ಫುಟ್ಬಾಲ್ ಮೈದಾನದ ಬಳಿ ಪುಂಡು ಪೋಕರಿಗಳ ಹೊಡೆದಾಟ ; ಪೆವಿಲಿಯನ್ನಿಂದ ಬಿದ್ದು ವ್ಯಕ್ತಿ ಮೃತ್ಯು 

18-04-23 07:47 pm       Mangalore Correspondent   ಕರಾವಳಿ

ನಗರದ ಸ್ಟೇಟ್ ಬ್ಯಾಂಕ್ ವೃತ್ತದ ಬಳಿಯ ಫುಟ್ಬಾಲ್ ಮೈದಾನದ ಪೆವಿಲಿಯನ್ ಹಿಂಭಾಗದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪಾಂಡೇಶ್ವರ ಪೊಲೀಸರು ತ‌ನಿಖೆ ನಡೆಸುತ್ತಿದ್ದಾರೆ.

ಮಂಗಳೂರು, ಎ.18 : ನಗರದ ಸ್ಟೇಟ್ ಬ್ಯಾಂಕ್ ವೃತ್ತದ ಬಳಿಯ ಫುಟ್ಬಾಲ್ ಮೈದಾನದ ಪೆವಿಲಿಯನ್ ಹಿಂಭಾಗದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪಾಂಡೇಶ್ವರ ಪೊಲೀಸರು ತ‌ನಿಖೆ ನಡೆಸುತ್ತಿದ್ದಾರೆ. 

ಬಂಟ್ವಾಳ ತಾಲೂಕಿನ ಅಮ್ಮುಂಜೆ ನಿವಾಸಿ ಜನಾರ್ದನ ಪೂಜಾರಿ (32) ಮೃತರು. ಮಂಗಳವಾರ ಸಂಜೆ ಮೈದಾನದ ಬಳಿಯಲ್ಲಿ ಯಾರೋ ಬಿದ್ದು ಮೃತಪಟ್ಟಿದ್ದಾಗಿ ಸಾರ್ವಜನಿಕರು ಪೊಲೀಸ್ ಕಮಿಷನರ್ ಕಚೇರಿಗೆ ಫೋನ್ ಮಾಡಿದ್ದರು. ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. 

ಪಾಂಡೇಶ್ವರ ಪೊಲೀಸರು ಸ್ಥಳದಲ್ಲಿದ್ದ ಸಾರ್ವಜನಿಕರನ್ನು ಪರಿಶೀಲನೆ ನಡೆಸಿದಾಗ, ಜನಾರ್ದನ ಪೂಜಾರಿ ಬಳಿಯಿದ್ದ ಮೊಬೈಲನ್ನು ಕಿತ್ತುಕೊಳ್ಳಲು ಜಗಳ ನಡೆಸಿದ್ದಾರೆ. ಈ ವೇಳೆ, ಪೆವಿಲಿಯನ್ ಮೇಲಿದ್ದ ಜನಾರ್ದನ್ ತಳ್ಳಾಟದಲ್ಲಿ ಮೇಲ್ಭಾಗದಿಂದ ನೆಲಕ್ಕೆ ಬಿದ್ದಿದ್ದಾರೆ. 15 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದವರನ್ನು ಉಳಿದವರು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಬಿಸಿಲಿನ ಧಗೆಯಿಂದ ಜನಾರ್ದನ್ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ನಾಲ್ಕು ಮಂದಿಯನ್ನು ಶಂಕೆಯ ಮೇರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಫುಟ್ಬಾಲ್ ಮೈದಾನದ ಬಳಿ ಅನಾಥರು, ಭಿಕ್ಷುಕರು, ಬೀದಿ ಪೋಕರಿಗಳು, ಕುಡುಕರು ಬಂದು ಸೇರುತ್ತಿದ್ದು ರಾತ್ರಿ ದಿನವೂ ಜಗಳವಾಡುವುದು, ಹೊಡೆದಾಟ ನಡೆಸುವುದು ಕಾಮನ್ ಆಗಿದೆ. ಅಲ್ಲಿಗೆ ರಾತ್ರಿ ಹೊತ್ತಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿಷೇಧ ಹಾಕಬೇಕಿದ್ದರೂ ಪಾಲಿಕೆಯವರು ಗಮನ ಹರಿಸಿಲ್ಲ ಎನ್ನುತ್ತಾರೆ ಪೊಲೀಸರು.

A person hailing from Polali of Bantwala taluk body was found in Mangaluru and the accused has been arrested in a swift action by the police. The murdered person is identified as Janardana Barinja, a resident of Ammunje near Polali.