ಬ್ರೇಕಿಂಗ್ ನ್ಯೂಸ್
10-02-26 02:15 pm HK News Desk ದೇಶ - ವಿದೇಶ
ಕಾಸರಗೋಡು, ಫೆ.11 : ತುಳು ಭಾಷೆ, ಗ್ರಾಮೀಣ ಆಹಾರ, ಸಂಸ್ಕೃತಿ ವಿಚಾರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುತ್ತ ಸ್ಟಾರ್ ಆಗಿದ್ದ ಅಡೂರು ಮೂಲದ ಯುವತಿ ರೇಶ್ಮಾ ಕಾಸರಗೋಡು ಬಳಿಯ ಕೂಡ್ಲು ಎಂಬಲ್ಲಿನ ತನ್ನ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಅಭಿಮಾನಿಗಳಿಗೆ ಶಾಕ್ ಸುದ್ದಿಯಾಗಿದೆ.
ರೇಷ್ಮಾ ಅವರ ಇನ್ ಸ್ಟಾ ಪೇಜ್ ನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ ಗಳಿದ್ದರು. 28 ವರ್ಷದ ರೇಷ್ಮಾ ಚಿನ್ನು ಪಾಪು ಎಂಬ ಹೆಸರಿನಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಳು. ಕಾಸರಗೋಡು- ಸುಳ್ಯ ಗಡಿಭಾಗದ ಅಡೂರು ಮೂಲದವಳಾಗಿದ್ದ ರೇಷ್ಮಾ ಪ್ರೀತಿಸಿ ಮದುವೆಯಾಗಿದ್ದಳು. ಆದರೆ ನಾಲ್ಕು ತಿಂಗಳ ಹಿಂದೆ ಗಂಡನೊಂದಿಗೆ ಮನಸ್ತಾಪದಿಂದ ಡೈವರ್ಸ್ ಆಗಿ ಪ್ರತ್ಯೇಕ ವಾಸವಿದ್ದಳು. ಸೋಮವಾರ ಮಧ್ಯಾಹ್ನ ನೆರೆಯವರು ರೇಷ್ಮಾ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡಿರುವುದನ್ನು ಗಮನಿಸಿ ಪೊಲೀಸರಿಗೆ ತಿಳಿಸಿದ್ದರು.
ಚಿನ್ನು ಪಾಪು ಹೆಸರಿನಲ್ಲಿ ತುಳು ಮತ್ತು ಮಲಯಾಳದಲ್ಲಿ ಮುಗ್ಧ ಮಾತುಗಳನ್ನಾಡುತ್ತಿದ್ದುದರಿಂದ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಪಡೆದಿದ್ದರು. ಗ್ರಾಮೀಣ ಶೈಲಿಯ ಜೀವನ, ಆಹಾರ ಪದ್ಧತಿ, ಪ್ರಚಾರ ಇಲ್ಲದ ಸ್ಥಳಗಳು, ತುಳುವರ ಸಂಸ್ಕೃತಿ ಬಗ್ಗೆ ವಿಡಿಯೋಗಳನ್ನು ಮಾಡುತ್ತಿದ್ದರು. ಇತ್ತೀಚೆಗೆ ಸೊಪ್ಪು ತರಕಾರಿಯಿಂದ ಮಾಡಿದ್ದ ಸಾರಿನ ಬಗ್ಗೆ ವಿಡಿಯೋ ಮಾಡಿದ್ದು ಸಾವಿರಾರು ಜನರನ್ನು ಆಕರ್ಷಿಸಿತ್ತು. ಇದರ ನಡುವೆ, ಕೆಲವು ತಿಂಗಳ ಹಿಂದೆ ತನ್ನ ಡೈವರ್ಸ್ ವಿಚಾರವನ್ನೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಳು. ನಾಲ್ಕು ವರ್ಷಗಳಿಂದ ನಾವು ಬೇರೆ ಇದ್ದೇವೆ, ನಾನೀಗ ಸಿಂಗಲ್ ಪೇರೆಂಟ್ ಎನ್ನುತ್ತ ಮಗುವಿನ ಜೊತೆಗಿನ ಫೋಟೋ ಷೇರ್ ಮಾಡಿದ್ದಳು.
ರೇಷ್ಮಾ ನಾಲ್ಕು ವರ್ಷದ ಮಗುವನ್ನು ಹೊಂದಿದ್ದು ಪೊಲೀಸರು ಅಸಹಜ ಸಾವೆಂದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮೊಬೈಲ್ ಕರೆಗಳು, ಪೋಸ್ಟ್ ಮಾರ್ಟಂ ರಿಪೋರ್ಟ್ ಆಧರಿಸಿ ಮುಂದಿನ ತನಿಖೆ ನಡೆಸಲಿದ್ದಾರೆ. ಘಟನೆ ಸಂದರ್ಭದಲ್ಲಿ ಆಕೆಯ ಮಗು ಅಡೂರಿನ ತಾಯಿ ಮನೆಯಲ್ಲಿತ್ತು ಎನ್ನಲಾಗಿದೆ.
Reshma (28), popularly known as ‘Chinnu Papu’ on Instagram, was found dead at her rented house in Kudlu near Kasaragod in an apparent suicide. The Adur native had over two lakh followers and was known for her engaging videos on Tulu language, rural food, and culture. She had recently divorced and was living separately.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:59 am
HK News Staffer
ಇಂಗ್ಲಿಷ್ ಕಡಲ್ಗಾಲುವೆ ಗೆದ್ದ ಮಂಗಳೂರಿನ ಕ್ಯಾನ್ಸರ್...
14-07-26 07:55 pm
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
14-07-26 09:13 pm
HK News Staffer
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm
ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾನ್ನರ ಪತ್ತೆ ; ಮಂಗಳೂರ...
14-07-26 02:43 pm
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm