ಬ್ರೇಕಿಂಗ್ ನ್ಯೂಸ್
11-01-23 04:02 pm Mangalore Correspondent ಕರಾವಳಿ
ಮಂಗಳೂರು, ಜ.11 : ಶಿವಮೊಗ್ಗದ ಬಾಂಬ್ ಟ್ರಯಲ್ ಮತ್ತು ಐಸಿಸ್ ನಂಟು ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ಮಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಮಂಗಳೂರು ಹೊರವಲಯದ ತೊಕ್ಕೊಟ್ಟಿನ ಬಬ್ಬುಕಟ್ಟೆಯ ಮಝೀನ್ ಅಬ್ದುಲ್ ರೆಹಮಾನ್ ಬಂಧಿತ.
ಇದೇ ವೇಳೆ, ದಾವಣಗೆರೆಯ ಹೊನ್ನಾಳಿಯಲ್ಲಿ ನದೀಮ್ ಅಹ್ಮದ್ ಎಂಬಾತನನ್ನೂ ಬಂಧಿಸಲಾಗಿದೆ. ಶಿವಮೊಗ್ಗ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮಾಜ್ ಮುನೀರ್ ಮತ್ತು ಸೈಯದ್ ಯಾಸಿನ್ ಎಂಬಿಬ್ಬರು ವಿಧ್ವಂಸಕ ಕೃತ್ಯ ಎಸಗುವುದಕ್ಕಾಗಿ ಮಝೀನ್ ಅಬ್ದುಲ್ ರಹ್ಮಾನ್ ಮತ್ತು ನದೀಂ ಅಹ್ಮದ್ ಎಂಬವರನ್ನು ಬ್ರೇನ್ ವಾಷ್ ಮಾಡಿದ್ದರು. ದೇಶದಲ್ಲಿ ಉಗ್ರವಾದ ಚಟುವಟಿಕೆ ನಡೆಸುವುದಕ್ಕಾಗಿ ಇವರಿಬ್ಬರನ್ನು ನೇಮಿಸಿಕೊಂಡಿದ್ದರು ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಭಾರತವನ್ನು ಇಸ್ಲಾಮಿಕ್ ಸ್ಟೇಟ್ ಮಾಡುವ ಉದ್ದೇಶದಿಂದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪ್ಲಾನ್ ಹಾಕಿದ್ದರು. ಇವರಿಗೆ ಸಿರಿಯಾ ಮೂಲದ ಐಸಿಸ್ ಉಗ್ರರು ಫಂಡಿಂಗ್ ಮಾಡುತ್ತಿದ್ದುದಲ್ಲದೆ, ಐಸಿಸ್ ನೆಟ್ವರ್ಕ್ ಸೇರಲು ಆಮಿಷ ಒಡ್ಡುತ್ತಿದ್ದರು. ವಾರದ ಹಿಂದಷ್ಟೇ ಮಂಗಳೂರಿನ ಕೊಣಾಜೆಯ ಪಿಎ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ರೆಶಾನ್ ತಾಜುದ್ದೀನ್ ಶೇಖ್ ಎಂಬಾತನನ್ನು ಬಂಧಿಸಲಾಗಿತ್ತು. ಉಡುಪಿ ಜಿಲ್ಲೆಯ ವಾರಂಬಳ್ಳಿ ನಿವಾಸಿ, ಕಾಂಗ್ರೆಸ್ ಮುಖಂಡ ತಾಜುದ್ದೀನ್ ಶೇಖ್ ಎಂಬವರ ಮಗನಾಗಿದ್ದ ರೇಶಾನ್, ಪ್ರಮುಖ ಆರೋಪಿ ಮಾಝ್ ಮುನೀರ್ ಜೊತೆಗೆ ನೇರ ಸಂಪರ್ಕದಲ್ಲಿದ್ದ.
ಸದ್ಯ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಬಗ್ಗೆ ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮಂಗಳೂರಿನ ಕುಕ್ಕರ್ ಬಾಂಬ್ ಪ್ರಕರಣವೂ ಅದರೊಂದಿಗೆ ನಂಟು ಹೊಂದಿದ್ದು ಇವರೆಲ್ಲ ಒಂದೇ ರೀತಿಯ ಉದ್ದೇಶ ಹೊಂದಿದ್ದರು.
Shivamogga trail blast case, another arrested by NIA at Babbukatte Thokottu in Mangalore. The arrested has been identified as Mazin Abdul Rehman. During the investigation it has been revealed that Mazin was appointed to increase more members into ISIS. The National Investigation Agency (NIA) team from Bengaluru raided an engineering college situated in the outskirts of the city on Thursday January 5 in connection to the cooker bomb blast case that occurred at Nagori in the city in November last year.Investigations revealed that accused Maaz Muneer had radicalised and recruited Mazin Abdul Rahman while accused Syed Yasin radicalized and recruited Nadeem K A for furthering the terror activities of Islamic State in India. The accused persons recced and attempted/committed acts of sabotage/arson, as part of the larger conspiracy, to further the activities of Islamic State. Four other accused persons have been arrested in the case earlier.
28-06-26 06:30 pm
HK News Staffer
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
28-06-26 04:03 pm
HK News Staffer
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
29-06-26 09:32 am
HK News Staffer
'ಸನಾತನಿ ಸಿಂಹ' ಹೆಸರಲ್ಲಿ ಜಾಲತಾಣದಲ್ಲಿ ಅಕ್ಷೇಪಾರ್ಹ...
28-06-26 09:38 pm
Derlakatte Accident, Mangalore: ದೇರಳಕಟ್ಟೆ ಬಳಿ...
27-06-26 08:01 pm
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm