ಬ್ರೇಕಿಂಗ್ ನ್ಯೂಸ್
30-01-23 10:36 am Mangalore Correspondent ಕರಾವಳಿ
ಉಳ್ಳಾಲ, ಜ.30: ಡಿವೈಡರ್ ಏರಿ ವಿದ್ಯುತ್ ಕಂಬಕ್ಕೆ ಬಡಿದ ಕಾರೊಂದು ನಜ್ಜು ಗುಜ್ಜಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೋರ್ವ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ರಾ.ಹೆ. 66ರ ಕೊಲ್ಯ ಬಳಿಯ ಅಡ್ಕದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಮಂಜೇಶ್ವರ ಬಳಿಯ ಉದ್ಯಾವರದ ಹತ್ತನೇ ಮೈಲು ನಿವಾಸಿ ಅಬ್ದುಲ್ ರಿಫಾಯಿ(24) ಮೃತಪಟ್ಟವರು. ರಿಫಾಯಿಯ ಚಿಕ್ಕಪ್ಪನ ಮಗ ಉಪ್ಪಳ, ಹಿದಾಯತ್ ನಗರ ನಿವಾಸಿ ಬಾಷರ್ ಅಹಮ್ಮದ್(22) ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾರೆ. ಕೇರಳದ ಕಣ್ಣೂರು ನಿವಾಸಿ ಫಾತಿಮಾ ಹಾಗೂ ರೇವತಿ ಎಂಬವರಿಗೆ ಗಾಯಗಳಾಗಿವೆ. ನಾಲ್ವರಿದ್ದ ಕಾರು ಮಂಗಳೂರಿನಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ವೇಳೆ ಕೊಲ್ಯ- ಅಡ್ಕ ಬಳಿ ರಸ್ತೆ ವಿಭಜಕವನ್ನು ಏರಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಸಂದರ್ಭ ಕಾರು ಚಲಾಯಿಸುತ್ತಿದ್ದ ರಿಫಾಯಿ ಅದರೊಳಕ್ಕೆ ಸಿಲುಕಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ಅಬ್ದುಲ್ ರಿಫಾಯಿ ಅವಿವಾಹಿತರು. ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗಿಯಾಗಿದ್ದು ಒಂದು ದಿನದ ಹಿಂದಷ್ಟೇ ಊರಿಗೆ ಮರಳಿದ್ದರು. ಬಾಷರ್ ಅಹಮ್ಮದ್, ಫಾತಿಮಾ ಮತ್ತು ರೇವತಿ ಮೂವರು ಮಂಗಳೂರಿನ ಕಾಲೇಜೊಂದರಲ್ಲಿ ಬಿಸಿಎ ವಿದ್ಯಾರ್ಥಿಗಳಾಗಿದ್ದರಂತೆ. ಗಂಭೀರ ಗಾಯಗೊಂಡ ಬಾಷರ್ ಅಹಮ್ಮದ್ ಗೆ ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೇವತಿ ಮತ್ತು ಫಾತಿಮ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳೀಯರಾದ ಪ್ರಶಾಂತ್ ಗಟ್ಟಿ ಮತ್ತು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತ ನಡೆದ ಸ್ಥಳಕ್ಕೆ ಸಂಚಾರಿ ಪೊಲೀಸರು ತಡವಾಗಿ ಆಗಮಿಸಿದ್ದರು ಎಂದು ಆರೋಪಿಸಿ ಸಾರ್ವಜನಿಕರು ಪೊಲೀಸರನ್ನ ಕೆಲ ಕಾಲ ತರಾಟೆಗೆ ತೆಗೆದುಕೊಂಡಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
In a horrific car accident that occured in NH 66 in Kolya on Sunday, January 27, a man was killed, another seriously injured while two young women escaped with minor injuries. The accident occured near Kolya-Adka.It is said that the car rammed into a road divider on the national highway. The deceased is identified as Abdul Rifai (24), son of Sayyed K Abdul, a resident of Kunjathur, Udyavar. Bashara Ahmed (22), a resident of Kasargod Uppala's Hidayat Nagar, was seriously injured.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm