ಬ್ರೇಕಿಂಗ್ ನ್ಯೂಸ್
24-04-23 08:37 pm Mangalore Correspondent ಕರಾವಳಿ
ಪುತ್ತೂರು, ಎ.24: ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರ ಒತ್ತಡದ ನಡುವೆಯೂ ಬಂಡಾಯ ಕಣಕ್ಕಿಳಿದ ಅರುಣ್ ಪುತ್ತಿಲ ತಮ್ಮ ನಾಮಪತ್ರ ಹಿಂಪಡೆಯದೆ ಕಣದಲ್ಲಿ ಗಟ್ಟಿಯಾಗಿ ನಿಂತುಬಿಟ್ಟಿದ್ದಾರೆ. ಅಲ್ಲದೆ, ತಮ್ಮ ಚುನಾವಣಾ ಚಿಹ್ನೆಯಾಗಿ ಕ್ರಿಕೆಟ್ ಬ್ಯಾಟ್ ಅನ್ನು ಆಯ್ಕೆ ಮಾಡಿಕೊಂಡಿದ್ದು, ಅರುಣ್ ಪುತ್ತಿಲ ಕ್ರೀಸಿಗಿಳಿದು ಬ್ಯಾಟಿಂಗ್ ಮಾಡುವ ಸೂಚನೆ ನೀಡಿದ್ದಾರೆ.
ಪುತ್ತೂರು ಮತ್ತು ಸುಳ್ಯ ಕ್ಷೇತ್ರದಲ್ಲಿ ಅರುಣ್ ಪುತ್ತಿಲ ಪರವಾಗಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ ಫೇಸ್ಬುಕ್ ಜಾಲತಾಣದಲ್ಲಿ ಅರುಣ್ ಪುತ್ತಿಲ ಪರ ಅಭಿಯಾನ ಶುರುವಾಗಿದ್ದು, ಕೇಸರಿ ಕಾರ್ಯಕರ್ತರ ಆರ್ಭಟಕ್ಕೆ ಬಿಜೆಪಿ ನಾಯಕರು ಹಲ್ಲು ಕಚ್ಚಿಕೊಂಡು ಮೌನಕ್ಕೆ ಶರಣಾಗುತ್ತಿದ್ದಾರೆ. ಕಾರ್ಯಕರ್ತರ ಮಾತಿಗೆ ಬೆಲೆ ಸಿಕ್ಕಿಲ್ಲ. ಅವರ ಮಾತಿಗೆ ಬೆಲೆ ಕೊಡದೆ ಬೇರೆ ಕ್ಷೇತ್ರದ ಇನ್ಯಾರೋ ಅಭ್ಯರ್ಥಿಯನ್ನು ಪುತ್ತೂರಿನಲ್ಲಿ ಬಿಜೆಪಿಯಿಂದ ಕಣಕ್ಕಿಳಿಸಲಾಗಿದೆ. ಇಲ್ಲಿ ಹಿಂದುತ್ವ ಮುಖ್ಯವಾಗಿದ್ದು, ಅದೇ ನೀತಿಯಲ್ಲಿ ಕಾರ್ಯಕರ್ತರ ಹಕ್ಕೊತ್ತಾಯದಂತೆ ಸ್ಪರ್ಧಿಸುತ್ತಿದ್ದೇನೆ ಎಂದು ಅರುಣ್ ಪುತ್ತಿಲ ಮೊದಲಿನಿಂದಲೂ ಹೇಳುತ್ತ ಬಂದಿದ್ದಾರೆ.
ಕ್ಷೇತ್ರದಲ್ಲಿ ಟ್ರೆಂಡಿಂಗ್ ನೋಡಿದರೆ, ಪಕ್ಷೇತರ ಅರುಣ್ ಪುತ್ತಿಲ ಮತ್ತು ಕಾಂಗ್ರೆಸ್ನ ಅಶೋಕ್ ರೈ ನಡುವೆ ನೇರ ಸೆಣಸಾಟ ನಿರೀಕ್ಷೆಯಿದ್ದು ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗಲಿದೆ. ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ ಬಿಜೆಪಿ ಪರ ಒಲವುಳ್ಳ ಜನರು ಅರುಣ್ ಪುತ್ತಿಲ ಪರ ನಿಂತಿದ್ದಾರೆ. ಬಿಜೆಪಿ ನಾಯಕರು ಪುತ್ತಿಲರಿಗೆ ಅವಮಾನಿಸಿದ್ದಾರೆ ಎಂದೇ ಜನರು ವ್ಯಾಖ್ಯಾನ ಮಾಡುತ್ತಿದ್ದಾರೆ. ಜನರ ಮನಸ್ಸಲ್ಲಿ ಪುತ್ತಿಲ ಪರ ಒಲವು ಇರುವುದನ್ನು ಹೊಡೆದೋಡಿಸಲು ಪುತ್ತೂರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕರೆಸಲು ಜಿಲ್ಲಾ ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ಆದರೆ ಬಿಜೆಪಿಯ ಒಳಗಡೆಯೇ ಪುತ್ತಿಲ ಪರ ಇರುವ ಕೇಸರಿ ಕಾರ್ಯಕರ್ತರು ಮತ್ತು ಪುತ್ತಿಲ ವಿರೋಧಿಗಳು ಎಂಬ ಎರಡು ಬಣಗಳು ಸೃಷ್ಟಿಯಾಗಿದ್ದು, ಪುತ್ತೂರಿನಲ್ಲಿ ಈ ಬಾರಿ ಬಿಜೆಪಿಗೆ ಪಕ್ಷದ ಕಾರ್ಯಕರ್ತರೇ ಸೆಣಸಾಟಕ್ಕಿಳಿದಂತಾಗಿದೆ.
ಹಾಗೆ ನೋಡಿದರೆ, ಪುತ್ತೂರಿನಲ್ಲಿ ಪುತ್ತಿಲ ಹೆಸರಿಗಷ್ಟೇ. ಕ್ಷೇತ್ರದ ಉದ್ದಕ್ಕೂ ಪುತ್ತಿಲ ಪರವಾಗಿ ಬ್ಯಾಟ್ ಹಿಡಿದು ನಿಂತವರು ಸಂಘಟನೆಯ ಕಾರ್ಯಕರ್ತರೇ. ಚುನಾವಣೆ ಹೊತ್ತಿಗೆ ಜೊತೆಯಾಗುವ ಬಿಜೆಪಿ ಮತ್ತು ಸಂಘ ಪರಿವಾರದ ಯುವಕರು ಈ ಬಾರಿ ಹೋಳಾಗಿ ನಿಂತಿದ್ದಾರೆ. ಹಿಂದಿನಿಂದಲೂ ಉಪದೇಶ ಮಾಡಿಕೊಂಡು ಬಂದಿದ್ದ ಆರೆಸ್ಸೆಸ್ ಪ್ರಮುಖರು ಈ ಬಾರಿಯೂ ಬಿಸಿ ರಕ್ತದ ಯುವಕರಿಗೆ ಪಾಠ ಮಾಡಲು ಶುರು ಹಚ್ಚಿದ್ದಾರೆ. ಆದರೆ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಆರೆಸ್ಸೆಸ್ ನಾಯಕರಿಂದಲೂ ಆಗುತ್ತಿಲ್ಲ. ಜಾತಿ ಮೀರಿದ ಹಿಂದುತ್ವಕ್ಕಾಗಿ ಟೊಂಕ ಕಟ್ಟಿದ್ದೇವೆ, ಈಗ ಯಾಕೆ ನೀವು ನಮ್ಮೊಂದಿಗೆ ಬರುತ್ತಿಲ್ಲ. ಯಾಕೆ ಜಾತಿಗೆ ಜೋತು ಬೀಳುತ್ತೀರಿ ಎಂಬ ಪ್ರಶ್ನೆಗೆ ಉತ್ತರ ಇಲ್ಲ.
ವಿಶೇಷ ಅಂದ್ರೆ, ಅರುಣ್ ಪುತ್ತಿಲ ಬ್ರಾಹ್ಮಣನಾಗಿದ್ದರೂ, ಅವರಿಗೆ ಹಿಂದುಳಿದ ವರ್ಗದ ಕಾರ್ಯಕರ್ತರೇ ಜೊತೆಯಾಗಿದ್ದಾರೆ. ಬಂಟ, ಕುಲಾಲ, ಗೌಡ, ಪೂಜಾರಿ ಹೀಗೆ ಬಹುತೇಕ ಎಲ್ಲ ಜಾತಿಯ ಯುವಕರೂ ಪುತ್ತಿಲ ಪರ ನಿಂತಿದ್ದಾರೆ. ಬಿಜೆಪಿ ಅಧಿಕೃತ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಜನಾಂಗದವರೇ ಆಗಿದ್ದರೂ, ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡ ಸಮುದಾಯದ ಯುವಕರು ಪುತ್ತಿಲ ಪರ ನಿಂತಿದ್ದಾರೆ. ಬ್ರಾಹ್ಮಣ ಸಮುದಾಯದ ಕೆಲವು ಹಿರಿಯರು ಮಾತ್ರ ಸಂಘದ ಸೂಚನೆಯನ್ನು ಶಿರಸಾ ಪಾಲಿಸುತ್ತೇವೆಂದು ಪುತ್ತಿಲ ವಿರುದ್ಧ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮತ್ತೊಂದು ಮಾಹಿತಿ ಪ್ರಕಾರ, ಯೋಗಿ ಆದಿತ್ಯನಾಥ್ ಕೂಡ ಪುತ್ತೂರಿಗೆ ಬರುತ್ತಿಲ್ಲ ಎನ್ನಲಾಗುತ್ತಿದೆ. ಇಡೀ ಜಿಲ್ಲೆಯ ಮಧ್ಯ ಎಂದು ಬಂಟ್ವಾಳದಲ್ಲಿ ಕಾರ್ಯಕ್ರಮ ನಡೆಸಲು ಪ್ಲಾನ್ ಆಗುತ್ತಿದೆ. ಇದಲ್ಲದೆ, ಅರುಣ್ ಪುತ್ತಿಲರಿಗೆ ಠಕ್ಕರ್ ಕೊಡಲು ಹಿಂದು ಸಂಘಟನೆಯಲ್ಲಿ ಮುಂಚೂಣಿ ನಾಯಕರನ್ನೇ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಆದರೆ ಈ ರೀತಿಯ ನಡೆಗಳು ಪುತ್ತೂರಿನಲ್ಲಿ ಪ್ರಬಲ ಸಂಘಟನೆಯಲ್ಲಿ ಬಿರುಕು ಮೂಡಿಸುವ ಸಾಧ್ಯತೆಯನ್ನೂ ಜನರು ಹೇಳುತ್ತಿದ್ದಾರೆ.
Puttur Arun Kumar Puthila makes BAT as their election symbol.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm