ಬ್ರೇಕಿಂಗ್ ನ್ಯೂಸ್
03-01-23 10:23 pm Mangalore Correspondent ಕರಾವಳಿ
ಮಂಗಳೂರು, ಜ.3: ಕಟೀಲು ದೇವಸ್ಥಾನಕ್ಕೆ ವಾಹನದಲ್ಲಿ ಬರುವ ಭಕ್ತಾದಿಗಳಿಗೆ ಜನವರಿ 1ರಿಂದ ಪಾರ್ಕಿಂಗ್ ಶುಲ್ಕ ವಿಧಿಸಲಾಗಿದೆ. ಕಳೆದ ಬಾರಿ ಆಗಸ್ಟ್ 1ರಿಂದ ಪಾರ್ಕಿಂಗ್ ಶುಲ್ಕ ವಿಧಿಸಲು ಮುಂದಾಗಿದ್ದ ವೇಳೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದರಿಂದ ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿತ್ತು. ಇದೀಗ ದಿಢೀರ್ ಆಗಿ ಹೊಸ ವರ್ಷಕ್ಕೆ ಪಾರ್ಕಿಂಗ್ ಶುಲ್ಕದ ಬರೆ ಹಾಕಲಾಗಿದ್ದು ಕಟೀಲು ಭಾಗದ ಭಕ್ತರು ಮತ್ತೆ ವಿರೋಧ ವ್ಯಕ್ತಪಡಿಸಿದ್ದಾರೆ.
ದ್ವಿಚಕ್ರ ವಾಹನಗಳಿಗೆ 10 ರೂ., ತ್ರಿಚಕ್ರ ವಾಹನಗಳಿಗೆ 20 ರೂ., ಕಾರು ಇನ್ನಿತರ ನಾಲ್ಕು ಚಕ್ರದ ವಾಹನಗಳಿಗೆ 30 ರೂ. ನಿಗದಿ ಪಡಿಸಲಾಗಿದೆ. ಟ್ರಾವೆಲರ್ ಇನ್ನಿತರ ಮಿನಿ ಬಸ್ ಗಳಿಗೆ 50 ರೂ. ಪಾರ್ಕಿಂಗ್ ಶುಲ್ಕ ನಿಗದಿ ಪಡಿಸಲಾಗಿದೆ. ವರ್ಷದ ಹಿಂದೆ ಕಟೀಲು ದೇವಸ್ಥಾನದ ಬ್ರಹ್ಮಕಲಶದ ಸಂದರ್ಭದಲ್ಲಿ ದೇಗುಲದ ಮುಂದಿದ್ದ ಅಂಗಡಿ, ಕಟ್ಟಡಗಳನ್ನು ತೆರವುಗೊಳಿಸಿ, ಭಕ್ತರಿಂದ ದೇಣಿಗೆ ಸಂಗ್ರಹಿಸಿ ಆ ಜಾಗವನ್ನು ಖರೀದಿ ಮಾಡಲಾಗಿತ್ತು. ಅಲ್ಲೀಗ ವಿಶಾಲ ಪಾರ್ಕಿಂಗ್ ಏರಿಯಾ ಮಾಡಿದ್ದು, ಈವರೆಗೂ ಭಕ್ತರು ಉಚಿತವಾಗಿ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದರು.
ಆದರೆ ಕಟೀಲು ದೇವಸ್ಥಾನದ ಆಡಳಿತ ಮಂಡಳಿ ಮುಜರಾಯಿ ಇಲಾಖೆಯ ಆಡಳಿತಾಧಿಕಾರಿಗಳ ಆದೇಶ ಎಂಬ ನೆಪದಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಲು ಮುಂದಾಗಿತ್ತು. ಕಳೆದ ಆಗಸ್ಟ್ ತಿಂಗಳಲ್ಲಿ ಪ್ರವೀಣ್ ನೆಟ್ಟಾರು ಕೊಲೆಯಿಂದಾಗಿ ಕರಾವಳಿಯಲ್ಲಿ ಎದ್ದಿದ್ದ ಆಕ್ರೋಶದ ನಡುವೆ ಪಾರ್ಕಿಂಗ್ ಶುಲ್ಕ ವಿಧಿಸುವ ಪ್ರಸ್ತಾಪವೂ ಕೇಳಿಬಂದಿದ್ದರಿಂದ ಸಾರ್ವಜನಿಕರ ವಿರೋಧ ಕಟ್ಟಿಕೊಳ್ಳುವುದು ಬೇಡವೆಂದು ಸಂಸದ ನಳಿನ್ ಕುಮಾರ್ ತಾತ್ಕಾಲಿಕ ಮುಂದೂಡಿಕೆಗೆ ಸೂಚಿಸಿದ್ದರು. ಅದರಂತೆ, ಪಾರ್ಕಿಂಗ್ ಶುಲ್ಕ ವಿಧಿಸುವ ಪ್ರಸ್ತಾಪ ಮುಂದಕ್ಕೆ ಹೋಗಿತ್ತು. ಇದೀಗ ಸದ್ದಿಲ್ಲದೆ, ಪಾರ್ಕಿಂಗ್ ಶುಲ್ಕವನ್ನು ಭಕ್ತರ ಮೇಲೆ ಹೇರಲಾಗಿದೆ. ಮಾಹಿತಿ ಪ್ರಕಾರ, ಮಂಗಳೂರಿನ ಖಾಸಗಿ ವ್ಯಕ್ತಿಯೊಬ್ಬರು 15 ಲಕ್ಷ ರೂಪಾಯಿ ಡಿಪಾಸಿಟ್ ಇಟ್ಟು ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಟೆಂಡರ್ ಪಡೆದಿದ್ದಾರೆ ಎನ್ನಲಾಗುತ್ತಿದೆ. ತಿಂಗಳಿಗೆ ಎರಡೂವರೆ ಲಕ್ಷ ದೇವಸ್ಥಾನದ ಆಡಳಿತ ಮಂಡಳಿಗೆ ವಂತಿಗೆ ನೀಡುವ ಬಗ್ಗೆಯೂ ಒಪ್ಪಂದ ಆಗಿದೆಯಂತೆ.
ಕಟೀಲು ಭಾಗದ ಭಕ್ತರು ಮಾತ್ರ ಯಾವುದೇ ಕಾರಣಕ್ಕೂ ಪಾರ್ಕಿಂಗ್ ಶುಲ್ಕ ಹೇರುವುದನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಬ್ರಹ್ಮಕಲಶದ ಸಂದರ್ಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ಒತ್ತಾಯಪಡಿಸಿ, ಅಲ್ಲಿನ ಜಾಗವನ್ನು ಪಾರ್ಕಿಂಗ್ ಮಾಡಲಾಗಿತ್ತು. ಇದೀಗ ದೇವಸ್ಥಾನದ ಮುಂದಿರುವ ಜಾಗ ಮತ್ತು ಬಸ್ ನಿಲ್ದಾಣದ ಆಸುಪಾಸಿನಲ್ಲಿಯೂ ದುಬಾರಿ ಪಾರ್ಕಿಂಗ್ ಶುಲ್ಕ ವಿಧಿಸಲಾಗಿದೆ. ದೇವಸ್ಥಾನಕ್ಕೇನು ಹಣದ ಕೊರತೆ ಎದುರಾಗಿಲ್ಲ. ಬೇರೆ ಬೇರೆ ಮೂಲಗಳಿಂದ ಸಾಕಷ್ಟು ಆದಾಯ ಬರುತ್ತಿದೆ. ಇಂಥ ಸಂದರ್ಭದಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಿ ಭಕ್ತರನ್ನು ಲೂಟಿ ಮಾಡುವ ಕೆಲಸ ಯಾಕೆಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಪಾರ್ಕಿಂಗ್ ವಿಧಿಸುವುದನ್ನು ರದ್ದುಪಡಿಸಲೇಬೇಕೆಂದು ಸ್ಥಳೀಯರು ಪ್ರತಿಭಟನೆಗೂ ತಯಾರಿ ನಡೆಸಿದ್ದಾರೆ. ಇದೇ ವೇಳೆ, ಜಾಲತಾಣದಲ್ಲಿ ಸುರತ್ಕಲ್ ಟೋಲ್ ಗೇಟ್ ಬಂದ್ ಮಾಡಿದ್ದಕ್ಕೆ ಕಟೀಲಿನಲ್ಲಿ ಶುಲ್ಕದ ಬರೆ ಹಾಕಿದ್ದಾರೆಂದು ಪಾರ್ಕಿಂಗ್ ಹೊರೆಯನ್ನು ಜನಪ್ರತಿನಿಧಿಗಳ ತಲೆಗೆ ಕಟ್ಟಿದ್ದಾರೆ.
Kateel Temple in Mangalore implements parking fees for devotees, people have mocked on social media stating if Surathkal toll fee has shifted to Kateel.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 10:27 pm
Mangalore Correspondent
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
16-05-25 11:06 pm
Mangalore Correspondent
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm