ಸೋಮೇಶ್ವರ, ಮುಡಿಪು ಶ್ರೀಕೃಷ್ಣ ಧ್ಯಾನ ಮಂದಿರಕ್ಕೆ ರಾಜ್ಯಪಾಲ ಭೇಟಿ ; ಸಾಮಾನ್ಯರಲ್ಲಿ ಬೆರೆತ ಗೆಹ್ಲೋಟ್ 

15-03-23 08:45 pm       Mangalore Correspondent   ಕರಾವಳಿ

ಮಂಗಳೂರು ಪ್ರವಾಸದಲ್ಲಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಪುರಾಣ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥೇಶ್ವರ ಕ್ಷೇತ್ರ ಮತ್ತು ಮುಡಿಪು ಗೋವರ್ಧನಗಿರಿಯ ಶ್ರೀಕೃಷ್ಣ ಧ್ಯಾನ ಮಂದಿರಕ್ಕೆ  ಬುಧವಾರ ಭೇಟಿ ನೀಡಿ ಜನ ಸಾಮಾನ್ಯರೊಂದಿಗೆ ಬೆರೆತರು. 

ಉಳ್ಳಾಲ, ಮಾ.15 : ಮಂಗಳೂರು ಪ್ರವಾಸದಲ್ಲಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಪುರಾಣ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥೇಶ್ವರ ಕ್ಷೇತ್ರ ಮತ್ತು ಮುಡಿಪು ಗೋವರ್ಧನಗಿರಿಯ ಶ್ರೀಕೃಷ್ಣ ಧ್ಯಾನ ಮಂದಿರಕ್ಕೆ  ಬುಧವಾರ ಭೇಟಿ ನೀಡಿ ಜನ ಸಾಮಾನ್ಯರೊಂದಿಗೆ ಬೆರೆತರು. 

ಸೋಮನಾಥೇಶ್ವರ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ರವೀಂದ್ರನಾಥ ರೈ ರಾಜ್ಯಪಾಲರನ್ನ ಬರಮಾಡಿಕೊಂಡರು. ಸೋಮನಾಥನಿಗೆ ರಾಜ್ಯಪಾಲರು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಸೋಮೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ರಾಜ್ಯಪಾಲರು ಬಿಡುಗಡೆಗೊಳಿಸಿದರು.
ಇದಕ್ಕೂ ಮೊದಲು ರಾಜ್ಯಪಾಲರು ಮುಡಿಪುವಿನ ಗೋವರ್ಧನ ಗಿರಿಯ ಶ್ರೀಕೃಷ್ಣ ಧ್ಯಾನ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಅಲ್ಲಿನ ಪ್ರಾಚೀನ ವಸ್ತು ಸಂಗ್ರಹಾಲಯವನ್ನ ವೀಕ್ಷಿಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ಗೋವರ್ಧನ ಗಿರಿ ಶ್ರೀಕೃಷ್ಣ ಧ್ಯಾನ ಮಂದಿರದ ಪ್ರಮುಖರಾದ ಮದನ್ ಮೋಹನ್‌ ನಾಯ್ಕ್ ಅಡೇಕಳ, ಜಗದೀಶ್ ಆಳ್ವ ಕುವೆತ್ತ ಬೈಲು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರು, ಸೋಮೇಶ್ವರ  ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ಶ್ವೇತಾ ಪಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಭಗವತೀಶ್ ಅಡ್ಕ, ವಸಂತ್ ಉಳ್ಳಾಲ್ , ಯು.ಸದಾನಂದ ಬಂಗೇರ, ಪವಿತ್ರ ಕುಮಾರ್ ಗಟ್ಟಿ, ಹರಿಣಾಕ್ಷಿ ಕೊಲ್ಯ, ಮಾಧವಿ ಉಳ್ಳಾಲ್, ಪ್ರಧಾನ ಅರ್ಚಕ ಸೂರ್ಯನಾರಾಯಣ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.

Karnataka governor Thawar Chand Gehlot visits Someshwar temple in Mangalore.