ಬ್ರೇಕಿಂಗ್ ನ್ಯೂಸ್
08-12-22 11:04 pm Udupi Correspondent ಕರಾವಳಿ
ಉಡುಪಿ, ಡಿ.8: ಬದಿಯಡ್ಕದ ವೈದ್ಯ ಡಾ.ಕೃಷ್ಣಮೂರ್ತಿ ಶವ ರೈಲು ಹಳಿಯಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ಪೊಲೀಸರು ತನಿಖೆ ಪೂರ್ತಿಗೊಳಿಸಿದ್ದಾರೆ. ತನಿಖೆಯಲ್ಲಿ ವೈದ್ಯರದ್ದು ಬಹುತೇಕ ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.
ನ.8ರಂದು ಕೃಷ್ಣಮೂರ್ತಿ, ಕಾಸರಗೋಡಿನಿಂದ ಮಂಗಳೂರಿಗೆ ಬಂದು ಅಲ್ಲಿಂದ ಉಡುಪಿ, ಕುಂದಾಪುರಕ್ಕೆ ಬಸ್ ನಲ್ಲಿ ತೆರಳಿರುವುದು ವಿವಿಧ ಕಡೆಯ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದಾಗ ಕಂಡುಬಂದಿದೆ. ಮಂಗಳೂರಿನಿಂದ ಕುಂದಾಪುರಕ್ಕೆ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಆಗಮಿಸಿದ್ದು, ಮಧ್ಯಾಹ್ನ 12.30ಕ್ಕೆ ಕುಂದಾಪುರ ಶಾಸ್ತ್ರಿ ಸರ್ಕಲ್ ನಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆನಂತರ ದ್ವಾರಕಾ ಹೊಟೇಲ್ ಗೆ ತೆರಳಿರುವುದು ಕಂಡುಬಂದಿದೆ.
ವೈದ್ಯರು ಒಬ್ಬಂಟಿಯಾಗಿಯೇ ನಡೆದುಕೊಂಡು ಹೋಗುವುದು, ಮಂಗಳೂರಿನ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವುದು ಕಂಡುಬಂದಿದೆ. ಒಂದು ಬ್ಯಾಗ್ ಹಾಕ್ಕೊಂಡು ಒಬ್ಬಂಟಿಯಾಗೇ ತೆರಳುತ್ತಿದ್ದರು. ಈ ನಡುವೆ, ಬದಿಯಡ್ಕದಿಂದ ಹೊರಡುವಾಗ ಇದ್ದ ಅಂಗಿಯ ಬದಲು ಶವದಲ್ಲಿ ಬೇರೆ ಅಂಗಿ ಇದ್ದುದರಿಂದ ಶಂಕೆ ವ್ಯಕ್ತವಾಗಿತ್ತು. ನಡುವೆ ಶರ್ಟ್ ಬದಲಾವಣೆ ಮಾಡಿದ್ದರೇ ಎನ್ನುವ ಬಗ್ಗೆ ಪೊಲೀಸರು ಸಿಸಿಟಿವಿಗಳನ್ನು ಗಮನಿಸುತ್ತಿದ್ದಾರೆ. ಆದರೆ ಜೊತೆಗಿದ್ದ ಬ್ಯಾಗ್ ಪೊಲೀಸರಿಗೆ ಲಭಿಸಿಲ್ಲ. ಅಲ್ಲದೆ, ಅವರು ಧರಿಸಿದ್ದ ಬೆಲ್ಟ್ ಮತ್ತು ವಾಚ್ ಪ್ರತ್ಯೇಕವಾಗಿ ಸಿಕ್ಕಿದ್ದು ವೈದ್ಯರೇ ಅದನ್ನು ಬೇರೆ ಬೇರೆ ಕಡೆ ಹಾಕಿದ್ದರೇ ಎಂಬ ಶಂಕೆಯಿದೆ. ಅಲ್ಲದೆ, ವೈದ್ಯರು ಬದಿಯಡ್ಕದಲ್ಲಿ ಹಾಕ್ಕೊಂಡು ಹೋಗಿದ್ದ ಶರ್ಟ್ ಎಲ್ಲಿಟ್ಟಿದ್ದಾರೆ ಎಂಬ ಬಗ್ಗೆಯೂ ಸರಿಯಾದ ಮಾಹಿತಿ ದೊರೆತಿಲ್ಲ.
ಕೃಷ್ಣಮೂರ್ತಿಯವರು ಕುಂದಾಪುರದ ಶಾಸ್ತ್ರಿ ಸರ್ಕಲ್ ನಿಂದ ರೈಲ್ವೇ ಸ್ಟೇಶನ್ ಬಳಿಗೆ ತೆರಳುವ ಹಾದಿಯಲ್ಲಿ ಇಬ್ಬರನ್ನು ಮಾತನಾಡಿಸಿದ್ದು ಏನೋ ಮಾಹಿತಿ ಕೇಳಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಶವ ದೊರೆತ ಬಳಿಕ ಮಣಿಪಾಲದಲ್ಲಿ ಪೋಸ್ಟ್ ಮಾರ್ಟಂ ನಡೆಸಿದ್ದು ಅದರ ವರದಿ ಇನ್ನೂ ಬಂದಿಲ್ಲ. ಘಟನೆ ಬಗ್ಗೆ ಫಾರೆನ್ಸಿಕ್ ವರದಿ ಬಂದ ಬಳಿಕ ಅದನ್ನು ತಾಳೆಹಾಕಿ ಪೊಲೀಸರು ನಿರ್ಧಾರಕ್ಕೆ ಬರಲಿದ್ದಾರೆ. ಆಸ್ತಿ ವಿಚಾರದಲ್ಲಿ ವಿವಾದ ಮತ್ತು ಮಹಿಳೆಯನ್ನು ಮುಂದಿಟ್ಟು ಟ್ರಾಪ್ ಮಾಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ತನಿಖೆ ನಡೆಸುತ್ತಿದ್ದು, ಐದು ಮಂದಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
The investigation of finding the mortal remains of dentist of Badiyadka Dr Krishnamurthy on the railway tracks near Kundapur is almost over. High sources in the police have confirmed that this is a case of suicide. However, Kasargod police have continued their investigation. The deceased doctor, who went to Kundapur from Mangaluru KSRTC bus stand at around 12.30 pm on November 8 arrived at Shastri Circle of Kundapur. Then he went to Dwaraka Hotel in the town.
03-04-26 04:14 pm
HK News Staffer
ಬಾಗಲಕೋಟ, ದಾವಣಗೆರೆ ಉಪ ಚುನಾವಣೆ; ಗೆಲುವು ಕಷ್ಟ- ಗು...
03-04-26 03:48 pm
ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಕುಮಾರಸ್ವಾಮಿ- ಎಡಿಜ...
02-04-26 09:31 pm
ನಾನು ಮುಖ್ಯಮಂತ್ರಿಯಾಗಿ ಮುಸ್ಲಿಂ ಅಲ್ಪಸಂಖ್ಯಾತ ಮೀಸಲ...
02-04-26 08:07 pm
ತಮಿಳುನಾಡು ಚುನಾವಣೆಗೆ 44 ಮೀಸಲು ಕ್ಷೇತ್ರದಿಂದ ಕ್ರಿ...
02-04-26 08:03 pm
03-04-26 07:52 pm
HK News Staffer
50 ವರ್ಷಗಳ ಬಳಿಕ ಮಾನವ ಸಹಿತ ಚಂದ್ರಯಾನ; ಅಮೆರಿಕ, ಕೆ...
03-04-26 07:35 am
ಚಿಂತಿಸಬೇಡಿ, ನಿಮ್ಮ ಹಡಗು ಸುರಕ್ಷಿತ; ಹಾರ್ಮುಜ್ ಜಲಸ...
02-04-26 10:24 pm
ಇರಾನ್ ಕದನವಿರಾಮ ಕೇಳುತ್ತಿದೆ, ಒಪ್ಪದಿದ್ದರೆ ಶಿಲಾಯು...
01-04-26 11:03 pm
ಇರಾನ್ ಮೇಲೆ ಅಣ್ವಸ್ತ್ರ ದಾಳಿಗೆ ಅಮೆರಿಕ ಸಿದ್ಧತೆ; ವ...
01-04-26 12:46 pm
03-04-26 11:43 am
HK News Staffer
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
04-04-26 11:32 am
HK News Staffer
ಮೂರನೇ ಮಗುವೂ ಹೆಣ್ಣಾಗುತ್ತದೆಂದು ಗರ್ಭಿಣಿ ಪತ್ನಿ, ಇ...
03-04-26 11:00 pm
ಜಿಮ್ ಸೆಂಟರ್ ನೆಪದಲ್ಲಿ ಲವ್ ಜಿಹಾದ್! ಜಿಮ್ ಟ್ರೈ...
03-04-26 10:53 pm
ಮೆಲ್ಕಾರ್ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ;...
01-04-26 02:54 pm
ಕುಂಜತ್ ಬೈಲಿನಲ್ಲಿ ಫಲ್ಗುಣಿ ನದಿಗೆ ಬಿದ್ದು ಇಬ್ಬರು...
01-04-26 02:16 pm