ಬ್ರೇಕಿಂಗ್ ನ್ಯೂಸ್
10-12-22 01:01 pm Mangaluru Correspondent ಕರಾವಳಿ
ಉಳ್ಳಾಲ, ಡಿ.10: ನಟಿ ರಕ್ಷಿತಾ ಪ್ರೇಮ್ ಸಲಹೆ ಮೇರೆಗೆ ಕರಾವಳಿಯ ಕಾರಣಿಕ ಶಕ್ತಿ ಕೊರಗಜ್ಜ ದೈವದ ಆದಿಸ್ಥಳ ಕುತ್ತಾರಿನ ಸ್ಥಾನಕ್ಕೆ ನಟ ಶಿವರಾಜ್ ಕುಮಾರ್ ಕುಟುಂಬ ಸಮೇತ ಭೇಟಿ ನೀಡಿದ್ದು ದೈವದ ಆಶೀರ್ವಾದ ಕೋರಿದ್ದಾರೆ.
ತಾನು ನಟಿಸಿರುವ ವೇದ ಸಿನಿಮಾದ ಪ್ರಚಾರಕ್ಕಾಗಿ ಮಂಗಳೂರಿಗೆ ಆಗಮಿಸಿರುವ ಶಿವರಾಜ್ ಕುಮಾರ್ ಇಂದು ಮೊದಲ ಬಾರಿಗೆ ಪತ್ನಿ ಗೀತಾ ಹಾಗೂ ಕುಟುಂಬಸ್ಥರೊಂದಿಗೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇಂದು ಸಂಜೆ ಪಣಂಬೂರು ಬೀಚ್ ನಲ್ಲಿ ನಡೆಯಲಿರುವ ವೇದ ಸಿನಿಮಾದ ಫ್ರೀ ರಿಲೀಸ್ ಇವೆಂಟ್ ಗೆ ಶಿವರಾಜ್ ಆಗಮಿಸಿದ್ದು ನಟಿ ರಕ್ಷಿತಾ ಪ್ರೇಮ್ ಸಲಹೆಯ ಮೇರೆಗೆ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿರುವುದಾಗಿ ಅವರು ಹೇಳಿದರು.
ಇವತ್ತು ವೇದಾ ಈವೆಂಟ್ ಇರೋ ಕಾರಣ ಮಂಗಳೂರಿಗೆ ಬಂದಿದ್ದೇನೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಕೊರಗಜ್ಜ ಕ್ಷೇತ್ರಕ್ಕೆ ಬಂದಿದ್ದೇನೆ. ಕೊರಗಜ್ಜನ ಕ್ಷೇತ್ರದ ಕಾರಣಿಕದ ಬಗ್ಗೆ ನನಗೆ ರಕ್ಷಿತಾ ಅನೇಕ ಬಾರಿ ಹೇಳಿದ್ದರು. ಮನುಷ್ಯನ ಸಮಸ್ಯೆಯನ್ನ ಬಹಳ ಸರಳವಾಗಿ ಹೇಳುವ ರೀತಿ ಈ ಕ್ಷೇತ್ರದ್ದಾಗಿದೆ. ಯಾವುದೇ ಆಡಂಬರ ಇಲ್ಲದೇ ಜನರು ಪ್ರಾರ್ಥನೆ ಮಾಡಲು ಇಲ್ಲಿ ಅವಕಾಶ ಇದೆ. ಕೊರಗಜ್ಜನಿಗೆ ವೀಳ್ಯದೆಲೆ ಮತ್ತು ಶರಾಬು ಕೊಟ್ಟು ಪ್ರಾರ್ಥನೆ ಮಾಡುವ ಸರಳ ವಿಧಾನ ಖುಷಿ ಕೊಟ್ಟಿತು. ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ, ಆಗೋದು ಬಿಡೋದು ದೈವದ ಇಚ್ಛೆ, ದೈವದೆದುರು ಶ್ರದ್ಧೆಯಿಂದ ಬೇಡುವುದು ನಮ್ಮ ಕಾರ್ಯ ಎಂದರು.
ರಕ್ಷಿತಾ ಪ್ರೇಮ್ ಅವರು ಈ ಹಿಂದೆ ಕುತ್ತಾರಿಗೆ ಆಗಮಿಸಿ ಕೊರಗಜ್ಜನಿಗೆ ಹರಕೆ ಸಲ್ಲಿಸಿದ್ದರು.
Mangalore actor Shivarajkumar visits kuttar Koragajja Temple offer prayer. As per advice of actress Rakshitha prem Shivarajkumar agreed to visit temple.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm