ಎಂಡೋ ಸಂತ್ರಸ್ತರ ಪಿಯು ಸಾಧನೆ ; ಮಂದ ದೃಷ್ಟಿ ನಡುವೆಯೂ ಫಸ್ಟ್ ಕ್ಲಾಸ್ !

21-04-23 11:22 pm       Mangaluru Correspondent   ಕರಾವಳಿ

ಎಂಡೋ ಸಲ್ಫಾನ್ ಸಂತ್ರಸ್ತರಾಗಿ ಅಂಗವೈಕಲ್ಯ ಎದುರಿಸುತ್ತಿರುವ ವಿದ್ಯಾರ್ಥಿಗಳಿಬ್ಬರು ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಮಂಗಳೂರು, ಎ.21: ಎಂಡೋ ಸಲ್ಫಾನ್ ಸಂತ್ರಸ್ತರಾಗಿ ಅಂಗವೈಕಲ್ಯ ಎದುರಿಸುತ್ತಿರುವ ವಿದ್ಯಾರ್ಥಿಗಳಿಬ್ಬರು ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಕಡಬ ತಾಲೂಕಿನ ರಾಮಕುಂಜ ಸೇವಾಭಾರತಿ ವಿದ್ಯಾಚೇತನ ವಿಶಿಷ್ಟ ಚೇತನ ಶಾಲೆಯಲ್ಲಿ ಕಲಿಯುತ್ತಿರುವ ಮೋಹನ ಮತ್ತು ಪದ್ಮಶೇಖರ ಎಂಬ ವಿದ್ಯಾರ್ಥಿಗಳು ಈ ಸಾಧನೆ ಮಾಡಿದವರು. ಅಣ್ಣು ಪೂಜಾರಿ ಮತ್ತು ವಾರಿಜಾ ದಂಪತಿಯ ಮಗ ಮೋಹನ ದೃಷ್ಟಿ ಸಮಸ್ಯೆ ಹೊಂದಿದ್ದು, ವಿಶೇಷ ಲಿಪಿಯನ್ನು ಬಳಸಿ ಪಿಯುಸಿ ಕಲಿತಿದ್ದಲ್ಲದೆ, ಉಪ್ಪಿನಂಗಡಿ ಕಾಲೇಜಿನಲ್ಲಿ ಪರೀಕ್ಷೆಯನ್ನೂ ಬರೆದಿದ್ದಾರೆ. ಇವರು ತನ್ನ ವೈಕಲ್ಯ ಮೆಟ್ಟಿ ನಿಂತು 74 ಶೇಕಡಾ ಅಂಕ ಪಡೆದು ಗಮನ ಸೆಳೆದಿದ್ದಾರೆ.

ನಾರಾಯಣ ಪೂಜಾರಿ ಮತ್ತು ಶ್ಯಾಮಲಾ ದಂಪತಿಯ ಪುತ್ರ ಪದ್ಮಶೇಖರ ಪರೀಕ್ಷೆ ಬರೆದು 54 ಪರ್ಸೆಂಟ್ ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸೇವಾ ಭಾರತಿ ಸಂಸ್ಥೆಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Kadaba two Endosulfan students score 74 percentage marks in PUC.