ಬ್ರೇಕಿಂಗ್ ನ್ಯೂಸ್
20-04-23 07:17 pm Mangalore Correspondent ಕರಾವಳಿ
ಬಂಟ್ವಾಳ, ಎ.20: ಒಂಬತ್ತನೇ ಬಾರಿ ಚುನಾವಣೆ ಸ್ಪರ್ಧಿಸುತ್ತಿದ್ದೇನೆ. ಒಂದು ಬಾರಿಯೂ ಭ್ರಷ್ಟಾಚಾರ ಮಾಡಿಲ್ಲ. ನನ್ನಿಂದಾದ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಈ ಬಾರಿ ಮತ್ತೊಮ್ಮೆ ಜನ ನನ್ನನ್ನು ಆಯ್ಕೆ ಮಾಡುತ್ತಾರೆಂದು ನಂಬಿಕೆ ಇರಿಸಿದ್ದೇನೆ. ಗೆದ್ದರೆ ವಿಧಾನಸಭೆಗೆ ಹೋಗುತ್ತೇನೆ, ಇಲ್ಲದೇ ಇದ್ದರೆ ಮನೆಗೆ ಹೋಗುತ್ತೇನೆ.. ಯಾಕಂದ್ರೆ, ಇದು ನನ್ನ ಕೊನೆಯ ಚುನಾವಣೆ ಎಂದು ಖಡಕ್ಕಾಗಿ ಹೇಳಿದವರು ರಮಾನಾಥ ರೈ.
ಬಂಟ್ವಾಳ ಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆಗೈದು ಬಂಟ್ವಾಳ ತಾಲೂಕು ಕಚೇರಿ ವರೆಗೆ ಕಾರ್ಯಕರ್ತರ ಮೆರವಣಿಗೆ, ಕಾಲ್ನಡಿಗೆ ಯಾತ್ರೆಯೊಂದಿಗೆ ಬಂದ ರಮಾನಾಥ ರೈ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಆನಂತರ, ಸುದ್ದಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು. ನೀವು ಗೆಲ್ಲುವ ವಾತಾವರಣ ಇದೆಯಾ ಎಂಬ ಪ್ರಶ್ನೆಗೆ, ಕಳೆದ ಬಾರಿ ಸೋತಿದ್ದೇನೆಂದು ಮನೆಯಲ್ಲಿ ಕುಳಿತಿಲ್ಲ. ನಿರಂತರವಾಗಿ ಪಕ್ಷದ ಕಾರ್ಯಕರ್ತರ ಜೊತೆಗಿದ್ದೇನೆ. ಕಾರ್ಯಕರ್ತರೇ ನನಗೆ ಆಧಾರ. ಜನರ ನೋವು- ನಲಿವಿಗೆ ಆಸರೆಯಾಗಿದ್ದೇನೆ. ಜನರು ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡುತ್ತಾರೆಂಬ ಭರವಸೆ ಇದೆ ಎಂದರು.
ನೀವು ಕೊನೆಯ ಚುನಾವಣೆ ಅಂತೀರಿ, ನಿಮ್ಮ ನಂತರ ಯಾರಿದ್ದಾರೆ ಈ ಕ್ಷೇತ್ರದಲ್ಲಿ ಎಂಬ ಪತ್ರಕರ್ತರ ಅಣಕದ ಪ್ರಶ್ನೆಗೆ ಉತ್ತರಿಸಿದ ರಮಾನಾಥ ರೈ, ಬಹಳಷ್ಟು ಯುವ ಕಾರ್ಯಕರ್ತರಿದ್ದಾರೆ. ಯಾವುದೇ ಕ್ಷೇತ್ರ ಪಿತ್ರಾರ್ಜಿತ ಆಸ್ತಿಯಲ್ಲ. ನನಗೆ ಪಕ್ಷ ಅವಕಾಶ ಕೊಟ್ಟಿದೆ. ಮುಂದಿನ ಬಾರಿ ಇದನ್ನು ಯುವಕರಿಗೆ ಬಿಟ್ಟು ಕೊಡುತ್ತೇನೆ ಎಂದರು. ಕ್ಷೇತ್ರದಲ್ಲಿ ಎಸ್ಡಿಪಿಐ ಸ್ಪರ್ಧೆ ನಿಮಗೆ ತೊಡಕಾಗಲಾರದೇ ಎಂಬ ಪ್ರಶ್ನೆಗೆ, ಎಸ್ಡಿಪಿಐ ಕೋಮುವಾದಿ ಪಕ್ಷ. ಅವರ ಸಿದ್ಧಾಂತ, ನಿಲುವು ಅವರಿಗೆ ಬಿಟ್ಟದ್ದು. ನಮ್ಮ ಜಾತ್ಯತೀತ ಸಿದ್ಧಾಂತ, ಎಲ್ಲರನ್ನೊಳಗೊಂದು ಮಾಡುವ ಗುಣಕ್ಕೆ ಜನರು ಮತ ನೀಡಲಿದ್ದಾರೆ ಎಂದರು.
ಜನ ನಿಮ್ಮನ್ನೇ ಯಾಕೆ ಆಯ್ಕೆ ಮಾಡಬೇಕು ಎಂಬ ಪ್ರಶ್ನೆಗೆ, ಇಡೀ ರಾಜ್ಯದಲ್ಲಿ ಬಡವರಿಗೆ ಅತಿ ಹೆಚ್ಚು ಹಕ್ಕುಪತ್ರ ಕೊಟ್ಟಿದ್ದರೆ ಅದು ನಾನು ಶಾಸಕನಾಗಿದ್ದಾಗ ಮತ್ತು ನನ್ನ ಕ್ಷೇತ್ರದಲ್ಲಿ. 94 ಸಿ ಸಮಸ್ಯೆ ಬಗೆಹರಿಸಿದ್ದು ನನ್ನ ಅಧಿಕಾರ ಅವಧಿಯಲ್ಲಿ. ತೊಂದರೆ ಹೇಳಿಕೊಂಡು ಬಂದ ಜನರ ಸಮಸ್ಯೆ ಪರಿಹರಿಸಿದ್ದು ನಾನು. ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಆಗಿರಲಿ, ರಸ್ತೆ, ಮೂಲಸೌಕರ್ಯ ಸಮಸ್ಯೆಯಿರಲಿ, ಸ್ಪಂದಿಸಿ ಕೆಲಸ ಮಾಡಿದ್ದೇನೆ. ನಾನು ಅನುದಾನ ತಂದು ಮಾಡಿದ ಕೆಲಸವನ್ನು ಉದ್ಘಾಟಿಸಿ ತಮ್ಮದೆಂದು ಹೇಳಿಕೊಂಡವರು ಬಿಜೆಪಿಯವರು. ಜನರಿಗೆ ನಾನೇನು ಅಂತ ಗೊತ್ತು, ಮತ ನೀಡಲಿದ್ದಾರೆ ಎಂದರು.
Bantwal assembly constituency Congress candidate B Ramanath Rai was accompanied by a massive before he filed his nomination on Thursday, April 20. People enthusiastically began their rally from Tirumala Venkataramana temple, Bantwal and progressed till the B C Road bus stand. Rai walked in the company of party leaders and filed his nomination at the election office in Mini Vidhana Soudha.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm