ಬ್ರೇಕಿಂಗ್ ನ್ಯೂಸ್
24-03-23 07:19 pm Mangaluru Staffer ಕರಾವಳಿ
ಮಂಗಳೂರು, ಮಾ.24: ಮಂಗಳೂರಿನಲ್ಲಿ ಈ ಬಾರಿ ದೇಶದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಮಾರ್ಚ್ ತಿಂಗಳಲ್ಲಿ ಪ್ರತಿ ಬಾರಿ ಕರಾವಳಿಯಲ್ಲಿ ಬಿರು ಬೇಸಗೆ ಇರುತ್ತದೆ. ಆದರೆ ಈ ಬಾರಿ 39 ಡಿಗ್ರಿ ಸೆಲ್ಶಿಯಸ್ ಉಷ್ಣತೆ ತೋರಿಸಿದ್ದು ಗರಿಷ್ಠ ತಾಪಮಾನದ ದಾಖಲೆ. ಇನ್ನೈವತ್ತು ವರ್ಷದಲ್ಲಿ ಮಂಗಳೂರು ಮುಳುಗುತ್ತದೆ ಎನ್ನುವ ತಜ್ಞರ ವರದಿಯನ್ನು ಪುಷ್ಟೀಕರಿಸುವ ವಿದ್ಯಮಾನ. ಮರಗಳನ್ನು ಕಡಿಯುವುದು, ಹೆಚ್ಚುತ್ತಿರುವ ಕಾಂಕ್ರೀಟ್ ರಸ್ತೆ ತಾಪಮಾನ ಏರುತ್ತಿರುವುದಕ್ಕೆ ಸಹಜ ಕಾರಣ. ಹೀಗಿದ್ದರೂ, ಮಂಗಳೂರಿನ ಜನರು, ಅಧಿಕಾರಿಗಳು ಎಷ್ಟು ನಿರ್ಲಜ್ಜರು ಅಂದರೆ, ರಸ್ತೆ ಬದಿ ಹೋರ್ಡಿಂಗ್ಸ್ ಜಾಹೀರಾತು ಹಾಕಲು ಏಳೆಂಟು ದೊಡ್ಡ ಮರಗಳನ್ನು ಕಡಿದರೂ ತುಟಿ ಪಿಟಕ್ಕೆನ್ನುವುದಿಲ್ಲ.
ನಗರದ ಕದ್ರಿಯಲ್ಲಿ ಬಿಜೈ ಕಡೆಯಿಂದ ಸರ್ಕಿಟ್ ಹೌಸ್ ನತ್ತ ಸಾಗುವ ಏರು ರಸ್ತೆಯ ಎಡ ಬದಿಯಲ್ಲಿ ಏಳೆಂಟು ದೊಡ್ಡ ಮರಗಳನ್ನು ಕಡಿದು ಹಾಕಲಾಗಿದೆ. ವಾರದ ಹಿಂದೆ ಮರಗಳನ್ನು ಕಡಿದಿದ್ದು, ಅಲ್ಲೀಗ ನೋಡಿದರೆ ಜಾಹೀರಾತು ಹಾಕುವ ಹೋರ್ಡಿಂಗ್ಸ್ ಪಿಲ್ಲರ್ ಹಾಕಲಾಗಿದೆ. ಮರಗಳನ್ನು ಕಡಿದು ಅಲ್ಲಿಯೇ ಗುಂಡಿಗೆ ತಳ್ಳಿ ಬಿಡಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಬಳಿ ಕೇಳಿದರೆ, ಅದೇನೋ ನಿರ್ಲಕ್ಷ್ಯ ಭಾವ ತೋರುತ್ತಾರೆ. ಅದು ಖಾಸಗಿ ಜಾಗ ಆಗಿರಬೇಕು, ಹೊಯ್ಗೆ ಬಜಾರ್ ಕಚೇರಿಗೆ ಬಂದು ಕಂಪ್ಲೇಂಟ್ ಕೊಡಿ ಎಂದು ಹೇಳುತ್ತಾರೆ. ಅರಣ್ಯಾಧಿಕಾರಿಗಳಿಗೆ ರಸ್ತೆ ಬದಿಯ ಮರಗಳನ್ನು ಕಡಿದಲ್ಲಿ ಸ್ವಯಂಪ್ರೇರಿತ ಕೇಸು ದಾಖಲಿಸಲು ಅವಕಾಶ ಇದೆ, ಯಾರು ಮರ ಕಡಿದಿದ್ದಾರೋ ಅಂಥವರ ವಿರುದ್ಧ ಕ್ರಮವನ್ನೂ ತೆಗೆದುಕೊಳ್ಳಬಹುದು. ಸಾಮಾನ್ಯ ಜನರಾದರೆ ದುಬಾರಿ ದಂಡವನ್ನೂ ಪೀಕಿಸುತ್ತಾರೆ. ಆದರೆ, ಇಲ್ಲಿ ಮಾತ್ರ ಅರಣ್ಯ ಅಧಿಕಾರಿಗಳು ಪುಕ್ಕಟೆ ಸಂಬಳ ತಿಂದು ತೇಗಲು ಇದ್ದವರ ರೀತಿ ವರ್ತಿಸುತ್ತಾರೆ. ಹೋರ್ಡಿಂಗ್ಸ್ ಹಾಕೋರು ಬಿಸಾಕುವ ಎಂಜಲು ದುಡ್ಡು ಇವರ ಜೇಬು ತುಂಬಿಸುತ್ತದೆ ಇರಬೇಕು.
ಮಹಾನಗರ ಪಾಲಿಕೆಯ ಮೇಯರ್ ಬಳಿ ವಿಚಾರಿಸಿದರೆ, ಅದೇನೋ ಗೊತ್ತಿಲ್ಲ. ವಿಚಾರಿಸುತ್ತೇನೆ ಎನ್ನುತ್ತಾರೆ. ನಿರ್ದಿಷ್ಟ ಜಾಗ ಹೇಳಿ, ಇದಕ್ಕೆ ಯಾರು ಪರ್ಮಿಷನ್ ಕೊಟ್ಟವರು ? ಆ ಅಧಿಕಾರಿಯ ಹೆಸರೇಳಿ ಅಂದರೆ ಉತ್ತರ ನೀಡಲ್ಲ. ಪಾಲಿಕೆಯಲ್ಲಿ ಇಂಥ ಬಿಕ್ನಾಸಿ ಕೆಲಸ ಮಾಡುವುದಕ್ಕೆಂದೇ ದಲ್ಲಾಳಿಗಳು, ಸರಕಾರಿ ಸಂಬಳ ಪಡೆಯುವ ಅಧಿಕಾರಿಗಳಿದ್ದಾರೆ. ಹೋರ್ಡಿಂಗ್ಸ್ ಗ್ರಿಲ್ಸ್ ಹಾಕುತ್ತಿದ್ದ ಕಾರ್ಮಿಕರ ಬಳಿ ಕೇಳಿದರೆ, ತಿರುಮಲ ಏಡ್ಸ್ ನವರದ್ದು ಎನ್ನುವ ಹೆಸರೇಳುತ್ತಾರೆ. ಈ ಬಗ್ಗೆ ಕೆಲವರಲ್ಲಿ ವಿಚಾರಿಸಿದಾಗ, ಅದು ಮಂಗಳೂರಿನ ಪ್ರಭಾವಿ ಬಿಜೆಪಿ ಕಾರ್ಪೊರೇಟರ್ ಒಬ್ಬರ ಬೇನಾಮಿ ದುಡ್ಡಿನಲ್ಲಿ ಮಾಡುತ್ತಿರುವ ಹೊಸ ಹೋರ್ಡಿಂಗ್ಸ್ ಕಂಪನಿಯೆಂದು ಹೇಳುತ್ತಾರೆ. ಹಿಂದೆ ಪಡೀಲ್ ಕಣ್ಣೂರಲ್ಲಿ ಹೊಯ್ಗೆ ವ್ಯಾಪಾರ ಮಾಡುತ್ತಿದ್ದವರು ಈಗ ನಗರದಲ್ಲಿ ಎರಡನೇ ಬಾರಿಗೆ ಕಾರ್ಪೊರೇಟರ್ ಆಗಿ ಹಲವು ಕಡೆ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ತಿಳಿಸುತ್ತಾರೆ.
ಏನೇ ಇರಲಿ, ಬಡಪಾಯಿ ಮರಗಳಿಗೆ ಬಾಯಿ ಬರಲ್ಲ. ಕಡಿದರೂ, ರಕ್ತ ಬರಲ್ಲ, ನೋವು ಆಗಲ್ಲ ಎಂದು ಇವರು ಬೇಕಾಬಿಟ್ಟಿ ಕೊಡಲಿ ಹಾಕಿದ್ದಾರೆಯೇ..? ಇದೇ ಮರಗಳಿಗೂ ಜೀವ ಇದೆ, ನೋವು ಇದೆ, ನೋವನ್ನು ನುಂಗಿ ನಮಗೆ ನೆರಳು ಕೊಡುತ್ತವೆ, ವಾಹನಗಳು ಉಗುಳುವ ಹೊಗೆಯನ್ನು ಹೀರಿ ಶುದ್ಧ ಆಮ್ಲಜನಕ ಕೊಡುತ್ತವೆ ಅನ್ನುವಷ್ಟಾದರೂ, ಕಾಳಜಿ ನಮ್ಮವರಿಗೆ ಇಲ್ಲದೆ ಹೋಯಿತಲ್ಲ. ಬಿರು ಬಿಸಿಲಿದ್ದರೂ, ಒಂದು ಮರದ ಅಡಿಯಲ್ಲಿ ನಿಂತರೆ ಎಸಿಗಿಂತ ಹಿತವಾಗಬಲ್ಲ ಅನುಭವ ಸಿಗುತ್ತದೆ. ಅದು ಹಸಿರು ಹೊದ್ದು ನಿಂತ ಒಂದು ಮರದ ತಾಕತ್ತು. ಇಲ್ಲಿ ಏಳೆಂಟು ಮರಗಳನ್ನು ಕಡಿದು ಹಾಗೇ ಒಣಗಲು ಬಿಡಲಾಗಿದೆ. ಬುಡ ಕಿತ್ತು ಉರುಳಿ ಬಿದ್ದ ಮರದ ಕಾಂಡಗಳು ಅಲ್ಲಿನ ನೈಜತೆಯನ್ನು ತಿಳಿಸುತ್ತದೆ. ರಸ್ತೆ ಅಗಲೀಕರಣಕ್ಕೆ ಮರಗಳನ್ನು ಕಡಿಯುತ್ತಾರೆ, ಈಗ ರಸ್ತೆ ಬದಿ ಗುಂಡಿಯಲ್ಲಿರುವ ಮರಗಳನ್ನೂ ಹೋರ್ಡಿಂಗ್ಸ್ ಮಾಫಿಯಾದವರು ಕಡಿಯುತ್ತಿರುವುದು ಮಂಗಳೂರಿನ ಜನರ ದುರಂತ ಸ್ಥಿತಿ. ಸರಕಾರಿ ಸಂಬಳ ಪಡೆದು ತೇಗುವ ಪಾಲಿಕೆ ಅಧಿಕಾರಿಗಳ ದೈನೇಸಿತನಕ್ಕೆ ಕನ್ನಡಿ ಹಿಡಿಯುತ್ತದೆ.
Mangalore Dozens Of Trees Cut Down To Make Corporaters business Tirumala agency Advertisements hoardings Visible near Bejai. When Headline Karnataka contacted Mayor asking about it he said he doesn't know about it.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 10:14 pm
Mangalore Correspondent
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm