ಕಾಂಗ್ರೆಸ್ ಅಭ್ಯರ್ಥಿಯೆಂದು ಬಿಂಬಿಸಲ್ಪಟ್ಟಿದ್ದ ಪದ್ಮರಾಜ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕ 

25-04-23 10:29 pm       Mangalore Correspondent   ಕರಾವಳಿ

ಇತ್ತೀಚೆಗೆ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರೆಂದು ಬಿಂಬಿಸಲ್ಪಟ್ಟಿದ್ದ ಬಿಲ್ಲವ ಮುಖಂಡ ಪದ್ಮರಾಜ್ ರಾಮಯ್ಯ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. 

ಮಂಗಳೂರು, ಎ.25: ಇತ್ತೀಚೆಗೆ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರೆಂದು ಬಿಂಬಿಸಲ್ಪಟ್ಟಿದ್ದ ಬಿಲ್ಲವ ಮುಖಂಡ ಪದ್ಮರಾಜ್ ರಾಮಯ್ಯ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. 

ಬಿಲ್ಲವ ಸಂಘಟನೆ ಜೊತೆಗೆ ಗುರು ಬೆಳದಿಂಗಳು ಟ್ರಸ್ಟ್ ಅಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಪದ್ಮರಾಜ್ ಹೆಸರು ಕಾಂಗ್ರೆಸ್ ಅಭ್ಯರ್ಥಿ ಸ್ಥಾನಕ್ಕೆ ಕೇಳಿಬಂದಿತ್ತು. ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಟ್ರಸ್ಟಿಯಾಗಿದ್ದು ಅದೇ ಹಿನ್ನೆಲೆಯಲ್ಲಿ ಪದ್ಮರಾಜ್ ಮುನ್ನೆಲೆಗೆ ಬಂದಿದ್ದರು. ಆದರೆ ಪಕ್ಷದ ಸದಸ್ಯರೇ ಅಲ್ಲದ ವ್ಯಕ್ತಿಗೆ ಟಿಕೆಟ್ ಕೊಡುವುದಕ್ಕೆ ಕಾಂಗ್ರೆಸ್ ಒಳಗಡೆಯೇ ವಿರೋಧ ಬಂದಿತ್ತು. ಹಾಗಾಗಿ, ಕೊನೆಕ್ಷಣದಲ್ಲಿ ಪದ್ಮರಾಜ್ ಹೆಸರು ಡ್ರಾಪ್ ಆಗಿತ್ತು. 

ಇದೀಗ ಪದ್ಮರಾಜ್ ಅವರನ್ನು ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸುರ್ಜೇವಾಲಾ ನೇಮಕ ಮಾಡಿದ್ದಾರೆ. ಆಮೂಲಕ, ಪದ್ಮರಾಜ್ ಕಾಂಗ್ರೆಸ್ ಪಕ್ಷಕ್ಕೆ ನೇರ ಎಂಟ್ರಿ ಕೊಟ್ಟಂತಾಗಿದೆ.‌

Mangalore Kudroli temple member Padmaraj appointed as General secreatry of Kpcc.