ಪುಲ್ವಾಮದಲ್ಲಿ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದಿಂದ ವೀರಯೋಧರ ಸಾವು, ಸಾಮರಸ್ಯ ಬಿತ್ತಲು 56 ಇಂಚು ಬೇಕಿಲ್ಲ, ಸರ್ವರ ಪ್ರೀತಿಸುವ ಇನಾಯತ್ ಆಲಿಯ 36 ಇಂಚಿನ ಎದೆ ಸಾಕು !  

20-04-23 09:26 pm       Mangalore Correspondent   ಕರಾವಳಿ

ಕಾಶ್ಮೀರದ ಪುಲ್ವಾಮದಲ್ಲಿ ಕೇಂದ್ರ ಸರಕಾರ ರೂಪಿಸಿದ್ದ ಭದ್ರತಾ ವೈಫಲ್ಯದ ಕಾರಣ ನಲ್ವತ್ತು ಯೋಧರು ನಡು ರಸ್ತೆಯಲ್ಲಿ ಸಾಯುವಂತಾಗಿತ್ತು. ಮತ ಭೇದ ಇಲ್ಲದೆ ನಮ್ಮ ಯೋಧರು ಬಲಿಯಾಗಿ ಹೋದರು ಎಂದು ಬಿಜೆಪಿ ಸರಕಾರವೇ ನೇಮಿಸಿದ್ದ ರಾಜ್ಯಪಾಲ ಮಲಿಕ್ ಹೇಳುತ್ತಾರೆ.

ಮಂಗಳೂರು, ಎ.20: ಕಾಶ್ಮೀರದ ಪುಲ್ವಾಮದಲ್ಲಿ ಕೇಂದ್ರ ಸರಕಾರ ರೂಪಿಸಿದ್ದ ಭದ್ರತಾ ವೈಫಲ್ಯದ ಕಾರಣ ನಲ್ವತ್ತು ಯೋಧರು ನಡು ರಸ್ತೆಯಲ್ಲಿ ಸಾಯುವಂತಾಗಿತ್ತು. ಮತ ಭೇದ ಇಲ್ಲದೆ ನಮ್ಮ ಯೋಧರು ಬಲಿಯಾಗಿ ಹೋದರು ಎಂದು ಬಿಜೆಪಿ ಸರಕಾರವೇ ನೇಮಿಸಿದ್ದ ರಾಜ್ಯಪಾಲ ಮಲಿಕ್ ಹೇಳುತ್ತಾರೆ. ಈ ಬಗ್ಗೆ ನಾವು ಪ್ರಶ್ನೆ ಮಾಡುವಂತಿಲ್ಲ ಎನ್ನುವುದನ್ನೂ ಹೇಳುತ್ತಾರೆ. ನಾನು ಕೇಳುತ್ತಿದ್ದೇನೆ, ನಾವು ಎಂಥಹ ಭಯಾನಕ ಸ್ಥಿತಿಯಲ್ಲಿದ್ದೇವೆ. ಕೇಂದ್ರ ಸರಕಾರದ ವೈಫಲ್ಯದಿಂದಾಗಿ ನಮ್ಮ ವೀರ ಯೋಧರು ಸತ್ತಿದ್ದರು, ನಾವು ಈಗ ಯಾರನ್ನು ನಂಬಬೇಕು. 56 ಇಂಚಿನ ಎದೆಯನ್ನು ನಂಬಬಹುದೇ ಎಂದು ಸುಧೀರ್ ಕುಮಾರ್ ಮರೋಳಿ ಪ್ರಶ್ನೆ ಮಾಡಿದ್ದಾರೆ.

ಕಾವೂರು ಜಂಕ್ಷನ್ನಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಆಲಿ ಪರವಾಗಿ ನಡೆದ ಸಮಾವೇಶದಲ್ಲಿ ಸುಧೀರ್ ಕುಮಾರ್, ಬಿಜೆಪಿ ಮತ್ತು ಕೇಂದ್ರ ಸರಕಾರದ ನಾಯಕರನ್ನು ಅಣಕಿಸಿ ಮಾತನಾಡಿದರು, ಸ್ವಚ್ಛ ಭಾರತ್, ಯೋಗ, ಜನಧನ್ ಹೆಸರಲ್ಲಿ ಮೋದಿ ತಮ್ಮ ಹೆಸರು, ಫೋಟೋ ಬಳಸಿ ಫೇಮಸ್ ಆಗಿದ್ದು ಬಿಟ್ಟರೆ ಜನರಿಗೆ ಯಾವುದೇ ಉಪಯೋಗ ಆಗಿಲ್ಲ. ನೆಹರು ಕಾಲದಿಂದ ನಿರ್ಮಲ ಭಾರತ್ ಅನ್ನುವ ಯೋಜನೆ ಇತ್ತು. ಅದರ ಹೆಸರನ್ನು ಬದಲಿಸಿ ಸ್ವಚ್ಛ ಭಾರತ್ ಮಾಡಿದ್ರು.  ಈ ಜಿಲ್ಲೆಯ ಜನರಲ್ಲಿ ತಾಂಟ್ರೆ ತಾಂಟ್, ತಾಂಟಲು ನಾವು ರೆಡಿ ಎನ್ನುವ ಬೀಜ ಬಿತ್ತಿದ್ದೇ ಸಾಮರಸ್ಯ ಕದಡಲು ಕಾರಣ.

ಪ್ರವೀಣ್ ನೆಟ್ಟಾರು ಒಬ್ಬ ಅಮಾಯಕ ಯುವಕನಾಗಿದ್ದ. ಆತನ ನೆತ್ತರು ಬೀಳುವಂತೆ ಮಾಡಿದ್ದು ಇದೇ ತಾಂಟ್ರೆ ತಾಂಟ್ ಅನ್ನುವ ಧೋರಣೆ. ಇವರು ಕೂಡ ಹಾಗೆಯೇ, ಅತ್ತ ಅವರು ಕೂಡ ಹಾಗೆಯೇ.. ತಾಂಟ್ರೆ ತಾಂಟ್ ಎಂದು ಹೇಳಿ ಅಮಾಯಕ ಯುವಕರ ನೆತ್ತರು ಹರಿಸಿ, ಈ ಜಿಲ್ಲೆಯ ಸಾಮರಸ್ಯ ಹಾಳು ಮಾಡಿದ್ದಾರೆ. ನಮಗೆ ಸಮಾಜದಲ್ಲಿ ಸಾಮರಸ್ಯ ಬಿತ್ತಲು 56 ಇಂಚಿನ ಎದೆ ಬೇಕಿಲ್ಲ. 36 ಇಂಚಿನ ಇನಾಯತ್ ಆಲಿ ಎಂಬ ಯುವಕ ಸಾಕು. ಸರ್ವ ಧರ್ಮವನ್ನು ಪ್ರೀತಿಸುವ ವ್ಯಕ್ತಿಗಳಿಂದಷ್ಟೇ ಸಾಮರಸ್ಯ ಬಿತ್ತಬಹುದು.

\

ಮಂಗಳೂರಿನಲ್ಲಿ ಬಂದರು ಮಾಡಿದ್ದು, ಏರ್ಪೋರ್ಟ್ ಮಾಡಿದ್ದು, ರೈಲ್ವೇ ಮಾಡಿದ್ದು, ರಸ್ತೆ ಮಾಡಿದ್ದು ಕಾಂಗ್ರೆಸ್. 15 ವರ್ಷಗಳಿಂದ ಸಂಸದನಾಗಿರುವ ನಳಿನ್ ಕುಮಾರ್, 30 ವರ್ಷಗಳಿಂದ ಸಂಸದರಾಗಿರುವ ಬಿಜೆಪಿಯವರು ಈ ಜಿಲ್ಲೆಗೆ ಕೊಟ್ಟ ಕೊಡುಗೆ ಏನಿದೆ ಎಂದು ಕೇಳಿದ ಸುಧೀರ್ ಕುಮಾರ್ ಮರೋಳಿ, ಬಿಜೆಪಿ ಸರಕಾರದ ಪ್ರತಿ ವೈಫಲ್ಯವನ್ನು ಬಿಚ್ಚಿಟ್ಟು ಜನರಿಗೆ ಮನ ಮುಟ್ಟುವಂತೆ ಭಾಷಣ ಮಾಡಿದರು. ಸಭೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಮಿಥುನ್ ರೈ, ಉಮೇಶ್ ದಂಡಕೇರಿ ಸೇರಿದಂತೆ ಹಲವರು ಭಾಷಣ ಮಾಡಿದರು. ಆನಂತರ, ಕಾವೂರಿನಿಂದ ಮಹಾಲಿಂಗೇಶ್ವರ ದೇವಸ್ಥಾನದ ವರೆಗೆ ಇನಾಯತ್ ಆಲಿ ರೋಡ್ ಶೋ ನಡೆಸಿ, ದೇವಸ್ಥಾನದಲ್ಲಿ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ಮಂಗಳೂರು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.

North constituency congress candidate Inayat Ali files nomination, huge followers join in procession. When asked about Moideen Bava joining the JD(S) party for not getting the ticket to contest from the Mangaluru North constituency, Inayat said, “We will try our best to bring Moideen Bava back to Congress. We are brothers and have a good relationship. We don’t have any ill feelings, when someone doesn’t get the ticket, it is natural to feel sad”. A large number of supporters accompanied Inayat Ali while filing his nomination papers.