ಬ್ರೇಕಿಂಗ್ ನ್ಯೂಸ್
25-11-22 07:00 pm Mangalore Correspondent ಕರಾವಳಿ
ಮಂಗಳೂರು, ನ.25 : ದಕ್ಷಿಣ ಕನ್ನಡ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋ ರಿಕ್ಷಾ ಪ್ರಯಾಣ ದರವನ್ನು ಹೆಚ್ಚಳ ಮಾಡಿ ಆದೇಶ ಮಾಡಿದೆ. ಈ ಹಿಂದೆ ಇದ್ದ 25 ರೂ. ಕನಿಷ್ಠ ದರವನ್ನು 35 ರೂ.ಗೆ ಹೆಚ್ಚಿಸಲಾಗಿದೆ.
ಆಟೋ ರಿಕ್ಷಾ ಚಾಲಕರ ಬೇಡಿಕೆ ಪರಿಗಣಿಸಿ, ಈ ಹಿಂದೆ 2020ರ ಫೆಬ್ರವರಿ 27ರಂದು ನಿಗದಿ ಪಡಿಸಿದ ಆಟೋರಿಕ್ಷಾ ದರಗಳನ್ನು ಪುನರ್ ಪರಿಷ್ಕರಿಸಲಾಗಿದೆ. 2022ರ ಡಿಸೆಂಬರ್ 01ರಿಂದ ಜಾರಿಗೆ ಬರುವಂತೆ ಹೊಸ ದರವನ್ನು ನಿಗದಿ ಪಡಿಸಿದೆ.
ಮೊದಲ 1.5 ಕಿ.ಮೀ. ಕನಿಷ್ಠ ದರ 35 ರೂ. (ಗರಿಷ್ಠ 3 ಜನ ಪ್ರಯಾಣಿಕರು), ನಂತರದ ಪ್ರತಿ ಕಿ.ಮೀ. ದರ 20 ರೂ. (ಗರಿಷ್ಠ 3 ಜನ ಪ್ರಯಾಣಿಕರು), ಕಾಯುವಿಕೆ ದರ ಮೊದಲ 15 ನಿಮಿಷ ಉಚಿತ, ನಂತರದ 15 ನಿಮಿಷದ ವರೆಗೆ 5 ರೂ., ಪ್ರಯಾಣಿಕರ ಸರಕಿಗೆ (ಲಗೇಜ್) ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಜೊತೆ ಇರಬೇಕು. ಮೊದಲ 20 ಕಿ.ಗ್ರಾಂ. ಗಳಿಗೆ ಉಚಿತ ಹಾಗೂ ನಂತರದ ಪ್ರತಿ 10 ಕಿ.ಗ್ರಾಂ. ಅಥವಾ ಅದರ ಭಾಗಕ್ಕೆ 5 ರೂ. ನಿಗದಿ ಮಾಡಲಾಗಿದೆ. ರಾತ್ರಿ ವೇಳೆ 10 ಗಂಟೆಯಿಂದ ಬೆಳಗಿನ ಜಾವ 5ರ ವರೆಗೆ ಮಾತ್ರ ಈ ಮೇಲಿನ ದರದ ಒಂದೂವರೆ ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶವಿದೆ.
2022ರ ಡಿಸೆಂಬರ್ 01ರಿಂದ ಒಂದು ತಿಂಗಳೊಳಗೆ ಎಲ್ಲಾ ಆಟೋ ರಿಕ್ಷಾ ಫೇರ್ ಮೀಟರ್ನಲ್ಲಿ ಹೊಸ ದರ ಅಳವಡಿಸಿಕೊಂಡು ತೂಕ ಮತ್ತು ಮಾಪನ ಶಾಸ್ತ್ರ ಇಲಾಖೆಯಿಂದ ದೃಢೀಕರಿಸಿಕೊಳ್ಳಬೇಕು. ಅಲ್ಲದೆ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಿದ ದರ ಪಟ್ಟಿಯನ್ನು ಪ್ರತಿ ಆಟೋ ರಿಕ್ಷಾಗಳಲ್ಲಿಯೂ ಪ್ರದರ್ಶಿಸಬೇಕು. ಪ್ರಯಾಣಿಕರು ಪ್ರಯಾಣಿಸುವ ಸ್ಥಳಗಳಿಗೆ ಹೋಗಲು ನಿರಾಕರಿಸಿದಲ್ಲಿ ಹಾಗೂ ಸಾರ್ವಜನಿಕ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದಲ್ಲಿ ಅಂತಹ ಆಟೋ ಚಾಲಕರ ವಿರುದ್ಧ ಕಾನೂನಿನಂತೆ ದಂಡ ವಿಧಿಸುವುದು, ಪರವಾನಿಗೆ ಅಮಾನತ್ತು, ರದ್ದತಿ ಕುರಿತು ಕ್ರಮ ಕೈಗೊಳ್ಳುವುದು ಹಾಗೂ ಇತರೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಅಧಿಕ ದರ ವಸೂಲು ಮಾಡಿದಲ್ಲಿ ಮಂಗಳೂರು ಕಚೇರಿ ದೂ. ಸಂಖ್ಯೆ: 0824-2220577, ಪುತ್ತೂರು ದೂ.ಸಂ: 08251-230729, ಹಾಗೂ ಬಂಟ್ವಾಳ ದೂ.ಸಂ: 08255-280504 ಅವರಿಗೆ ಸಾರ್ವಜನಿಕರು ದೂರುಗಳನ್ನು ನೀಡುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
District regional transport authority revised the fare of auto rickshaws in the district. The new rates will be effective from December 1. Minimum fare for 1.5 km is fixed at Rs 35 (maximum three passengers). After 1.5 km, Rs 20 is fixed for every additional kilometre. Waiting charges will be free for the first 15 minutes. The next 15 minutes will be charged at Rs five.
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm