ಬ್ರೇಕಿಂಗ್ ನ್ಯೂಸ್
27-01-23 09:53 pm Mangalore Correspondent ಕರಾವಳಿ
ಬಂಟ್ವಾಳ, ಜ.27 : ಕರೆಂಟ್ ಕೇಳಿದ್ದಕ್ಕೆ ಜೈಲಿಗೆ ಹಾಕಿದವರು ಈಗ ಕರೆಂಟ್ ಫ್ರೀ ಕೊಡ್ತಾರಂತೆ ಎಂದು ಬಿಜೆಪಿ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ. ಶಾಸಕ ರಾಜೇಶ್ ನಾಯ್ಕ್ ಅವರ ಗ್ರಾಮವಿಕಾಸ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಸಿ.ಟಿ.ರವಿ ಮಾತನಾಡಿದರು.
ಈಗ 200 ಯುನಿಟ್ ಕರೆಂಟ್ ಫ್ರೀ ಕೊಡ್ತಾರಂತೆ. ಬೆಳ್ಳಾರೆಯ ಸಾಯಿ ಗಿರಿಧರ್ ಕರೆಂಟ್ ಇಲ್ಲ ಅಂತ ಡಿಕೆಶಿ ಗೆ ಕರೆ ಮಾಡಿದ್ದರು. ಎಂಥ ಮಾರ್ರೆ ಸಾವು, ಕರೆಂಟ್ ಇಲ್ಲ ಅಂತ ಗಿರಿಧರ್ ರೈ ಹೇಳಿದ್ದರು. ಆದರೆ ತನ್ನ ಸಾವಿನ ಬಗ್ಗೆ ಮಾತನಾಡಿದ ಅಂತ ಡಿಕೆಶಿ, ಗಿರಿಧರ್ ರೈಯನ್ನ ಪೊಲೀಸ್ ಮೂಲಕ ಅರೆಸ್ಟ್ ಮಾಡಿಸಿದ್ದರು. ಇಂಥವರು ಇನ್ನೂರು ಯುನಿಟ್ ಕರೆಂಟ್ ಫ್ರೀ ಕೊಡ್ತಾರಂತೆ ಎಂದು ರವಿ ವ್ಯಂಗ್ಯವಾಡಿದ್ದಾರೆ.

ಇತ್ತೀಚೆಗೆ ಇಲ್ಲಿಗೆ ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆ ಬಂದಿತ್ತು. ಪ್ರಜೆಗಳ ಧ್ವನಿ ಕೇಳಿದ್ರೆ ಮಕ್ಕಳ ಅನ್ನ ಕಿತ್ತವರು ಅನ್ನೋ ಧ್ವನಿ ಕೇಳ್ತಾ ಇತ್ತು. ಕಲ್ಲಡ್ಕದ ಮಕ್ಕಳ ಅನ್ನ ಕಿತ್ತ ಪಾಪಿಗಳು ಅನ್ನುವ ಧ್ವನಿ ಕೇಳ್ತಾ ಇತ್ತು. ಇಲ್ಲಿನ ಕೊಲೆಗಳು ಮತ್ತು ಕೊಲೆ ಹಿಂದೆ ಇರೋರಿಗೆ ಬೆಂಬಲಕ್ಕೆ ನಿಂತ ಕೊಲೆಗಡುಕರು ಅನ್ನೋ ಧ್ವನಿ ಕೇಳ್ತಾ ಇತ್ತು. ಎದ್ದರೆ ಕೂರಲು ಆಗದ, ಕೂತರೆ ನಿಲ್ಲಲು ಆಗದ ಶಾಸಕ ನಮ್ಮವರಲ್ಲ. ಇವರ ಪ್ರಜಾಧ್ವನಿ ಯಾತ್ರೆ ಕೇವಲ ಬಿಜೆಪಿ ಬೈಯ್ಯುವ ಯಾತ್ರೆ.
ದೈವ ವಿರೋಧಿಗಳು, ಕುಂಕುಮ ಕಂಡ್ರೆ ಭಯ ಪಡೋರು ನೈಜ ಹಿಂದುಗಳಲ್ಲ. ಕೇಸರಿ ಕಂಡರೆ ಭಯ ಪಡೋರು ನೈಜ ಹಿಂದುಗಳಲ್ಲ. ನೈಜ ಹಿಂದುಗಳು ಪಂಜುರ್ಲಿ ದೈವ, ದೇವರ ಹತ್ರ ಹೋಗ್ತಾರೆ. ಆದರೆ ಈ ನಕಲಿ ಹಿಂದೂಗಳು ಅದರ ಬಳಿ ಯಾವತ್ತೂ ಹೋಗಲ್ಲ. ಜೈ ಶ್ರೀರಾಮ್ ಅನ್ನೋರು, ರಾಮ ಮಂದಿರದ ತುಡಿತ ಇದ್ದವರು ನೈಜ ಹಿಂದೂಗಳು. ರಾಮ ಮಂದಿರ ವಿರೋಧಿಸಿದವರು ನಕಲಿ ಹಿಂದೂಗಳು.
ಪ್ರಜಾಧ್ವನಿಯಲ್ಲಿ ನಿನ್ನೆ ವೇದಿಕೆ ಮೇಲೆ ಮಾತನಾಡಿದವರೆಲ್ಲಾ ನಕಲಿ ಹಿಂದುಗಳು. ಮಕ್ಕಳ ಮನಸ್ಸಲ್ಲೂ ಜಾತಿ ವಿಷ ಬೀಜ ಬಿತ್ತುವ ಕೆಲಸ ಕಾಂಗ್ರೆಸ್ ಮಾಡಿತ್ತು. ಮುಂಚೆ ಒಬ್ಬ ಇಲ್ಲಿ ವಿವಾದಿತ ರಾಜಕಾರಣಿ ಇದ್ದರು. ಆದ್ರೆ ನಮ್ಮ ರಾಜೇಶ್ ನಾಯ್ಕ್ ವಿವಾದ ಇಲ್ಲದ ರಾಜಕಾರಣಿ ಎಂದು ಟಾಂಗ್ ಇಟ್ಟರು.
Mangalore CT Ravi slams DK Shivakumar over giving free current to the state if congress comes to power.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
15-11-25 11:12 pm
HK News Desk
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
ಶ್ರೀನಗರ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ ; 6 ಮಂದಿ...
15-11-25 12:06 pm
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
16-11-25 04:40 pm
Mangalore Correspondent
ಧರ್ಮಸ್ಥಳ ಪ್ರಕರಣ ; ಬಟ್ಟೆ ಬಿಚ್ಚಿಸಿ ಬೂಟು ಕಾಲಿನಿಂ...
15-11-25 10:47 pm
ಬೀದಿ ನಾಯಿಗಳಿಗೆ ವ್ಯಕ್ತಿ ಬಲಿ ; ಕಡೆಗೂ ಎಚ್ಚತ್ತುಕೊ...
15-11-25 07:42 pm
Panambur Accident, Mangalore, Three dead: ಪಣಂ...
15-11-25 02:47 pm
ಬಿಹಾರದಲ್ಲಿ ಚುನಾವಣೆ ಮುನ್ನ ಹತ್ತು ಸಾವಿರ ಕೊಟ್ಟು ಮ...
15-11-25 01:51 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm