ಸುಸಜ್ಜಿತ ಮನೆ ಕಟ್ಟಿಸಿದ್ದ ಕಾರು ಡೀಲರ್ ನಾಪತ್ತೆ ! ಸೋಮೇಶ್ವರ ರುದ್ರಪಾದೆಯಲ್ಲಿ ಶೂ, ಪರ್ಸ್, ಮೊಬೈಲ್ ಪತ್ತೆ, ಆತ್ಮಹತ್ಯೆ ಶಂಕೆ 

26-04-23 03:48 pm       Mangalore Correspondent   ಕರಾವಳಿ

ತಿಂಗಳ ಹಿಂದಷ್ಟೆ ಉಳ್ಳಾಲದ ಧರ್ಮನಗರದಲ್ಲಿ ಒಂದಸ್ತಿನ ಸುಸಜ್ಜಿತ ಮನೆ ಕಟ್ಟಿಸಿದ್ದ ಕಾರ್ ಡೀಲರ್ ಓರ್ವರು ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಲ್ಲಿ ಶೂ, ಮೊಬೈಲ್, ಪರ್ಸನ್ನ ಬಿಟ್ಟು ನಾಪತ್ತೆಯಾಗಿದ್ದು ಆತ್ಮಹತ್ಯೆಗೈದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು ನಾಪತ್ತೆಯಾದ ವ್ಯಕ್ತಿಯ ಶೋಧ ನಡೆಸುತ್ತಿದ್ದಾರೆ. 

ಉಳ್ಳಾಲ, ಎ.26 : ತಿಂಗಳ ಹಿಂದಷ್ಟೆ ಉಳ್ಳಾಲದ ಧರ್ಮನಗರದಲ್ಲಿ ಒಂದಸ್ತಿನ ಸುಸಜ್ಜಿತ ಮನೆ ಕಟ್ಟಿಸಿದ್ದ ಕಾರ್ ಡೀಲರ್ ಓರ್ವರು ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಲ್ಲಿ ಶೂ, ಮೊಬೈಲ್, ಪರ್ಸನ್ನ ಬಿಟ್ಟು ನಾಪತ್ತೆಯಾಗಿದ್ದು ಆತ್ಮಹತ್ಯೆಗೈದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು ನಾಪತ್ತೆಯಾದ ವ್ಯಕ್ತಿಯ ಶೋಧ ನಡೆಸುತ್ತಿದ್ದಾರೆ. 

ವಸಂತ್ ಅಮೀನ್ (49) ನಾಪತ್ತೆಯಾದವರು. ಮೂಲತಃ ಉಳ್ಳಾಲದ ಬಸ್ತಿಪಡ್ಪು ನಿವಾಸಿ ಆಗಿರುವ ಇವರು ಉಳ್ಳಾಲದ ಧರ್ಮನಗರದಲ್ಲಿ ಕೆಲ ತಿಂಗಳ ಹಿಂದಷ್ಟೇ ಸುಸಜ್ಜಿತ ಮನೆಯನ್ನು ಕಟ್ಟಿದ್ದರು. ವಿವಾಹಿತರಾಗಿರುವ ವಸಂತ್ ಅವರಿಗೆ ಎಳೆಯ ಪ್ರಾಯದ ಹೆಣ್ಣು ಮಗುವಿದ್ದಾಳೆ. ಇಂದು ಬೆಳಗ್ಗೆ ಮನೆಯಿಂದ ಕೆಲಸಕ್ಕೆಂದು ಹೋದವರು ನಾಪತ್ತೆಯಾಗಿದ್ದಾರೆ. 

ವಸಂತ್ ಅವರು ಬಿಕರ್ನಕಟ್ಟೆಯ ಜಯಶ್ರೀ ಗೇಟ್ ಬಳಿ ಸೆಕೆಂಡ್ಸ್ ಕಾರು ಮಾರಾಟದ ಕಚೇರಿ ಹೊಂದಿದ್ದಾರೆ. ಕಚೇರಿಗೆ ಬೆಳಗ್ಗೆ ಫೋನ್ ಮಾಡಿದ್ದ ವಸಂತ್ ಅವರು ಜ್ವರದಿಂದ ಬಳಲುತ್ತಿದ್ದು ತಾನು ಬರುವುದಿಲ್ಲ ಎಂದು ಸಿಬ್ಬಂದಿಯಲ್ಲಿ ತಿಳಿಸಿದ್ದರಂತೆ. ಸ್ಥಳೀಯರು ಸೋಮೇಶ್ವರ ಸಮುದ್ರ ತೀರದಲ್ಲಿ  ಕಾರು ಹಾಗೂ ರುದ್ರಪಾದೆಯಲ್ಲಿ ಪರ್ಸ್, ಶೂ ಹಾಗೂ ಮೊಬೈಲ್ ಪತ್ತೆಹಚ್ಚಿದ್ದಾರೆ. ಸ್ಥಳೀಯ ಈಜುಗಾರರ ಸಹಾಯದಿಂದ ಸಮುದ್ರದಲ್ಲಿ ವಸಂತ್ ಅಮೀನ್ ಅವರಿಗಾಗಿ ಹುಡುಕಾಟ ಆರಂಭಿಸಲಾಗಿದೆ.

Ullal Car dealer goes missing from Rudra paade in Someshwara, car and shoes found, suicide suspected. The missing person is said to be Vasant Amin (49).