ಬ್ರೇಕಿಂಗ್ ನ್ಯೂಸ್
15-04-23 09:21 pm Mangalore Correspondent ಕರಾವಳಿ
ಪುತ್ತೂರು, ಎ.15: ಇಡೀ ರಾಜ್ಯದಲ್ಲಿ ಹಿಂದುತ್ವದ ಪ್ರಯೋಗಶಾಲೆ ಎಂದು ಬಿಂಬಿತವಾಗಿರುವ ಪುತ್ತೂರಿನಲ್ಲಿ ಮತ್ತೊಮ್ಮೆ ಬಂಡಾಯದ ಕಹಳೆ ಮೊಳಗಿದೆ. 2008ರಲ್ಲಿ ಉರಿಮಜಲು ರಾಮ ಭಟ್ ನೇತೃತ್ವದಲ್ಲಿ ಶಕುಂತಳಾ ಶೆಟ್ಟಿ ಬಿಜೆಪಿ ವಿರುದ್ಧ ಬಂಡಾಯ ಎದ್ದು ಸ್ಪರ್ಧೆಗಿಳಿದಿದ್ದರು. ಅದೇ ರೀತಿಯ ಬಂಡಾಯದ ಕಣ ಈ ಬಾರಿಯೂ ಮರುಕಳಿಸುವ ಸಾಧ್ಯತೆ ಕಂಡುಬಂದಿದೆ. ಹಿಂದು ಸಂಘಟನೆಗಳ ಮುಖಂಡ ಅರುಣ್ ಪುತ್ತಿಲ ಬಿಜೆಪಿ ಟಿಕೆಸ್ ಸಿಗದ ಮುನಿಸಿನಲ್ಲಿ ಪಕ್ಷೇತರ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿ ನಡೆಸಿದ ಅರುಣ್ ಪುತ್ತಿಲ, ನಾನು ಬಿಜೆಪಿ ವಿರೋಧಿಯಲ್ಲ. ಆದರೆ ಬಿಜೆಪಿ ಅನುಸರಿಸುತ್ತಿರುವ ನಡೆಯನ್ನು ವಿರೋಧಿಸುತ್ತೇನೆ. ಹಿಂದುತ್ವದ ಪ್ರತಿಪಾದಕನಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ನನಗೆ ಹಿಂದುಗಳೇ ಆಶೀರ್ವಾದ ಮಾಡಬೇಕು. ನಾನು ಗೆದ್ದು ವಿಧಾನಸಭೆಗೆ ಹೋದರೂ ಬಿಜೆಪಿಯ ಪರ ಇರುತ್ತೇನೆ. ಬಿಜೆಪಿ ತತ್ವಗಳನ್ನೇ ಅನುಸರಿಸುತ್ತೇನೆ. ಪ್ರಧಾನಿ ಮೋದಿಯವರ ಪ್ರತಿಪಾದಕನಾಗಿರುತ್ತೇನೆ ಎಂದು ಹೇಳಿದರು.
ನಿಮ್ಮ ಸ್ಪರ್ಧೆಯಿಂದ ಕಾಂಗ್ರೆಸಿಗೆ ಲಾಭ ಎನ್ನುವ ಮಾತು ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ, ಯಾವುದೇ ಕಾರಣಕ್ಕೂ ಆ ಸ್ಥಿತಿ ಬರುವುದಿಲ್ಲ. ನನ್ನ ಸ್ಪರ್ಧೆಯಿಂದ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಗೆಲುವು ಯಾರಿಗೆ ಎಂದು ಮತದಾರ ನಿಶ್ಚಯಿಸಿದ್ದಾನೆ. ಅದು ಫಲಿತಾಂಶದಲ್ಲಿ ತಿಳಿದು ಬರಲಿದೆ. ನನ್ನ ಪರವಾಗಿ ದುಡಿಯಲು ಸಾವಿರಾರು ನಿಸ್ವಾರ್ಥ ಕಾರ್ಯಕರ್ತರಿದ್ದಾರೆ. ಅವರೇ ನನಗೆ ಬಲ, ಅವರೇ ನನಗೆ ದಾರಿದೀಪ ಎಂದು ಹೇಳಿದರು.
ಪುತ್ತೂರಿನ ಹಿಂದು ಸಂಘಟನೆಗಳ ಪಾಲಿಗೆ ಅರುಣ್ ಪುತ್ತಿಲ ಅವರದ್ದು ದೊಡ್ಡ ಹೆಸರು. ಕಳೆದ ಮೂರು ಚುನಾವಣೆಗಳಲ್ಲೂ ಪುತ್ತಿಲ ಹೆಸರು ಮುಂಚೂಣಿಗೆ ಬಂದಿತ್ತು. ಕಳೆದ ಬಾರಿಯ ಚುನಾವಣೆಯಲ್ಲಿ ಸತ್ಯಜಿತ್ ಸುರತ್ಕಲ್ ಮತ್ತು ಅರುಣ್ ಪುತ್ತಿಲ ಪರವಾಗಿ ಧ್ವನಿ ಕೇಳಿಬಂದಾಗ, ಗುರುಪುರ ಸ್ವಾಮೀಜಿ, ಕಲ್ಲಡ್ಕ ಭಟ್ಟರು ಸೇರಿದಂತೆ ಆರೆಸ್ಸೆಸ್ ಮುಖಂಡರು ಅವರನ್ನು ಮನವೊಲಿಸಿದ್ದರು. ನಿಮಗೆ ಪಕ್ಷದಲ್ಲಿ ಜವಾಬ್ದಾರಿ ಕೊಡಿಸುತ್ತೇವೆ ಎಂದು ಹೇಳಿ ಸಂತೈಸಿದ್ದರು. ಆದರೆ ಅರುಣ್ ಪುತ್ತಿಲ ಪಕ್ಷದ ಜವಾಬ್ದಾರಿ ಕೇಳಿದಾಗ, ಹಿಂದೆ ಭರವಸೆ ನೀಡಿದವರೇ ಕೈಕೊಟ್ಟಿದ್ದರು.
ವೈರುಧ್ಯಕ್ಕೆಲ್ಲ ರಾಜ್ಯಾಧ್ಯಕ್ಷನೇ ಕಾರಣ !
ಪುತ್ತೂರಿನವರೇ ಆದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ತನ್ನ ಕ್ಷೇತ್ರದಲ್ಲಿ ಪ್ರಬಲ ಶಾಸಕ ಬರಬಾರದು ಎಂಬ ನಿಲುವಿಗೆ ಅಂಟಿಕೊಂಡಿದ್ದೇ ಈ ರೀತಿಯ ಸ್ಥಿತಿಗೆ ಕಾರಣ ಎನ್ನುವ ಮಾತು ಕಾರ್ಯಕರ್ತರ ಒಳಗಡೆಯಿಂದ ಕೇಳಿಬರುತ್ತಿದೆ. ಪುತ್ತೂರು, ಸುಳ್ಯದಲ್ಲಿ ಡಮ್ಮಿ ಅಭ್ಯರ್ಥಿಗಳ ಹೆಸರು ಅಂತಿಮಗೊಂಡ ಬೆನ್ನಲ್ಲೇ ಕಾರ್ಯಕರ್ತರ ಆಕ್ರೋಶ ರಾಜ್ಯಾಧ್ಯಕ್ಷನ ವಿರುದ್ಧ ತಿರುಗಿತ್ತು. ಪುತ್ತೂರು, ಸುಳ್ಯದಲ್ಲಿ ಪಿಎಫ್ಐ, ಎಸ್ಡಿಪಿಐ ಪ್ರಭಾವ ಹೆಚ್ಚುತ್ತಿರುವಾಗ ಪ್ರಬಲ ಹಿಂದುತ್ವವಾದಿ ಶಾಸಕರೇ ಬೇಕು ಅನ್ನುವುದು ಕಾರ್ಯಕರ್ತರ ಅಹವಾಲು ಆಗಿತ್ತು. ಆದರೆ ರಾಜ್ಯ ಪ್ರತಿನಿಧಿಸುವ ವ್ಯಕ್ತಿಗಳಿಗೆ ತನಗಿಂತ ಚತುರರು ಮೇಲೆ ಬರಬಾರದು ಎನ್ನುವ ದೂರಾಲೋಚನೆಯೇ ಪ್ರಬಲವಾಗಿದ್ದ ಮೇಲೆ ಸೂಕ್ತ ಆಯ್ಕೆ ಸಾಧ್ಯವಾದೀತೇ ಎನ್ನುವ ಮಾತು ಕೇಳಿಬರುತ್ತಿದ್ದು, ಇಲ್ಲಿನ ವೈರುಧ್ಯಕ್ಕೆಲ್ಲ ಅಧ್ಯಕ್ಷನೇ ಕಾರಣ ಅನ್ನುವ ಭಾವನೆ ಪ್ರಬಲಗೊಳ್ಳುತ್ತಿದೆ.
ಈ ಬಾರಿಯೂ ಅರುಣ್ ಪುತ್ತಿಲ ಬಂಡಾಯ ಏಳುವುದು ಸುಳಿವು ಸಿಗುತ್ತಲೇ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರು ಮನವೊಲಿಸಲು ಮುಂದಾಗಿದ್ದರು. ಆದರೆ ಕಾರ್ಯಕರ್ತರು ಕೇಳುವ ಸ್ಥಿತಿಯಲ್ಲಿ ಇಲ್ಲ. ಕಲ್ಲಡ್ಕ ಪ್ರಭಾಕರ ಭಟ್ಟರ ಮಾತನ್ನೂ ಕೇಳಲಿಲ್ಲ ಎನ್ನಲಾಗುತ್ತಿದೆ. ಯಾಕಂದ್ರೆ, ಕಳೆದ ಬಾರಿ ನೀಡಿದ್ದ ಭರವಸೆಯನ್ನೇ ಇವರು ಈಡೇರಿಸಿಲ್ಲ. ಮುಂಗೈಗೆ ಬೆಲ್ಲ ಹಚ್ಚುವ ತಂತ್ರಗಾರಿಕೆ, ಅಸಮರ್ಥರನ್ನು ಮಾತ್ರ ಬೆಳೆಸುವ ಪರಿಯ ಬಗ್ಗೆ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಇದೇ ಕಾರಣಕ್ಕೆ ರಾಜ್ಯಾಧ್ಯಕ್ಷನ ತವರು ಕ್ಷೇತ್ರದಲ್ಲಿಯೇ ಬಂಡಾಯದ ಬಾವುಟ ಹಾರಿದೆ. ಹಿಂದುತ್ವದ ಆಧಾರದಲ್ಲಿ ಮತ ಪಡೆಯುವ ಮಂದಿ ಜಾತಿ ಆಧಾರದಲ್ಲಿ ಟಿಕೆಟ್ ನೀಡುವುದು ಯಾಕೆ, ಜಾತಿಯಿಲ್ಲ, ಹಿಂದುತ್ವ ಅಂದಮೇಲೆ ಜಾತಿ ಯಾಕೆ ಎಂಬ ಮಾತು ಕಾರ್ಯಕರ್ತರಿಂದ ಕೇಳಿಬರುತ್ತಿದೆ.
ಇದಕ್ಕಾಗಿ ಪ್ರತಿ ಬಾರಿ ಚುನಾವಣೆಯಲ್ಲಿ ನೈಜ ಹಿಂದುತ್ವವಾದಿ ನಾಯಕನನ್ನು ತುಳಿಯುತ್ತಿರುವುದಕ್ಕೆ ಮದ್ದರೆಯಲು ಕಾರ್ಯಕರ್ತನೇ ಮುಂದಾಗಿದ್ದಾನೆ. ರಾಜಕೀಯದಲ್ಲಿ ಮೇಲೇರಲು ಹಿಂದುತ್ವ ಮಾತ್ರ ಸಾಲುವುದಿಲ್ಲ ಎಂದು ಸತ್ಯಜಿತ್ ಸುರತ್ಕಲ್ ಅವರಿಗೆ ಸಂತೋಷದ ಸಲಹೆ ನೀಡಿ ಕಳುಹಿಸಿದ್ದಕ್ಕೂ ಪುತ್ತೂರಿನಲ್ಲಿ ತಿರುಗೇಟು ನೀಡಲು ಸಜ್ಜಾಗಿದ್ದಾರೆ.
Followers of Arun Kumar Puthila in Puttur slam state president Nalin Kateel over miss of ticket. Puthila will now contest as independent candidate from Puttur. The BJP’s decision to give a ticket to former zilla panchayat president Asha Thimmappa Gowda to contest from Puttur constituency has irked not only the fans of hardcore Hindutva leader Arun Kumar Puthila, but also the followers of incumbent MLA Sanjeeva Matandoor
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm