ಬ್ರೇಕಿಂಗ್ ನ್ಯೂಸ್
10-02-23 03:23 pm Media Release ಕರಾವಳಿ
ಮಂಗಳೂರು, ಫೆ.9: ಸಹಕಾರಿ ವ್ಯವಸ್ಥೆಯಿಂದಲೇ ಆರಂಭಗೊಂಡು ದೇಶಾದ್ಯಂತ ಹರಡಿಕೊಂಡು ಬೆಳೆದು ನಿಂತ ಸಂಸ್ಥೆ ಕ್ಯಾಂಪ್ಕೋ. 1976ರಲ್ಲಿ ಸ್ಥಾಪನೆಗೊಂಡ ಸಂಸ್ಥೆಗೆ ಈಗ ಸುವರ್ಣ ಸಂಭ್ರಮ. ತನ್ನ 50ನೇ ವರ್ಷದ ಆಚರಣೆಯನ್ನು ಫೆ.11ರಂದು ಹಮ್ಮಿಕೊಂಡಿದ್ದು ದೇಶದ ಗೃಹ ಸಚಿವ ಅಮಿತ್ ಷಾ ಉದ್ಘಾಟನೆಗೆ ಆಗಮಿಸುತ್ತಿದ್ದಾರೆ.
3576 ಬೆಳೆಗಾರ ಸದಸ್ಯರೊಂದಿಗೆ ಆರಂಭಿಸಿದ್ದ ಸಂಸ್ಥೆಯಲ್ಲಿ ಈಗ 1.38 ಲಕ್ಷ ಸದಸ್ಯರಿದ್ದಾರೆ. ಎಪ್ಪತ್ತರ ದಶಕದಲ್ಲಿ ಅಡಿಕೆ ಮಾರುಕಟ್ಟೆಯಲ್ಲಾದ ಏರಿಳಿತದಿಂದ ರೈತರನ್ನು ಪಾರುಮಾಡಲು ಮತ್ತು ಸ್ಥಿರವಾದ ಮಾರುಕಟ್ಟೆಯನ್ನು ನೀಡುವ ದೃಷ್ಟಿಯಿಂದ ಕ್ಯಾಂಪ್ಕೋ ಸಂಸ್ಥೆಯನ್ನು ಆರಂಭಿಸಲಾಗಿತ್ತು. ವಾರಣಾಶಿ ಸುಬ್ರಾಯ ಭಟ್ಟರ ದೂರದರ್ಶಿತ್ವದ ಫಲ ಕ್ಯಾಂಪ್ಕೋ ಸಂಸ್ಥೆ. ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳ ಸಂಯೋಜನೆಯೊಂದಿಗೆ ಸಂಸ್ಥೆಯನ್ನು ಆರಂಭಿಸಿದ್ದು, ಕರ್ನಾಟಕದಲ್ಲಿ ಸಹಕಾರಿ ವ್ಯವಸ್ಥೆಯಡಿ ರಿಜಿಸ್ಟರ್ ಆಗಿರುತ್ತದೆ. ಕಳೆದ 20 ವರ್ಷಗಳಲ್ಲಿ ಅಡಿಕೆಯ ಜೊತೆಗೆ ಕೊಕ್ಕೋ, ಕರಿಮೆಣಸು, ರಬ್ಬರ್ ಬೆಳೆಗಳನ್ನೂ ನೇರವಾಗಿ ಮಾರುಕಟ್ಟೆ ನೀಡುತ್ತಿದ್ದು, ಕೊಕ್ಕೋ ಚಾಕಲೇಟ್ ತಯಾರಿಯಿಂದ ಮನೆಮಾತಾಗಿದೆ.

1986ರ ವೇಳೆಗೆ ಕೊಕ್ಕೋ ಧಾರಣೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸಿತಗೊಂಡಾಗ ಆರಂಭಗೊಂಡಿದ್ದೇ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ. ಕೊಕ್ಕೋ ಬೆಳೆಯನ್ನು ನೇರವಾಗಿ ಖರೀದಿಸಿ, ಅದರಿಂದ ಮರು ಉತ್ಪಾದನೆಯನ್ನು ಮಾಡುವ ಕೆಲಸವನ್ನು ಆರಂಭಿಸಿತ್ತು. ಆಮೂಲಕ ಆಗ್ನೇಯ ಏಷ್ಯಾದಲ್ಲೇ ಅತಿದೊಡ್ಡ ಚಾಕಲೇಟ್ ಫ್ಯಾಕ್ಟರಿಯನ್ನು ಕ್ಯಾಂಪ್ಕೋದಿಂದ ಆರಂಭಿಸುವಂತಾಗಿತ್ತು. ಸ್ವಯಂಚಾಲಿತ ಉತ್ಪಾದನಾ ವ್ಯವಸ್ಥೆಯುಳ್ಳ ಫ್ಯಾಕ್ಟರಿಯನ್ನು ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಉದ್ಘಾಟಿಸಿದ್ದರು. ಈಗ ವರ್ಷಕ್ಕೆ ಕ್ಯಾಂಪ್ಕೋ ಚಾಕಲೇಟ್ 23 ಸಾವಿರ ಮೆಟ್ರಿಕ್ ಟನ್ ಉತ್ಪಾದನೆ ಮಾಡುತ್ತಿದ್ದು, ದೇಶದಲ್ಲೇ ಅತಿದೊಡ್ಡ ಕಾರ್ಖಾನೆಯೆಂದು ಹೆಸರು ಮಾಡಿದೆ.
ಸದ್ಯಕ್ಕೆ ಕೆ.ಕಿಶೋರ್ ಕುಮಾರ್ ಕೊಡ್ಗಿ ಕ್ಯಾಂಪ್ಕೋ ಅಧ್ಯಕ್ಷರಾಗಿದ್ದು, ಎಚ್.ಎಂ.ಕೃಷ್ಣಕುಮಾರ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ದೇಶದಲ್ಲಿ 160ಕ್ಕೂ ಹೆಚ್ಚು ಶಾಖೆಗಳು, ಎರಡು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು ವಾರ್ಷಿಕ 2778 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದೆ. ಬದಲಾಗುತ್ತಿರುವ ಅಡಿಕೆ ಮಾರುಕಟ್ಟೆಯ ಸ್ಥಿತಿಗತಿ ಮತ್ತು ವೈಪರೀತ್ಯಗಳನ್ನು ಸಮರ್ಥವಾಗಿ ಎದುರಿಸಿ ಕ್ಯಾಂಪ್ಕೋ ಸಂಸ್ಥೆ ಬೆಳೆಗಾರ ಹಿತ ಕಾಯುವಲ್ಲಿ ಗಣನೀಯ ಕೊಡುಗೆ ನೀಡುತ್ತಿದೆ.
The CAMPCO Ltd, is a prestigious multi-state cooperative established in the year 1973. It is a cooperative of the people, by the people and for the people having widespread procuring and marketing network all over India. It deals in arecanut, cocoa, rubber and pepper and also manufactures cocoa based chocolates and other semi-finished cocoa products.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
15-11-25 11:12 pm
HK News Desk
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
ಶ್ರೀನಗರ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ ; 6 ಮಂದಿ...
15-11-25 12:06 pm
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
15-11-25 10:47 pm
Mangalore Correspondent
ಬೀದಿ ನಾಯಿಗಳಿಗೆ ವ್ಯಕ್ತಿ ಬಲಿ ; ಕಡೆಗೂ ಎಚ್ಚತ್ತುಕೊ...
15-11-25 07:42 pm
Panambur Accident, Mangalore, Three dead: ಪಣಂ...
15-11-25 02:47 pm
ಬಿಹಾರದಲ್ಲಿ ಚುನಾವಣೆ ಮುನ್ನ ಹತ್ತು ಸಾವಿರ ಕೊಟ್ಟು ಮ...
15-11-25 01:51 pm
ಬಿ.ಸಿ. ರೋಡ್ ಬಳಿ ಭೀಕರ ಅಪಘಾತ ; ಉಡುಪಿ ಕೃಷ್ಣ ಮಠಕ್...
15-11-25 12:12 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm