ಬ್ರೇಕಿಂಗ್ ನ್ಯೂಸ್
23-04-23 08:42 pm Udupi Correspondent ಕರಾವಳಿ
ಉಡುಪಿ, ಎ.23 : ಕೇಸರಿ ಶಾಲು ಹಾಕಿಕೊಂಡಿದ್ದರೂ ಕಾಂಗ್ರೆಸ್ ಸೇರ್ಪಡೆ ಆಗಬೇಕು ಅಂತ ಬಂದಿದ್ದೀರಿ. ಕೇಸರಿ ಧ್ವಜ ಹಿಡಿದು ಬಂದವರಿಗೆ ನಮಸ್ಕಾರ. ನಿಮಗೆಲ್ಲ ಒಂದು ಹೇಳ್ತೀನಿ, ಹಿಂದುತ್ವ ಯಾರ ಆಸ್ತಿನೂ ಅಲ್ಲ. ನಾನು ಹಿಂದು ಅಲ್ವಾ, ಸಿದ್ದರಾಮಯ್ಯ ಹಿಂದೂ ಅಲ್ವಾ.. ಧರ್ಮಸ್ಥಳ, ಶೃಂಗೇರಿ ಹೋಗಿದ್ದೇನೆ, ಮುಂದೆ ಕೊಲ್ಲೂರಿಗೆ ಹೋಗುತ್ತೇನೆ.. ಹೀಗೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಿಂದುತ್ವದ ದಾಳ ಹಾಕಿದ್ದಾರೆ.
ಉಡುಪಿಯ ಬೈಂದೂರಿನಲ್ಲಿ ಆಯೋಜಿಸಿದ್ದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಡಿಕೆಶಿ ಮಾತನಾಡಿದರು. ನಾನು ನಿನ್ನೆ ಬಿಜೆಪಿ ಡ್ಯಾಮ್ ಹೋಯ್ತು ಅಂದಿದ್ದೆ. ಬೊಮ್ಮಾಯಿ ಹೇಳಿದ್ರೂ ನೀರೇ ಇಲ್ಲ ಅಂದ್ರು. ನನ್ನ ಡ್ಯಾಮ್ ಅಲ್ಲಪ್ಪಾ, ಒಡೆದು ಹೋಗಿದ್ದು ನಿನ್ನದೇ ಡ್ಯಾಮಪ್ಪಾ. ನೂರಾರು ಜನ ನಾಯಕರು ನಮ್ಮ ಪಕ್ಷಕ್ಕೆ ಬಂದಿದ್ದಾರೆ ಅಂದ್ರೆ ಅವರೇನು ದಡ್ಡರಾ.. ಬಿಜೆಪಿಯಲ್ಲಿ ದುಡಿದವರಿಗೆ ಗೌರವ ಇಲ್ಲ. ಅವರೆಲ್ಲ ಬೇಜಾರಾಗಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಅವರ ಹಿರಿತನಕ್ಕೆ ಗೌರವ ಇದೆ. ತಂದೆಗೆ ವಯಸ್ಸಾಯಿತು ಅಂತ ಬಿಸಾಕಿ ಬಿಡಲು ಆಗುತ್ತಾ.. ಹಿರಿಯರನ್ನು ದೂರದಿಂದ ನೋಡಬಾರದು. ಎಲ್ಲರನ್ನು ಪ್ರೀತಿಯಿಂದ ಗೌರವಿಸಬೇಕು ಎಂದರು ಡಿಕೆಶಿ.
ಬೈಂದೂರು ಪುಣ್ಯಕ್ಷೇತ್ರ, ಗೋಪಾಲ ಪೂಜಾರಿ ಅಭ್ಯರ್ಥಿ. ಸಣ್ಣ ಕಪ್ಪು ಚುಕ್ಕೆ ಕೂಡ ಪೂಜಾರಿ ಅವರ ಮೇಲೆ ಇಲ್ಲ. ಹೀಗಾಗಿ ಗೋಪಾಲ ಪೂಜಾರಿ ಅವರಿಗೆ ಟಿಕೆಟ್ ನೀಡಲಾಗಿದೆ. ಪಕ್ಷದಲ್ಲಿ ದೊಡ್ಡ ಬದಲಾವಣೆ ನೋಡುತ್ತಿದ್ದೇವೆ. ಕಳೆದ ಬಾರಿ ಜೆಡಿಎಸ್ಗೆ ಬೆಂಬಲ ನೀಡಿದ್ದೆವು, ಅಧಿಕಾರ ಉಳಿಸಿಕೊಳ್ಳಲಿಲ್ಲ. ಈ ಬಾರಿ ಅಂಥ ಸ್ಥಿತಿ ಬರಬಾರದು.
ರೈತರಿಗೆ ಗೊಬ್ಬರದ ಬೆಲೆ ಡಬ್ಬಲ್ ಆಯ್ತು ಅಷ್ಟೇ. ಅಚ್ಚೇ ದಿನ ಬಂತಾ ಇಲ್ಲ, ಒಳ್ಳೆಯ ಆಡಳಿತ ಕೂಡ ಇಲ್ಲ. ಕರಾವಳಿಯ ಮೂರು ಜನ ಎಂಎಲ್ಎ ನಮ್ಮ ಸಿಡಿ ಪ್ರಸಾರ ಮಾಡಬೇಡಿ ಅಂತ ಸ್ಟೇ ತೆಗೆದುಕೊಂಡಿದ್ದಾರೆ. ಪರಿಶುದ್ಧ ಆಗಿದ್ದವರು ಯಾಕೆ ಸ್ಟೇ ತೆಗೆದುಕೊಂಡರು. ಜನ್ಧನ್ ಮೂಲಕ ಏನು ಸಹಾಯ ಮಾಡಿದ್ದೀರಿ, ಗ್ಯಾಸ್ ಬೆಲೆ ಕೂಡ ಏರಿಕೆ ಮಾಡಿದ್ದೀರಿ. ಮೋದಿ ನೋಡಿ ಓಟ್ ನೀಡಿ ಅಂತಾರೆ, ಮೋದಿ ಬಂದು ಆಡಳಿತ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಭಾವನೆಗೆ ಬೆಲೆ ಇಲ್ಲ, ನಾಮ ನೂರಾರು, ದೈವ ಒಂದೇ. ಬಿಜೆಪಿ ಒಂದೇ ಅಜೆಂಡಾ ನಾವು ಹಿಂದೂ, ನಾವು ಮುಂದು. ನಮ್ಮದು ನಾವೆಲ್ಲ ಒಂದು. ಇಷ್ಟೇ ನಮಗೂ ಅವರಿಗೆ ಇರೋ ವ್ಯತ್ಯಾಸ. ಪ್ರಮೋದ್ ಮಧ್ಚರಾಜ್ ನನ್ನ ಆತ್ಮೀಯ, ಮೀನುಗಾರರಿಗೆ ಬಿಜೆಪಿ ಸಹಾಯ ಮಾಡುತ್ತಾರೆ ಹೋಗುತ್ತೇನೆ ಅಂದ. ಈಗ ಪ್ರಮೋದ್ ಕೆಳಗೆ ಕುಳಿತುಕೊಳ್ಳುತ್ತಾನೆ. ಈಗ ಗಾಳ ಹಾಕೊಂಡ್ ಕುಳಿತುಕೊಳ್ಳಬೇಕು ಎಲ್ಲಿ ಮೀನು ಸಿಗುತ್ತದೆ ಅಂತ ಕಟಕಿಯಾಡಿದರು ಡಿಕೆಶಿ.
Hindutva is not the property of any person says D K Shivakumar in Udupi Byndoor. Addressing the party workers, D K Shivakumar said, “Several prominent BJP leaders, including the former Chief Minister Jagadish Shettar, former Deputy Chief Minister Laxman Savadi and many other legislators have resigned and joined the Congress party and in the coming days more leaders from BJP will join the Congress”.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm