟಿಗಿಂತ ದೊಡ್ಡ ಹಿಂದುತ್ವ ಸಂಘಟನೆ ಇಲ್ಲ. ಇಡೀ ಜಗತ್ತಿನಲ್ಲಿ ಎರಡನೇ ದೊಡ್ಡ ವ್ಯಕ್ತಿಯಾಗಿರುವ, ಕೇಂದ್ರ ಗೃಹ ಸಚಿವ ಅಮಿತ್ ಷಾ ತಾನೇ ಅವರಲ್ಲಿ ಮಾತಾಡುತ್ತೇನೆ ಎಂದಾಗ, ಅದನ್ನು ಧಿಕ್ಕರಿಸಿ ನಡೆದವರು ಅರುಣ್ ಪುತ್ತಿಲ.
ಒಂದು ಪಕ್ಷ ಇಲ್ಲದೆ, ಒಬ್ಬನಿಂದ ಯಾವ ರೀತಿಯ ಹಿಂದುತ್ವ ಆಗಬಹುದು. ಏನಾದರೂ ಅಭಿವೃದ್ಧಿ ಮಾಡಲು ಸಾಧ್ಯವೇ.. ಸ್ವತಂತ್ರವಾಗಿ ನಿಂತವರು ಅಭಿವೃದ್ಧಿ ಮಾಡೋಕೆ ಸಾಧ್ಯನಾ.. ಅವನಿಗೆ ಹೇಳೋರಿಲ್ಲ, ಕೇಳೋರಿಲ್ಲ. ಸ್ವತಂತ್ರ ಅಂದರೆ ಹಾಗೇ ತಾನೇ.. ಬಿಜೆಪಿ ಅನ್ನೋದು ಅಖಿಲ ಭಾರತ ಸಂಘಟನೆ. ಪುತ್ತೂರಿಗೆ ಮಾತ್ರ ಸೀಮಿತ ಅಲ್ಲ. ಹಾಗಾಗಿ ಬಿಜೆಪಿಯನ್ನು ಎಲ್ಲರೂ ಬೆಂಬಲಿಸಬೇಕು, ಆಮೂಲಕ ಹಿಂದುತ್ವ, ದೇಶ ಉಳಿಸಬೇಕು. ಜನ ಹಾಗೇ ಮಾಡ್ತಾರೆ ಅಂದ್ಕೊಂಡಿದ್ದೇನೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಸುಳ್ಯದಲ್ಲಿ ಪ್ರವೀಣ್ ನೆಟ್ಟಾರು ಗೃಹ ಪ್ರವೇಶಕ್ಕೆ ಬಂದಿದ್ದ ಪ್ರಭಾಕರ ಭಟ್, ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ್ದಾರೆ.
Mangalore Kalladka Prabhakar Bhat slams Puttur Arun Puthila, questions him about Hindutva. Is stopping transport of cows is Hindutva he questioned. Entire word has accepted that BJP is a party for Hindus then how cab Arun say what he follows is only the real Hindutva he added.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm