ಬ್ರೇಕಿಂಗ್ ನ್ಯೂಸ್
23-01-23 06:30 pm Mangalore Correspondent ಕರಾವಳಿ
ಮಂಗಳೂರು, ಜ.23 : ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆದ 6ನೇ ವರ್ಷದ ಮಂಗಳೂರು ಕಂಬಳ ಕೇವಲ ನಗರದ ಜನರನ್ನು ಮಾತ್ರ ಆಕರ್ಷಿಸಿದ್ದಲ್ಲ. ಮಂಗಳೂರಿಗೆ ಪ್ರವಾಸ ಬಂದಿದ್ದ ವಿದೇಶಿಗರನ್ನೂ ಆಕರ್ಷಿಸಿದೆ.
ಅಫ್ಘಾನಿಸ್ತಾನ, ಜರ್ಮನಿ, ಡೆನ್ಮಾರ್ಕ್ ದೇಶಗಳಿಂದ ಪ್ರವಾಸ ಬಂದಿದ್ದ ವಿದೇಶಿ ಪ್ರಜೆಗಳು ಕುತೂಹಲದಿಂದ ಕಂಬಳ ವೀಕ್ಷಿಸಿದ್ದಾರೆ. ಕಳೆದ ಬಾರಿ ಮಿಜಾರು ಶ್ರೀನಿವಾಸ ಗೌಡ ವೇಗದ ಓಟಗಾರನಾಗಿ ದಾಖಲೆ ಮಾಡಿ, ಉಸೇನ್ ಬೋಲ್ಟ್ ಗೆ ಹೋಲಿಸುವ ರೀತಿ ಸುದ್ದಿಯಾಗಿದ್ದು ವಿದೇಶಿ ಮಾಧ್ಯಮಗಳ ಸೆಳೆದಿತ್ತು. ಮಂಗಳೂರಿಗೆ ಬಂದಿದ್ದ ವಿದೇಶಿಯರಿಗೆ ಇಲ್ಲಿಯೇ ಕಂಬಳ ಆಗುತ್ತಿದೆ ಎನ್ನುವುದನ್ನು ತಿಳಿದು, ಒಮ್ಮೆ ನೋಡಿ ಬಿಡೋಣ ಎಂದು ಕುಳೂರಿಗೆ ಬಂದಿದ್ದರು. ಮಣ್ಣಿನ ಕ್ರೀಡೆ ಕಂಬಳವನ್ನು ನೋಡಿ ಖುಷಿ ಪಟ್ಟಿದ್ದಾರೆ.

ಡೆನ್ಮಾರ್ಕ್ ಪ್ರಜೆ ಹೆನ್ರಿ ಬಳಿ ಈ ಬಗ್ಗೆ ಕೇಳಿದಾಗ, ನಾವು ಬಿಸ್ನೆಸ್ ಟ್ರಿಪ್ ನಲ್ಲಿ ಮಂಗಳೂರು ಬಂದಿದ್ದೆವು. ಕಂಬಳವನ್ನು ನೇರವಾಗಿ ನೋಡಬೇಕೆಂಬ ಆಸೆಯಿತ್ತು. ಕಂಬಳ ಮತ್ತು ಶ್ರೀನಿವಾಸ್ ಗೌಡನ ಸಾಧನೆ ಬಗ್ಗೆ ತಿಳಿದಿದ್ದೆವು. ಲೈವ್ ನೋಡಿದ್ದು ಖುಷಿಯಾಗಿದೆ ಎಂದು ಹೇಳಿದ್ದಾರೆ. ಹೆನ್ರಿ ಜೊತೆಗೆ ಅವರ ಸ್ನೇಹಿತರಾದ ಥಾಮಸ್, ಕಾರ್ಸ್ಟನ್ ಪೀಟ್ ಮತ್ತು ಸುಸನ್ನಾ ಇದ್ದರು.
ಮೂಲತಃ ಅಫ್ಘಾನಿಸ್ತಾನದ ಪ್ರಜೆ, ಮಂಗಳೂರು ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಸಯ್ಯದ್ ಅಹ್ಮದ್ ತನ್ನ ಕುಟುಂಬವನ್ನೂ ಕರ್ಕೊಂಡು ಕಂಬಳ ನೋಡಲು ಬಂದಿದ್ದರು. ಇದು ವಿಶಿಷ್ಟ ಕ್ರೀಡೆಯಾಗಿದ್ದು, ಇಲ್ಲಿನ ಸಂಸ್ಕೃತಿ ಸೂಪರ್ ಇದೆ ಎಂದರು ಸಯ್ಯದ್ ಅಹ್ಮದ್.
ಈ ವಿದೇಶಿ ಪ್ರವಾಸಿಗರಿಗೆ ಶ್ರೀನಿವಾಸ ಗೌಡರ ಸಾಧನೆಯ ಬಗ್ಗೆ ಗೊತ್ತು. ಉಸೇನ್ ಬೋಲ್ಟ್ ರೀತಿಯ ಸಾಧನೆಯೆಂದು ವಿದೇಶಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರಿಂದ ಕುತೂಹಲ ಇತ್ತು. ಹೀಗಾಗಿ ಆತ ಎಲ್ಲಿದ್ದಾನೆಂದು ಕುತೂಹಲ ಹೊಂದಿದ್ದರು. 2020ರಲ್ಲಿ ಮೂಡುಬಿದಿರೆಯ ಮಿಜಾರ್ ಅಶ್ವತ್ಥಪುರ ಶ್ರೀನಿವಾಸ ಗೌಡ ಕಂಬಳದ ಕರೆಯನ್ನು ವೇಗವಾಗಿ ಓಡಿದ್ದು ದಾಖಲೆಯಾಗಿತ್ತು. 100 ಮೀ ದೂರವನ್ನು ಕೇವಲ 9.55 ಸೆಕೆಂಡ್ ಗಳಲ್ಲಿ ಕ್ರಮಿಸಿದ್ದು ಉಸೇನ್ ಬೋಲ್ಟ್ ದಾಖಲೆ ಮುರಿದಿದ್ದಾಗಿ ಸುದ್ದಿಯಾಗಿತ್ತು. ಆದರೆ ಸಹಜದ ಓಟದ ಸ್ಪರ್ಧೆಗೂ ಕಂಬಳದ ಓಟಕ್ಕೂ ವ್ಯತ್ಯಾಸ ಇದೆಯೆಂದು ಆನಂತರ ಸ್ಪಷ್ಟನೆ ನೀಡಲಾಗಿತ್ತು.
Mangalore Kambala amazes foreign spectators at Goldfinch city grounds. Coastal Karnataka’s traditional buffalo race ‘Kambala’ is gaining popularity across the globe as enthusiasts from Afghanistan, Germany and Denmark have travelled to Mangaluru to watch the race that is run in slushy paddy fields accompanied by buffaloes. On Sunday, they visited the famed Mangaluru Kambala, which is being held at Goldfinch City.
28-06-26 06:30 pm
HK News Staffer
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
29-06-26 12:41 pm
HK News Staffer
ಜಾತಿ ಹುಟ್ಟಿನಿಂದಲೇ ಬರಬೇಕು, ಇಸ್ಲಾಂಗೆ ಮತಾಂತರಗೊಂಡ...
28-06-26 04:03 pm
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
29-06-26 02:00 pm
HK News Staffer
Panambur Robbery, Mangalore: ಮುಂಬೈನಿಂದ ಬರುತ್ತ...
29-06-26 09:32 am
'ಸನಾತನಿ ಸಿಂಹ' ಹೆಸರಲ್ಲಿ ಜಾಲತಾಣದಲ್ಲಿ ಅಕ್ಷೇಪಾರ್ಹ...
28-06-26 09:38 pm
Derlakatte Accident, Mangalore: ದೇರಳಕಟ್ಟೆ ಬಳಿ...
27-06-26 08:01 pm
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm