ಬ್ರೇಕಿಂಗ್ ನ್ಯೂಸ್
11-02-26 11:02 pm HK News Desk ಕರ್ನಾಟಕ
ತುಮಕೂರು, ಫೆ.12: ಲಕ್ಷಾಂತರ ರೂಪಾಯಿ ಮೌಲ್ಯದ ವಾಹನ, ಇನ್ನಾವುದೇ ವಸ್ತುಗಳನ್ನು ಖರೀದಿಸುವಾಗ ಹತ್ತಾರು ಬಾರಿ ಯೋಚನೆ ಮಾಡ್ತಾರೆ. ಖರೀದಿಸಿದ ವಾಹನ ತೆಗೆದುಕೊಂಡ ಕೆಲವೇ ದಿನಗಳಲ್ಲಿ ಹಾಳಾದರೆ ಅದೆಷ್ಟು ಬೇಜಾರಾಗುತ್ತೆ. 52 ಲಕ್ಷ ರೂಪಾಯಿ ಮೌಲ್ಯದ ‘ಹಿಟಾಚಿ 140’ ಯಂತ್ರವನ್ನು ಖರೀದಿಸಿದ ಐದು ತಿಂಗಳಲ್ಲೇ ಗಂಭೀರ ದೋಷ ಕಾಣಿಸಿಕೊಂಡಿದ್ದು ಇದರಿಂದ ತೀವ್ರ ಚಿಂತೆಗೀಡಾದ ಗ್ರಾಹಕ ಹಿಟಾಚಿಯನ್ನೇ ಶೋರೂಮ್ ಎದುರಿಟ್ಟು ಪ್ರತಿಭಟನೆ ನಡೆಸಿದ್ದಾನೆ.
ಗುಬ್ಬಿ ಮೂಲದ ಗಿರೀಶ್ ಎಂಬವರು ತುಮಕೂರಿನ ಅಂತರಸನಹಳ್ಳಿಯಲ್ಲಿ 7 ಲಕ್ಷ ರೂ. ಡೌನ್ ಪೇಮೆಂಟ್ ಮಾಡಿ 52 ಲಕ್ಷ ಮೌಲ್ಯದ ‘ಹಿಟಾಚಿ 140’ ಯಂತ್ರವನ್ನು ಖರೀದಿಸಿದ್ದರು. ಇದಕ್ಕೆ ಪ್ರತಿ ತಿಂಗಳು 1.15 ಲಕ್ಷ ರೂ. ಇಎಂಐ ಪಾವತಿಸುತ್ತಿದ್ದರು. 7,000 ಗಂಟೆಗಳ ವಾರಂಟಿ ಇರುವುದಾಗಿ ಕಂಪನಿ ತಿಳಿಸಿದ್ದರೂ ಖರೀದಿಸಿದ 480 ಗಂಟೆಗಳ ಬಳಕೆಯಲ್ಲೇ ಯಂತ್ರ ತಾಂತ್ರಿಕ ದೋಷಕ್ಕೀಡಾಗಿ ಸ್ಥಗಿತಗೊಂಡಿದೆ ಎಂದು ಗಿರೀಶ್ ಆರೋಪಿಸಿದ್ದಾರೆ.
ಇದಲ್ಲದೆ, ಯಂತ್ರವು ನಿರೀಕ್ಷೆಗಿಂತ ಹೆಚ್ಚು ಡೀಸೆಲ್ ಖರ್ಚು ಮಾಡುತ್ತಿರುವುದಾಗಿ, ಕಾರ್ಯಕ್ಷಮತೆಯೂ ಕುಸಿದಿರುವುದಾಗಿ ಗಿರೀಶ್ ಹೇಳಿದ್ದಾರೆ. ಕಳೆದ ಎರಡು ತಿಂಗಳಿನಿಂದ ಶೋರೂಂ ಮತ್ತು ಕಂಪನಿಯನ್ನು ಹಲವು ಬಾರಿ ಸಂಪರ್ಕಿಸಿದರೂ ಯಾವುದೇ ಸ್ಪಂದನೆ ಸಿಗಲಿಲ್ಲ ಎಂದು ಗಿರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೋರೂಂ ಸಿಬ್ಬಂದಿಯಿಂದ ಸರಿಯಾದ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಶೋರೂಂ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಶೋರೂಂಗೆ ಬೀಗ ಹಾಕಿದ್ದಾರೆ. ಅಲ್ಲದೆ, ಹಿಟಾಚಿ ಯಂತ್ರವನ್ನೇ ಶೋರೂಂ ಪ್ರವೇಶ ದ್ವಾರಕ್ಕೆ ಅಡ್ಡಲಾಗಿ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರ.
ಮೂರು ದಿನಗಳಿಂದ ಶೋರೂಂ ಎದುರು ಶಾಮಿಯಾನ ಹಾಕಿ ಧರಣಿ ನಡೆಸುತ್ತಿರುವ ಗಿರೀಶ್, “ಯಂತ್ರ ಸರಿಪಡಿಸಬೇಕು, ಇಲ್ಲವೇ ನನ್ನ ಹಣ ವಾಪಸ್ ಕೊಡಬೇಕು. ಸಾಲ ಮಾಡಿ ಯಂತ್ರ ಖರೀದಿಸಿದ್ದೇನೆ. ಕಂಪನಿ ಹೇಳುವುದೊಂದು, ಮಾಡುವುದೊಂದು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
A customer in Tumakuru staged a protest after a ₹52 lakh Hitachi 140 machine developed major technical issues within five months of purchase. Alleging poor response from the company despite warranty coverage, the buyer locked the showroom and parked the faulty machine at its entrance, demanding repair or refund.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 04:36 pm
HK News Staffer
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm