ಬ್ರೇಕಿಂಗ್ ನ್ಯೂಸ್
24-04-23 04:40 pm Mangalore Correspondent ಕರಾವಳಿ
ಬೆಳ್ತಂಗಡಿ, ಎ.24: ಮಾಜಿ ಸಚಿವ ಗಂಗಾಧರ ಗೌಡರ ಮನೆಗೆ ದಾಳಿ ನಡೆಸಿದ ಐಟಿ ಇಲಾಖೆಯ ಅಧಿಕಾರಿಗಳು 30 ಲಕ್ಷ ನಗದು ಪತ್ತೆ ಮಾಡಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಗಂಗಾಧರ ಗೌಡರ ಮನೆ, ಕಚೇರಿ ಮತ್ತು ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಗಂಗಾಧರ ಗೌಡರು ಹಿಂದೆ ಕಾಂಗ್ರೆಸ್ ನಲ್ಲಿದ್ದು ಶಾಸಕ, ಸಚಿವರಾಗಿ, ಆನಂತರ ಒಮ್ಮೆ ಜೆಡಿಎಸ್ ಸೇರಿ, ಒಂದಷ್ಟು ಕಾಲ ಬಿಜೆಪಿಯಲ್ಲಿದ್ದು ಬಳಿಕ ಮತ್ತೆ ಕಾಂಗ್ರೆಸ್ ಸೇರಿ ಅದೇ ಪಕ್ಷದಲ್ಲಿದ್ದಾರೆ. 1980ರ ಕಾಲದಲ್ಲಿ ಇಂದಿರಾ ಕಾಂಗ್ರೆಸಿಗನಾಗಿ ಹೆಸರು ಮಾಡಿದ್ದವರು ಗಂಗಾಧರ ಗೌಡರು. ಆದರೆ ಈ ಬಾರಿಯ ಚುನಾವಣೆಯಲ್ಲಿ ತಾನೇ ಕಾಂಗ್ರೆಸಿನಿಂದ ಸ್ಪರ್ಧಿಸುತ್ತೇನೆ ಎಂದು ತಮ್ಮ ಇಳಿ ವಯಸ್ಸಿನಲ್ಲೂ ತೊಡೆ ತಟ್ಟಿದ್ದರು. ಪಕ್ಷದಲ್ಲಿ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಪ್ರಚಾರದಲ್ಲಾಗಲೀ, ಪಕ್ಷದ ಚಟುವಟಿಕೆಯಲ್ಲಾಗಲೀ ಕಾಣಿಸಿಕೊಂಡಿಲ್ಲ. ಈ ಬಾರಿ ತನಗೆ ಅಥವಾ ತನ್ನ ಮಗನಿಗೆ ಅದೂ ಆಗದಿದ್ದರೆ, ವಸಂತ ಬಂಗೇರ ಅವರಿಗೇ ಟಿಕೆಟ್ ನೀಡುವಂತೆ ಗಂಗಾಧರ ಗೌಡ ಆಗ್ರಹ ಮಾಡಿದ್ದರು.
ಇಂದಬೆಟ್ಟುವಿನಲ್ಲಿ ಮನೆ, ಬೆಳ್ತಂಗಡಿಯ ಲಾಯ್ಲದಲ್ಲಿ ಪ್ರಸನ್ನ ಶಿಕ್ಷಣ ಸಂಸ್ಥೆಗಳು, ಆಯುರ್ವೇದ ಕಾಲೇಜು ಇನ್ನಿತರ ಆಸ್ತಿಗಳು ಗಂಗಾಧರ ಗೌಡರ ಹೆಸರಲ್ಲಿವೆ. ಐಟಿ ಅಧಿಕಾರಿಗಳ ದಾಳಿಯಲ್ಲಿ 30 ಲಕ್ಷ ನಗದು ಹಣ ಸಿಕ್ಕರೂ, ಅದಕ್ಕೆ ದಾಖಲೆ ತೋರಿಸುವಷ್ಟು ಅಡಿಕೆ ತೋಟ, ಶಿಕ್ಷಣ ಸಂಸ್ಥೆಗಳಿವೆ. ಹೀಗಾಗಿ 30 ಲಕ್ಷವೆಲ್ಲ ದೊಡ್ಡ ವಿಚಾರ ಅಲ್ಲ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಆದರೆ ಕಾಂಗ್ರೆಸಿನಲ್ಲಿದ್ದುಕೊಂಡು ಪಕ್ಷದ ಚಟುವಟಿಕೆಯಿಂದ ದೂರ ಉಳಿದಿರುವಾಗ ಬಿಜೆಪಿ ಆಡಳಿತದಲ್ಲಿ ಐಟಿ ಅಧಿಕಾರಿಗಳ ದಾಳಿ ಹೇಗೆ ನಡೆದಿದೆ, ಇದರಲ್ಲಿ ಕಾಂಗ್ರೆಸಿಗರದ್ದೇ ಕೈವಾಡ ಇರಬಹುದೇ ಎಂದು ಗಂಗಾಧರ ಗೌಡರ ಜೊತೆಗಿದ್ದವರು ತಲೆಕೆಡಿಸಿಕೊಂಡಿದ್ದಾರೆ.
ಮಾಜಿ ಸಚಿವ ಗಂಗಾಧರ ಗೌಡರಿಗೆ ಐಟಿ ಶಾಕ್ ; ಬೆಳ್ತಂಗಡಿಯ ಶಿಕ್ಷಣ ಸಂಸ್ಥೆ, ಮನೆಯಲ್ಲಿ ಪರಿಶೀಲನೆ
Belthangady Income tax raid on Congress leader Gangadhar Gowda house, 30 lakhs cash seized by officals. Gowda had quit the BJP and joined Congress in 2018. He recently announced withdrawal from politics following the denial of a ticket for the Karnataka Assembly polls.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm