ಬ್ರೇಕಿಂಗ್ ನ್ಯೂಸ್
13-03-23 01:44 pm Mangalore Correspondent ಕರಾವಳಿ
ಮಂಗಳೂರು, ಮಾ.13 : ಅಲ್ಲಾನಿಗೆ ಕಿವಿ ಕೇಳುವುದಿಲ್ಲವೇ, ಕಿವುಡನೇ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಪತ್ರಕರ್ತರು ತರಾಟೆ ತೆಗೆದುಕೊಂಡಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರಲ್ಲಿ ನಿಮಗೆ ಅಭಿವೃದ್ಧಿ ವಿಚಾರ ಇಲ್ಲ, ಜನರನ್ನು ಪ್ರಚೋದನೆ ಮಾಡ್ತೀರಿ, ಸೌಹಾರ್ದ ಕೆಡಿಸ್ತೀರಿ ಎಂದು ಪತ್ರಕರ್ತರು ಪ್ರಶ್ನೆ ಮಾಡಿದರು. ಪ್ರಶ್ನೆಗೆ ನೇರ ಉತ್ತರ ನೀಡದೆ ನುಣುಚಿಕೊಂಡ ಈಶ್ವರಪ್ಪ, ಸುಪ್ರೀಂ ಕೋರ್ಟ್ ಆದೇಶ ಇದೆ, ಅದು ಮುಂದೆ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎನ್ನುವ ನೆಲೆಯಲ್ಲಿ ಹೇಳಿದ್ದೇನೆ. ಪರೀಕ್ಷೆ ಸಮಯದಲ್ಲಿ ಮಕ್ಕಳಿಗೆ ಇದರಿಂದ ತೊಂದರೆಯಾಗಲ್ಲವೇ? ದಿನಾ ಬೆಳಗ್ಗೆ ರಾತ್ರಿ ಎನ್ನದೆ ಆಜಾನ್ ಕೂಗುತ್ತಾರೆ, ಇದೆಲ್ಲ ನಿಲ್ಲಬೇಕು. ಇವರಿಗೆ ಮೂರ್ನಾಲ್ಕು ಮೈಕ್ ಕಟ್ಟಿ ಬೊಬ್ಬೆ ಹೊಡೆಯಬೇಕೇ, ಹಾಗಾಗಿ ಕಿವುಡನೇ ಎಂದು ಕೇಳಿದ್ದೇನೆ. ನಂಗೆ ಭಾಷಣ ಮಾಡುತ್ತಿದ್ದಾಗ ಆಜಾನ್ ಕೇಳಿ ತಲೆನೋವು ಬಂತು, ಹಾಗೆ ಹೇಳಿದೆ ಎಂದು ಸಮರ್ಥನೆ ಮಾಡಿಕೊಂಡರು.
ನೀವು ಹಿಂದುಗಳ ಭಜನೆ, ಉತ್ಸವಕ್ಕೂ ಮೈಕ್ ಬೇಡ ಅಂತೀರಾ ಎಂದು ಕೇಳಿದ್ದಕ್ಕೆ, ಅದು ಯಾವಾಗಲೋ ಒಂದು ದಿನ ಆಗುವುದು, ಇಡೀ ದಿನ ಇರುವುದಿಲ್ಲ. ಭಾರತೀಯ ಸಂಸ್ಕೃತಿಯ ಬಗ್ಗೆ ನನ್ನ ವಿರೋಧ ಇಲ್ಲ ಎಂದರು. ಮುಸ್ಲಿಮರ ಓಟು ಬೇಡ ಎಂದಿದ್ದೀರಲ್ಲಾ ಎಂದಿದ್ದಕ್ಕೆ, ನಾವು ಎಲ್ಲ ಮುಸ್ಲಿಮರ ಓಟು ಬೇಡ ಅನ್ನಲ್ಲ, ರಾಷ್ಟ್ರೀಯವಾದಿ ಮುಸ್ಲಿಮರು ಮೋದಿ ಕೆಲಸ ನೋಡಿ ನಮಗೆ ಓಟು ಹಾಕ್ತಾರೆ. ನನ್ನ ಕ್ಷೇತ್ರದಲ್ಲಿ 60 ಮುಸ್ಲಿಮರ ವಾರ್ಡಿನಲ್ಲಿ ನನಗೆ ಓಟು ಬೀಳಲ್ಲ, ಆದರೆ ಅವರಿಗೆ ಸವಲತ್ತು ಕೊಡಿಸುತ್ತೇನೆ. ಮುಸ್ಲಿಂ ಮಹಿಳೆಯರು ಬುರ್ಖಾ ತೆಗೆದಿಟ್ಟು ಬಂದು ಅಣ್ಣ ಅಂತ ಕೇಳುತ್ತಾರೆ. ಮನವಿ ಹಿಡಿದು ಬಂದವರನ್ನು ಯಾರಿಗೂ ಬೇಡ ಎಂದಿಲ್ಲ. ಶಾಸಕನಾಗಿ ಎಲ್ಲರ ಪ್ರತಿನಿಧಿ ಆಗಿರುತ್ತೇನೆ, ಜಾತಿ, ಧರ್ಮಕ್ಕೆ ಪ್ರತಿನಿಧಿ ಅಲ್ಲ ಎಂದರು.
ನಿಮಗೆ ಈ ಬಾರಿ ಟಿಕೆಟ್ ಸಿಗುವ ಗ್ಯಾರಂಟಿ ಇದೆಯೇ ಎಂದು ಕೇಳಿದ್ದಕ್ಕೆ, ಯಾಕೆ ಹಾಗೆ ಕೇಳ್ತೀರಿ. ಯಾರಿಗಾದರೂ ಸಿಗುತ್ತದೆ. ಬಿಜೆಪಿಯಲ್ಲಿ 74 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ಇಲ್ಲವೆಂದು ಕಾನೂನು ಇಲ್ಲ. ಹೈಕಮಾಂಡ್ ನಾಲ್ಕೈದು ಬಾರಿ ಸರ್ವೆ ಮಾಡಿದೆ, ಯಾರು ಗೆಲ್ತಾರೋ ಅವರಿಗೆ ಟಿಕೆಟ್ ಕೊಡುತ್ತಾರೆ ಎಂದರು. ನಿಮ್ಮ ಮಗನಿಗೆ ಟಿಕೆಟ್ ಕೇಳ್ತೀರಾ ಎಂದು ಕೇಳಿದ್ದಕ್ಕೆ, ಒಂದು ಮನೆಯಲ್ಲಿ ಎರಡು ಟಿಕೆಟ್ ಕೊಡಲ್ಲ ಎನ್ನುವ ಮೂಲಕ ತನಗೆ ಸಿಗದಿದ್ದರೆ ಮಗನಿಗೆ ಅನ್ನುವ ಸುಳಿವು ನೀಡಿದರು. 74 ವರ್ಷ ಮೀರಿದವರಿಗೆ ಟಿಕೆಟ್ ಇಲ್ಲ ಎಂತಾರಲ್ಲಾ ಎಂದು ಕೇಳಿದ್ದಕ್ಕೆ, 77 ವರ್ಷದ ಹೊರಟ್ಟಿಗೆ ಕೊಟ್ಟಿದ್ದಾರೆ. ಅವರನ್ನು ಸಭಾಪತಿ ಮಾಡಿದ್ದಾರೆ. ಅಂಥ ನಿಯಮ, ಕಾನೂನು ಬಿಜೆಪಿಯಲ್ಲಿ ಇಲ್ಲ. ಬಿಜೆಪಿ ನಾಯಕರಿಗೆ ವಯಸ್ಸಾಗಲ್ಲ. ಸಾಯೋ ವರೆಗೂ ರಾಜಕಾರಣ ಮಾಡಲು ಹಿರಿಯರು ಹೇಳಿದ್ದಾರೆ ಎಂದರು.
Without Mics and speakers will #Azaan not be heard questions BJP leader #ksEshwarappa in #Mangalore at #VijaySankalpRathYatra. Is your God deaf that your prayers can't be heard without #azan he questioned. #bjp #bjpnews #BreakingNews pic.twitter.com/YZMSUaPP7c
— Headline Karnataka (@hknewsonline) March 12, 2023
Controversial statement on Azan and Allah by Eshwarappa, Journalists question about destroying peace in Mangalore for which he justified stating he got severe headache listening to Azan during the speech.This is my view on banning loudspeakers. This isn't a competition between Muslims calling for prayers through loudspeakers and Hindus chanting Hanuman Chalisa. And because of the Azaan, it is an issue for students, patients and the elderly," he said.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm