ಬ್ರೇಕಿಂಗ್ ನ್ಯೂಸ್
31-12-22 01:03 pm Udupi Correspondent ಕರಾವಳಿ
ಉಡುಪಿ, ಡಿ.31 : ಇಲ್ಲಿನ ತೆಂಕನಿಡಿಯೂರು ಬೆಳ್ಕಳೆ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೇವಸ್ಥಾನ, ಮೂಕಾಂಬಿಕಾ ಅಮ್ಮನವರ ಸನ್ನಿಧಿಯಲ್ಲಿ ಕಾಣಿಕೆ ಡಬ್ಬಿ ಕಳವುಗೈದಿದ್ದ ಕಳ್ಳ ಮೂರು ತಿಂಗಳ ನಂತರ ಸಿಕ್ಕಿಬಿದ್ದಿದ್ದಾನೆ.
ಕಳ್ಳತನದ ಬಗ್ಗೆ ಆಡಳಿತ ಮಂಡಳಿ ಕಳವಾಗಿದ್ದ ಸೆ.6ರ ದಿನವೇ ಮಲ್ಪೆ ಪೊಲೀಸ್ ಠಾಣೆಗೆ ದೂರನ್ನು ನೀಡಿತ್ತು. ಆಡಳಿತ ಮಂಡಳಿ, ಹತ್ತು ಸಮಸ್ತರು ಮಾರನೇ ದಿನ ಮತ್ತು ನವರಾತ್ರಿ ಉತ್ಸವದ ಸಂದರ್ಭ ಬಬ್ಬು ಸ್ವಾಮಿಯ ದರ್ಶನ ಸೇವೆಯನ್ನು ಮಾಡಿಸಿ ಕಳವಿನ ಬಗ್ಗೆ ದೂರು ನೀಡಿದ್ದರು. ದೈವವು ನೇಮೋತ್ಸವದ ಒಳಗಡೆ ಕಾಣಿಕೆ ಡಬ್ಬಿ ಕದ್ದ ವ್ಯಕ್ತಿಯನ್ನು ದೈವಸ್ಥಾನದ ಎದುರಲ್ಲಿ ನಿಲ್ಲಿಸುವುದಾಗಿ ಅಭಯ ನೀಡಿತ್ತು.
ಡಿ. 28ರಂದು ಮಲ್ಪೆ ಠಾಣಾಧಿಕಾರಿ ಗುರುನಾಥ್ ಬಿ. ಹಾದಿಮನಿ, ಪಿಎಸ್ಐ ಸುಷ್ಮಾ ಹಾಗೂ ರವಿ ಜಾಧವ್ ಆರೋಪಿ ಹರ್ಷಿತ್ ಎಂಬವನನ್ನು ಬೈಂದೂರಿನಲ್ಲಿ ಬಂಧಿಸಿ ದೈವಸ್ಥಾನಕ್ಕೆ ಕರೆತಂದಿದ್ದಾರೆ. ಇದೇ ವ್ಯಕ್ತಿ ಜಿಲ್ಲೆಯಲ್ಲಿ ಹಲವಾರು ಕಡೆ ದೇವಸ್ಥಾನಗಳಲ್ಲಿ ಕಳ್ಳತನ ಎಸಗಿದ್ದಾನೆಂದು ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದಾನೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹಿರಿಯಡ್ಕ ಜೈಲಿನಲ್ಲಿರಿಸಲಾಗಿದೆ. ದೈವದ ಅಭಯದ ನುಡಿ ಸತ್ಯವಾಗಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
Udupi Thief who stole offering boxes from Babbuswami temple caught after three months.
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
20-09-26 08:59 pm
HK News Staffer
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm