ಬ್ರೇಕಿಂಗ್ ನ್ಯೂಸ್
19-04-23 09:15 pm Udupi Correspondent ಕರಾವಳಿ
ಉಡುಪಿ, ಎ.19: ಕಾಂಗ್ರೆಸ್ ಮುಖಂಡ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಬಗ್ಗೆ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡಿದ್ದ ಪ್ರಕರಣದಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯ ಬಿಟಿವಿ ಸುದ್ದಿ ವಾಹಿನಿಯ ಎಂಡಿ ಕುಮಾರ್ ಅಲಿಯಾಸ್ ಮುನೀಂದ್ರ ಕುಮಾರ್, ನಿರೂಪಕ ಶೇಷಕೃಷ್ಣ ಹಾಗೂ ವರದಿಗಾರನಿಗೆ ಎರಡು ವರ್ಷಗಳ ಶಿಕ್ಷೆ ವಿಧಿಸಿದೆ.
ತನ್ನ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಕಿಶನ್ ಹೆಗ್ಡೆ ಅವರು ಉಡುಪಿ ನ್ಯಾಯಾಲಯದಲ್ಲಿ ಬಿಟಿವಿ ವಾಹಿನಿಯ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. 2017ರಲ್ಲಿ ಹೂಡಿದ್ದ ಪ್ರಕರಣದ ಬಗ್ಗೆ ಆರು ವರ್ಷಗಳ ಕಾಲ ವಿಚಾರಣೆ ನಡೆಸಿದ ಕೋರ್ಟ್ ಇದೀಗ ಆರೋಪ ಸಾಬೀತಾಗಿರುವುದರಿಂದ ಎರಡು ವರ್ಷಗಳ ಸಾದಾ ಶಿಕ್ಷೆ ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಐಪಿಸಿ 500 ಮತ್ತು 501ರ ಸೆಕ್ಷನ್ 34 ಪ್ರಕಾರ, ವ್ಯಕ್ತಿಯ ತೇಜೋವಧೆ ದಂಡನೀಯ ಅಪರಾಧವಾಗಿದ್ದು, ಎರಡೂ ಪ್ರಕರಣಗಳಲ್ಲಿ ಆರೋಪಿಗಳಿಗೆ ತಲಾ ಎರಡು ವರ್ಷಗಳ ಶಿಕ್ಷೆಯನ್ನು ವಿಧಿಸಿದೆ. ಅಲ್ಲದೆ, ತಲಾ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿದೆ. ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ ಆರು ತಿಂಗಳ ಶಿಕ್ಷೆ ಅನುಭವಿಸಬೇಕಿದೆ. ಮಂಗಳೂರಿನ ಸಹಕಾರಿ ಬ್ಯಾಂಕಿನ ಪ್ರಭಾವಿ ಅಧ್ಯಕ್ಷರೊಬ್ಬರಿಂದ ಹಣ ಪಡೆದು ಬಿಟಿವಿ ವಾಹಿನಿಯವರು ಕಿಶನ್ ಹೆಗ್ಡೆ ಬಗ್ಗೆ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡಿದ್ದರು ಎಂಬ ಆರೋಪಗಳಿದ್ದವು. ಯಾವುದೇ ದಾಖಲೆ ಇಲ್ಲದೆ, ಮಾಧ್ಯಮದ ನೈತಿಕ ಧರ್ಮ ಉಲ್ಲಂಘಿಸಿ ಸುದ್ದಿ ಪ್ರಸಾರ ಮಾಡಿ ವ್ಯಕ್ತಿಯ ತೇಜೋವಧೆ ಮಾಡಿದ್ದನ್ನು ನ್ಯಾಯಾಲಯ ಎತ್ತಿ ಹಿಡಿದಿದ್ದು, ಆರೋಪಿಗಳಾದ ಬಿಟಿವಿ ವಾಹಿನಿಯ ಎಂಡಿ ಕುಮಾರ್ ಅಲಿಯಾಸ್ ಮುನೇಂದ್ರ ಕುಮಾರ್, ನಿರೂಪಕ ಶೇಷಕೃಷ್ಣ ಮತ್ತು ವರದಿಗಾರನನ್ನು ತಪ್ಪಿತಸ್ಥರೆಂದು ಘೋಷಿಸಿದೆ.
ಕೋರ್ಟ್ ತೀರ್ಪು ಘೋಷಣೆ ಸಂದರ್ಭದಲ್ಲಿ ಈ ಮೂವರು ಕೂಡ ಕೋರ್ಟಿಗೆ ಹಾಜರಾಗಿದ್ದರು. ಆರೋಪಿಗಳ ಪರ ವಕೀಲರಾಗಿದ್ದ ದಿನೇಶ್ ಹೆಗ್ಡೆ ಉಳೆಪಾಡಿ ಜೈಲು ಶಿಕ್ಷೆ ತಪ್ಪಿಸಲು ನ್ಯಾಯಾಲಯದಿಂದ ತಾತ್ಕಾಲಿಕ ಜಾಮೀನು ಪಡೆದಿದ್ದಾರೆ. ಒಂದು ತಿಂಗಳಲ್ಲಿ ಮೇಲಿನ ಕೋರ್ಟಿನಿಂದ ಶಿಕ್ಷೆಗೆ ತಡೆಯಾಜ್ಞೆ ತರದೇ ಇದ್ದಲ್ಲಿ ಈ ಮೂವರು ಕೂಡ ಜೈಲು ಪಾಲಾಗಲಿದ್ದಾರೆ. ಕಿಶನ್ ಹೆಗ್ಡೆ ಪರವಾಗಿ ಉಡುಪಿಯ ವಿಜಯ್ ಹೆಗ್ಡೆ ವಾದಿಸಿದ್ದರು. ಕಿಶನ್ ಹೆಗ್ಡೆ ಉಡುಪಿ ಪಿಎಲ್ ಡಿ ಬ್ಯಾಂಕಿನಲ್ಲಿ ಅವ್ಯವಹಾರ ನಡೆಸಿದ್ದಾಗಿ ಬಿಟಿವಿ ಸುದ್ದಿ ಪ್ರಸಾರ ಮಾಡಿತ್ತು.
Kishan Hedge Deformation news in BTV Kannada, MD Muneendra Kumar and two others get two years jail term. A criminal suit was carried aginst J M Kumar, Anchor Shreekrishna and reporter of BTV for alleged news against PLD Bank irregularities by Kishan Hedge Kolkebail in 2017.
30-12-25 11:12 pm
HK News Desk
ಬಯೋಕಾನ್ ಕಂಪನಿ ಟೆಕ್ಕಿ ಆಫೀಸ್ ಕಟ್ಟಡದ ಆರನೇ ಮಹಡಿಯಿ...
30-12-25 10:14 pm
ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ವಜಾಗೊಳಿಸುವ ಅಧಿಕಾ...
30-12-25 06:34 pm
ಪ್ರಿಯಾಂಕ ಗಾಂಧಿ ಪುತ್ರ ರೈಹಾನ್ ಮದುವೆ ನಿಶ್ಚಿತಾರ್ಥ...
30-12-25 05:44 pm
ಕೇರಳದಲ್ಲಿ ಚುನಾವಣೆಯಾದ್ರೆ ಪಿಣರಾಯಿಗೆ ಕರ್ನಾಟಕದಲ್ಲ...
30-12-25 05:10 pm
30-12-25 06:48 pm
HK News Desk
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
30-12-25 10:43 pm
Mangalore Correspondent
ಯುವತಿಗೆ ಮಗು ಕರುಣಿಸಿದ ಪ್ರಕರಣ ; ಬಿಜೆಪಿಯಿಂದ ಜಗನ್...
29-12-25 11:03 pm
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
ಹಿಂದುತ್ವದ ನೆಲೆ ಅನ್ನೋರಿಗೆ ನಾಚಿಕೆಯಾಗಬೇಕು, ವಿಶ್ವ...
29-12-25 07:37 pm
ಉಡುಪಿ ; ಬುದ್ದಿ ಮಾತು ಹೇಳಿದ್ದಕ್ಕೆ 17 ವರ್ಷದ ಯುವತ...
29-12-25 01:24 pm
30-12-25 10:40 pm
Mangalore Correspondent
ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಹಲ್ಲೆ ;...
30-12-25 12:42 pm
ಯೆಯ್ಯಾಡಿ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಕರಿಮಣಿ...
29-12-25 03:02 pm
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm