ಬೆಳ್ತಂಗಡಿ ; ಅವಳಿ ಸೋದರಿಯರ ಫಲಿತಾಂಶದಲ್ಲೂ ಸಮಾನತೆ, 594 ಅಂಕದ ಗರಿಷ್ಠ ಸಾಧನೆ 

21-04-23 10:52 pm       Mangalore Correspondent   ಕರಾವಳಿ

ತಾಲೂಕಿನ ನೆರಿಯ ಗ್ರಾಮದ ಪುಣ್ಕೆದಡಿಯ ಅವಳಿ ಸೋದರಿಯರು ಪಿಯು ಪರೀಕ್ಷೆಯಲ್ಲಿ ಸಮಾನ ಅಂಕ ಪಡೆದು ವಿಶೇಷ ಸಾಧನೆ ಮಾಡಿ ರಾಜ್ಯದ ಗಮನ ಸೆಳೆದಿದ್ದಾರೆ.

ಬೆಳ್ತಂಗಡಿ, ಎ.21: ತಾಲೂಕಿನ ನೆರಿಯ ಗ್ರಾಮದ ಪುಣ್ಕೆದಡಿಯ ಅವಳಿ ಸೋದರಿಯರು ಪಿಯು ಪರೀಕ್ಷೆಯಲ್ಲಿ ಸಮಾನ ಅಂಕ ಪಡೆದು ವಿಶೇಷ ಸಾಧನೆ ಮಾಡಿ ರಾಜ್ಯದ ಗಮನ ಸೆಳೆದಿದ್ದಾರೆ. 

ಉಮೇಶ್ ಗೌಡ ಪಿ.ಹೆಚ್ ‌ಮತ್ತು ಗೀತಾ ದಂಪತಿಗಳ ಅವಳಿ ಮಕ್ಕಳಾದ ಸ್ಪಂದನಾ ಮತ್ತು ಸ್ಪರ್ಷಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (ವಾಣಿಜ್ಯ ವಿಭಾಗದಲ್ಲಿ ) ಇಬ್ಬರೂ 600 ರಲ್ಲಿ 594 ಸಮಾನ (ಶೇ. 99)ಅಂಕ ಪಡೆದಿದ್ದಾರೆ. ಇವರು ಉಜಿರೆ ಎಸ್ ಡಿಎಂ ಕಾಲೇಜು ವಿದ್ಯಾರ್ಥಿಗಳು.

ಮಕ್ಕಳ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದು, ಕಾಲೇಜು ಆಡಳಿತ ಮಂಡಳಿ, ಪ್ರಾಧ್ಯಾಪಕರು ಅಪಾರ ಮೆಚ್ಚುಗೆ ಸೂಚಿಸಿದ್ದಾರೆ.

Belthangady twin sisters score same marks in PUC results 2023