ಬ್ರೇಕಿಂಗ್ ನ್ಯೂಸ್
24-04-23 05:09 pm Mangalore Correspondent ಕರಾವಳಿ
ಮಂಗಳೂರು. ಎ.24: ನನ್ನನ್ನು ಕೊಲೆ ಮಾಡಲು ಬರುವುದು ಯಾವುದೇ ವ್ಯಕ್ತಿಗಳಲ್ಲ. ಅದೊಂದು ಮಾನಸಿಕ ಸ್ಥಿತಿ. ಹತ್ತು- ಹನ್ನೊಂದು ಬಾರಿ ನನ್ನನ್ನು ಕೊಲೆ ಮಾಡಲು ಬಂದಿದ್ದಾರೆ. ಆ ಮಾನಸಿಕ ಸ್ಥಿತಿಗೆ ಯಾವುದೇ ಕನಿಕರವೂ ಇಲ್ಲ. ಆ ಮನಸ್ಥಿತಿ ನನ್ನನ್ನು ಬಿಡುವುದಿಲ್ಲ ಅಂತ ಪೊಲೀಸರಿಗೆ ಗೊತ್ತಿದೆ. ಗುಪ್ತಚರ ಇಲಾಖೆಗೂ ಗೊತ್ತಿದೆ. ನಾನು ಕೊಲೆಯಾದರೆ, ಇಂಥವರೇ ಹೊಣೆ ಎಂದು ಹೇಳುವುದಿಲ್ಲ. ನನ್ನ ಆಯುಷ್ಯ ಮುಗಿದಿದೆ ಅಂದ್ಕೊಳ್ಳುತ್ತೇನೆ ಎಂದು ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ ಹೇಳಿದರು.
ತನ್ನ ಪೊಲೀಸ್ ಭದ್ರತೆಯನ್ನು ಹಿಂಪಡೆದ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಅವರು, ನನ್ನ ಸಾರ್ವಜನಿಕ ಜೀವನದಲ್ಲಿ ಯಾರಿಗಾದರೂ ನೋವು ಮಾಡಿದ್ದರೆ, ಕ್ಷಮೆ ಯಾಚಿಸುತ್ತೇನೆ. ಈಗ ನನ್ನ ಎರಡು ರೆಕ್ಕೆಯನ್ನು ಕತ್ತರಿಸಿದ್ದಾರೆ. ಹಾಗೆಂದು ನಾನೆಂದಿಗೂ ನಿಲುವು, ಸಿದ್ಧಾಂತದಲ್ಲಿ ಬದಲಾವಣೆ ಮಾಡಿಕೊಳ್ಳಲ್ಲ. ರಾಷ್ಟ್ರೀಯತೆ ಪರವಾಗಿಯೇ ಇರುತ್ತೇನೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹೊಂದಿದ್ದೇನೆ.

ಆದರೆ ನಾನು ಯಾವತ್ತಾದರೂ ಇಸ್ಲಾಮ್ ಧರ್ಮಕ್ಕೆ ಅಗೌರವ ಆಗುವ ರೀತಿ ಮಾಡಿದ್ದೇನೆ ಅಂತ ತೋರಿಸಿದರೆ, ತಲೆಬಾಗಲು ಸಿದ್ಧನಿದ್ದೇನೆ. ಮುಕ್ತವಾಗಿ ಅಭಿಪ್ರಾಯ ಹೇಳುತ್ತಿದ್ದ ವ್ಯಕ್ತಿ ನಾನು. ರಾಷ್ಟ್ರೀಯತೆ ವಿಚಾರವಾಗಿ ಟಿವಿ ಡಿಬೇಟ್ ನಲ್ಲಿ ಚರ್ಚೆ ನಡೆಸಿದ್ದೇನೆಯೇ ಹೊರತು ಯಾವುದೇ ಧರ್ಮದ ವಿರುದ್ಧ ಅಥವಾ ಧರ್ಮಕ್ಕೆ ಕುಂದುಂಟಾಗುವ ರೀತಿ ನಡೆದುಕೊಂಡಿಲ್ಲ. ಹಾಗಿದ್ದರೂ, ನನ್ನನ್ನು ಕೆಲವರು ಟಾರ್ಗೆಟ್ ಮಾಡಿಕೊಂಡಿದ್ದಾರೆ. 2012ರಲ್ಲಿ ಏಳು ಮಂದಿಯ ತಂಡ ನನ್ನ ಕಚೇರಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪ್ರಕರಣದಲ್ಲಿ ಇಬ್ಬರಿಗೆ ಸಾಬೀತಾಗಿ ನಾಲ್ಕುವರೆ ವರ್ಷ ಜೈಲು ಶಿಕ್ಷೆಯಾಗಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ಅಲ್ಲಿ ವಿಚಾರಣೆಯಲ್ಲಿರುವಾಗಲೇ ಗನ್ ಮ್ಯಾನ್ ಭದ್ರತೆಯನ್ನು ತೆಗೆದು ಹಾಕಿರುವುದು ಭಯ ಮೂಡಿಸಿದೆ.
ಹಾಗಿದ್ದರೂ ನನ್ನನ್ನು ದೇವರು ಹಲವು ಸಂದರ್ಭಗಳಲ್ಲಿ ಬದುಕಿಸಿದ್ದಾನೆ. ಕಟುಕರು ಕೊಚ್ಚಿ ಹಾಕಿದರೂ, ದೇವರ ದಯೆಯಿಂದ ಬದುಕಿ ಬಂದಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಗಂಭೀರ ಸ್ಥಿತಿಗೆ ಒಳಗಾದರೂ ಬದುಕಿದ್ದೇನೆ. ಈಗಲು 80 ವರ್ಷದ ತಾಯಿಗೋಸ್ಕರ ಬದುಕಬೇಕೆಂದಿದ್ದೇನೆ. ಅದಕ್ಕಾಗಿ ಭದ್ರತೆ ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ ರಹೀಂ ಉಚ್ಚಿಲ. ಸುದ್ದಿಗೋಷ್ಟಿಯಲ್ಲಿ ಅವರ ಜೊತೆ ವೃದ್ಧ ತಾಯಿ ಜೊತೆಗಿದ್ದರು.
Beary Academy president Rahim Uchil security recalled by government, says i am targeted i will killed. Rahim Uchil, Karnataka Beary Sahitya Academy President was brutally attacked by unidentified persons inside the academy office at Attavar in 2012.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
15-11-25 12:06 pm
HK News Desk
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
15-11-25 02:47 pm
Mangalore Correspondent
ಬಿಹಾರದಲ್ಲಿ ಚುನಾವಣೆ ಮುನ್ನ ಹತ್ತು ಸಾವಿರ ಕೊಟ್ಟು ಮ...
15-11-25 01:51 pm
ಬಿ.ಸಿ. ರೋಡ್ ಬಳಿ ಭೀಕರ ಅಪಘಾತ ; ಉಡುಪಿ ಕೃಷ್ಣ ಮಠಕ್...
15-11-25 12:12 pm
Kumapal Dog Attack, Ullal, Mangalore: ಕುಂಪಲ ಬ...
14-11-25 11:01 pm
Kumpala, Dog, Crime, Mangalore: ಬೀದಿ ನಾಯಿಗಳ ದ...
14-11-25 10:10 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm