ಬ್ರೇಕಿಂಗ್ ನ್ಯೂಸ್
26-04-23 09:15 pm Mangalore Correspondent ಕರಾವಳಿ
ಮಂಗಳೂರು, ಎ.26: ರಾಜ್ಯದ ಜನತೆ ಬಿಜೆಪಿ ಆಡಳಿತದಿಂದ ಭ್ರಮನಿರಸನಗೊಂಡಿದ್ದು, ಕಾಂಗ್ರೆಸಿಗೆ ಪೂರ್ಣ ಬಹುಮತ ನೀಡಲು ನಿರ್ಧರಿಸಿದ್ದಾರೆ. ಈ ಬಾರಿ ಕಾಂಗ್ರೆಸ್ 2013ರ ಚುನಾವಣೆ ಫಲಿತಾಂಶದ ರೀತಿಯಲ್ಲೇ ಬಹುಮತ ಸಾಧಿಸಲಿದೆ ಎಂದು ಎಐಸಿಸಿ ಸೆಕ್ರಟರಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಮೋದಿಗಾಗಿ ಕರ್ನಾಟಕದ ಜನತೆ ಮತ ನೀಡುತ್ತಾರೆಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಯನ್ನು ಖಂಡಿಸಿದ್ದಲ್ಲದೆ, ಹಾಗಾದರೆ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸಿದ್ದು ಯಾರು? 2018ರ ಚುನಾವಣೆಯಲ್ಲಿ ಬಿಜೆಪಿಯನ್ನು ಜನ ಮತ ನೀಡಿ ಆಯ್ಕೆ ಮಾಡಿರಲಿಲ್ಲ. ಇವರು ಕುದುರೆ ವ್ಯಾಪಾರದಿಂದ ಅಧಿಕಾರಕ್ಕೆ ಬಂದಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೂ, ಸರಿಯಾಗಿ ಆಡಳಿತ ನಡೆಸಲಿಲ್ಲ. ಭರಪೂರ ಭ್ರಷ್ಟಾಚಾರವನ್ನೇ ತಮ್ಮ ಆಡಳಿತ ಮಾಡಿಕೊಂಡಿತ್ತು. ನಲ್ವತ್ತು ಪರ್ಸೆಂಟ್ ಸರಕಾರ ಅನ್ನುವ ಕಳಂಕ ರಾಜ್ಯಕ್ಕೆ ಅಂಟಿಕೊಳ್ಳುವ ಸ್ಥಿತಿ ಬಂದಿತ್ತು. ಇದು ರಾಜ್ಯದ ಜನರಿಗೆ ತಟ್ಟಿದ ಕಳಂಕ ಎಂದು ಹೇಳಿದರು.
ಮುಖ್ಯಮಂತ್ರಿ ಬೊಮ್ಮಾಯಿ ಭ್ರಷ್ಟಾಚಾರದಲ್ಲಿ ದಾಖಲೆಯನ್ನೇ ಮಾಡಿದ್ದಾರೆ ಎಂದು ಆರೋಪಿಸಿದ ವೇಣುಗೋಪಾಲ್, ಬಿಜೆಪಿ ಸರಕಾರ ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದರು. ಜನರ ನಡುವೆ ದ್ವೇಷ ಹೆಚ್ಚಿಸಿದ್ದು ಬಿಜೆಪಿ ಸಾಧನೆ. ಒಂದೇ ಒಂದು ಉದ್ಯೋಗ ಸೃಷ್ಟಿ ಮಾಡಲು ಇವರಿಂದ ಸಾಧ್ಯವಾಗಿಲ್ಲ. ಜನರು ಉದ್ಯೋಗ ಸಿಗದೆ, ನರಳುವ ಸ್ಥಿತಿಯಾಗಿದೆ. ಮಂಗಳೂರಿನ ಮಟ್ಟಿಗೆ ಹೇಳೋದಾದ್ರೆ, ಬಿಜೆಪಿ ಸರಕಾರದ ಕೊಡುಗೆ ಶೂನ್ಯ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮೊದಲ ಅಸೆಂಬ್ಲಿ ಸಭೆಯಲ್ಲೇ ನಾವು ನೀಡಿರುವ ಗ್ಯಾರಂಟಿ ಘೋಷಣೆಗಳನ್ನು ಕಾರ್ಯಗತ ಮಾಡುತ್ತೇವೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ. ಇದಕ್ಕಾಗಿ ರಾಜ್ಯದ ಜನತೆ ಪೂರ್ಣ ಬಹುಮತದ ಸರ್ಕಾರ ನೀಡಬೇಕೆಂದು ಕೇಳಿಕೊಳ್ಳುತ್ತೇನೆ. ರಾಹುಲ್ ಗಾಂಧಿಯನ್ನು ಬಿಜೆಪಿ ಸರಕಾರ ಯಾವ ರೀತಿ ಹಿಂಸೆಗೀಡು ಮಾಡುವಂತೆ ಮಾಡಿತ್ತು ಅನ್ನೋದನ್ನು ಜನ ನೋಡಿದ್ದಾರೆ. ಆದರೂ ರಾಹುಲ್ ಗಾಂಧಿಯವರು ಸತ್ಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕೆಪಿಸಿಸಿ ಜನರಲ್ ಸೆಕ್ರಟರಿ ಪದ್ಮರಾಜ್ ರಾಮಯ್ಯ ಮತ್ತಿತರರಿದ್ದರು.
Mangalore People of state in favour of Congress rule, peopel have realised how corrupt BJP is slams K C Venugopal. Venugopal stated that the public in Karnataka has decided to bring the Congress to power and that people favor Congress. He claimed that with a complete majority, Congress would come to power, as the BJP is in a pitiable condition in the state, with no contribution to show for its governance.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm