ಬ್ರೇಕಿಂಗ್ ನ್ಯೂಸ್
11-12-22 10:31 pm Mangalore Correspondent ಕರಾವಳಿ
ಮಂಗಳೂರು, ಡಿ.11: ಯುವ ವಕೀಲ ಕುಲದೀಪ್ ಶೆಟ್ಟಿ ಮೇಲೆ ಹಲ್ಲೆಗೈದು ಪೊಲೀಸ್ ದೌರ್ಜನ್ಯ ಎಸಗಿದ ಆರೋಪದಲ್ಲಿ ಪುಂಜಾಲಕಟ್ಟೆ ಎಸ್ಐ ಸುತೇಶ್ ಕುಮಾರ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಪುಂಜಾಲಕಟ್ಟೆ ಠಾಣೆಯಲ್ಲಿ ದಾಖಲಾಗಿದ್ದ ಕಳವು ದೂರಿಗೆ ಸಂಬಂಧಿಸಿ ಪೊಲೀಸರು ಡಿ.3ರ ರಾತ್ರಿ ಕುಲದೀಪ್ ಶೆಟ್ಟಿ ಮನೆಗೆ ಬಂದು ದೌರ್ಜನ್ಯ ಎಸಗಿದ್ದರು. ಮನೆಯವರು ಬೇಡಿಕೊಂಡರೂ ಲೆಕ್ಕಿಸದೆ, ಕುಲದೀಪ್ ಅವರನ್ನು ಶರ್ಟ್ ಬಿಚ್ಚಿಸಿ ಹಲ್ಲೆಗೈದು ಜೀಪಿನಲ್ಲಿ ಒಯ್ದಿದ್ದರೆಂದು ಆರೋಪಿಸಲಾಗಿತ್ತು. ಜಾಗದ ವಿಚಾರದಲ್ಲಿ ಸಿವಿಲ್ ಪ್ರಕರಣ ದಾಖಲಾಗಿದ್ದು, ಇದರ ನಡುವೆ ಜಾಗಕ್ಕೆ ಹಾಕಿದ್ದ ಕಬ್ಬಿಣದ ಬೇಲಿ ಕಳವಾಗಿದೆಯೆಂದು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಲಾಗಿತ್ತು.
ಕುಲದೀಪ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದ್ದರಿಂದ ಅವರನ್ನು ಠಾಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದರು. ಆದರೆ ಠಾಣೆಗೆ ಆಗಮಿಸದ ಕಾರಣಕ್ಕೆ ಡಿ.3ರಂದು ಸುತೇಶ್ ಕುಮಾರ್ ನೇತೃತ್ವದ ಪೊಲೀಸರು ಮನೆಗೆ ಬಂದಿದ್ದು, ತಾನೊಬ್ಬ ವಕೀಲನೆಂದು ಹೇಳಿಕೊಂಡರೂ ಕೇಳದೆ ಎರಡೇಟು ಬಿಗಿದು ಎಳೆದೊಯ್ದಿದ್ದರು. ಇದರ ವಿಡಿಯೋವನ್ನು ಮನೆಯವರು ಮಾಡಿದ್ದರಿಂದ ಪೊಲೀಸರ ದೌರ್ಜನ್ಯಕ್ಕೆ ಸಾಕ್ಷಿ ಎಂದು ಬಿಂಬಿಸಲಾಗಿತ್ತು. ಇದರ ಬೆನ್ನಲ್ಲೇ ವಕೀಲನ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆಂದು ಮರುದಿನವೇ ಬಂಟ್ವಾಳ ನ್ಯಾಯಾಲಯದ ಮುಂದೆ ವಕೀಲರು ಪ್ರತಿಭಟನೆ ನಡೆಸಿದ್ದರು.
ಆನಂತರ, ಮಂಗಳೂರಿನಲ್ಲಿಯೂ ಬಾರ್ ಕೌನ್ಸಿಲ್ ಸದಸ್ಯರು ಖಂಡನೆ ವ್ಯಕ್ತಪಡಿಸಿ ಪ್ರತಿಭಟನೆಯನ್ನೂ ನಡೆಸಿದ್ದರು. ಪೊಲೀಸ್ ದೌರ್ಜನ್ಯ ಎಸಗಿದ ಎಸ್ಐ ಸುತೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಈ ನಡುವೆ, ದಕ್ಷಿಣ ಕನ್ನಡ ಎಸ್ಪಿ ಋಷಿಕೇಶ್ ಸೋನವಾಣೆ, ಪುಂಜಾಲಕಟ್ಟೆ ಎಸ್ಐ ಹುದ್ದೆಯಿಂದ ಸುತೇಶ್ ಅವರನ್ನು ಎಸ್ಪಿ ಕಚೇರಿಗೆ ವರ್ಗಾವಣೆಗೊಳಿಸಿ ತನಿಖೆಗೆ ಆದೇಶ ಮಾಡಿದ್ದರು. ವಕೀಲರ ಸಂಘದವರು ಪಟ್ಟು ಬಿಡದೆ, ಡಿ.10ರಂದು ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೂ ದೂರು ನೀಡಿದ್ದರು. ದೌರ್ಜನ್ಯ ಎಸಗಿದ ಎಸ್ಐ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ ಮಾಡಿದ್ದರು. ಇದೀಗ ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ, ಇಲಾಖಾ ತನಿಖೆ ಬಾಕಿಯಿರಿಸಿ ಎಸ್ಐ ಸುತೇಶ್ ಕುಮಾರ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.
Mangalore Atrocity on lawyer in Punjalkatte, Police SI Suthesh suspended. Sutesh and his team of policemen from Punjalkatte police station were accused of disrobing the advocate and taking him away from his house following a complaint of theft filed against latter by his neighbour on December 2. Advocates from the city and other parts of the state had demanded action against Mr. Sutesh
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm