ಧರ್ಮಸ್ಥಳಕ್ಕೆ ಡಿಕೆಶಿ ; ಕುಟುಂಬಸ್ಥರ ಹೆಲಿಕಾಪ್ಟರ್ ತಪಾಸಣೆ ವೇಳೆ ಪೈಲಟ್ ವಾಗ್ವಾದ, ಮಂಜುನಾಥ ನಮ್ಮ ಕೈಬಿಡಲ್ಲ ಎಂದ ಕೆಪಿಸಿಸಿ ಅಧ್ಯಕ್ಷ   

22-04-23 01:30 pm       Mangalore Correspondent   ಕರಾವಳಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಪತ್ನಿ, ಕುಟುಂಬಸ್ಥರು ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಎರಡು ಪ್ರತ್ಯೇಕ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಡಿಕೆಶಿ ಪತ್ನಿ ಮತ್ತು ಕುಟುಂಬಸ್ಥರನ್ನು ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಮತ್ತು ಮಿಥುನ್ ರೈ, ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದ್ದಾರೆ. 

ಬೆಳ್ತಂಗಡಿ, ಎ.22: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಪತ್ನಿ, ಕುಟುಂಬಸ್ಥರು ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಎರಡು ಪ್ರತ್ಯೇಕ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಡಿಕೆಶಿ ಪತ್ನಿ ಮತ್ತು ಕುಟುಂಬಸ್ಥರನ್ನು ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಮತ್ತು ಮಿಥುನ್ ರೈ, ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದ್ದಾರೆ. 

ಇದೇ ವೇಳೆ, ಡಿಕೆಶಿ ಪತ್ನಿ ಮತ್ತು ಕುಟುಂಬಸ್ಥರು ಆಗಮಿಸಿದ್ದ ಹೆಲಿಕಾಪ್ಟರ್ ಚೆಕ್ ಮಾಡಲು ಬಂದ ಚುನಾವಣಾಧಿಕಾರಿಗಳ ಜೊತೆಗೆ ಹೆಲಿಕಾಪ್ಟರ್ ಪೈಲಟ್ ವಾಗ್ವಾದ ಮಾಡಿದ್ದಾರೆ. ಇದು ಖಾಸಗಿ ಹೆಲಿಕಾಪ್ಟರ್, ನಮ್ಮಲ್ಲಿ ಚೆಕ್ ಮಾಡಲು ಅವಕಾಶ ಇಲ್ಲ ಎಂದು ಹೆಲಿಕಾಪ್ಟರ್ ಪೈಲಟ್ ತಿಳಿಸಿದ್ದಾರೆ. ಈ ವೇಳೆ, ಹೆಲಿಕಾಪ್ಟರ್ ಪೈಲಟ್ ರಾಮದಾಸ್ ಮತ್ತು ಚುನಾವಣಾಧಿಕಾರಿ ನಡುವೆ ಮಾತಿನ ಚಕಮಕಿ ನಡೆದಿದ್ದು ಕೊನೆಗೆ ಅಧಿಕಾರಿಗಳು ಹೆಲಿಕಾಪ್ಟರ್ ತಪಾಸಣೆ ಮಾಡಿದ್ದಾರೆ. ಹೆಲಿಕಾಪ್ಟರ್ ನಲ್ಲಿ ಡಿಕೆಶಿ ಪತ್ನಿ ಉಷಾ, ಮಗ, ಮಗಳು, ಅಳಿಯ ಧರ್ಮಸ್ಥಳಕ್ಕೆ ಆಗಮಿಸಿದ್ದರು. 

ಬಳಿಕ ಡಿಕೆಶಿ ಅವರು, ಪತ್ನಿ, ಮಗಳು, ಅಳಿಯನ ಜೊತೆಗೆ ಮಂಜುನಾಥ ಸ್ವಾಮಿ ದರ್ಶನ ಮಾಡಿದರು. ಆನಂತರ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದಾರೆ. ಬಳಿಕ ಹೆಗ್ಗಡೆಯವರ ಜೊತೆ ಡಿಕೆಶಿ ಖಾಸಗಿ ಮಾತುಕತೆ ನಡೆಸಿದ್ದಾರೆ. 

ಇದೇ ವೇಳೆ, ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಮಂಜುನಾಥ ಸ್ವಾಮಿಯಲ್ಲಿ ರಾಜ್ಯದ ಸುಭಿಕ್ಷೆಗಾಗಿ ಪ್ರಾರ್ಥಿಸಿದ್ದೇನೆ. ಮಂಜುನಾಥ ನನಗೆ ಎಲ್ಲ ರೀತಿಯಿಂದಲು ಒಳ್ಳೆದು ಮಾಡಿದ್ದಾನೆ. ಮಾತು ಬಿಡದ ಮಂಜುನಾಥ ಎನ್ನುವ ಹೆಸರಿದೆ, ಆತ ಯಾವತ್ತೂ ನಮ್ಮ ಕೈಬಿಡಲ್ಲ. ದೇವರಲ್ಲಿ ರಾಜ್ಯದ ಜನರಿಗೆ ಒಳ್ಳೆದು ಮಾಡಲು ಪ್ರಾರ್ಥಿಸಿದ್ದೇನೆ ಎಂದರು.‌

D K Shivakumar visits Dharmasthala, chopper checked by ECI, pilot turns angry. Flying squad of the ECI conducted a check of the helicopter used by Karnataka Pradesh Congress Committee (KPCC) President D K Shivakumar after it reached the helipad at Dharmasthala in Dakshina Kannada.